ಬಾಲಿವುಡ್ ನಟ ಮನೋಜ್ ಬಾಜಪೇಯಿ ಸಿನಿಮಾ ಲೋಕದಲ್ಲಿ ತಮ್ಮ ಲಕ್ ಕುದುರಿಸಿದ ಸಿನಿಮಾದ 22ನೇ ವರ್ಷದ ಖುಷಿಯನ್ನು ಹಂಚಿಕೊಂಡಿದ್ದಾರೆ. ಸತ್ಯ ಸಿನಿಮಾದ 22ನೇ ವರ್ಷದ ಖುಷಿಯಲ್ಲಿರುವ ಅವರು, ತಮ್ಮ ಬಿಕು ಮಾಠ್ರೆ ಪಾತ್ರದ ಫೋಟೋ ಶೇರ್ ಮಾಡಿ, ನನ್ನ ಬದುಕು ಬದಲಾಯಿತು ಎಂದಿದ್ದಾರೆ.

1998ರ ಜುಲೈ 3ರನ್ನು ಮರೆಯಲು ಸಾಧ್ಯವಿಲ್ಲ.ಮಳೆಗಾ.. ಎಲ್ಲರೂ ಫ್ಲಾಪ್ ಆಗಬಹುದೆಂದುಕೊಂಡಿದ್ದ ಸಿನಿಮಾ ದೊಡ್ಡ ಹಿಟ್ ಆಗಿ ಮೂಡಿ ಬಂದಿತ್ತು.. 25 ವಾರಗಳ ಕಾಲ ಓಡಿತು ಎಂದು ಬರೆದಿದ್ದಾರೆ.

ಲಾಕ್‌ಡೌನ್‌ನಲ್ಲೇ ಬಿಗ್‌ಬಾಸ್ ಜೋಡಿ ಮದುವೆ..? ಫ್ಯಾನ್‌ ಶಾಕ್

ಸತ್ಯ ಒಂದು ಗ್ಯಾಂಗ್‌ಸ್ಟರ್ ಸಿನಿಮಾ.  ರಾಮ್‌ ಗೋಪಾಲ್ ವರ್ಮ ಇದನ್ನು ನಿರ್ದೇಶಿಸಿದ್ದರು. ಅಔರಭ ಶುಕ್ಲಾ ಹಾಗೂ ಅನುರಾಗ ಕಷ್ಯಪ್ ಬರೆದಿದ್ದರು. ಈ ಸಿನಿಮಾ ಮೂಲಕವೇ ಮನೋಜ್ ಬೆಸ್ಟ್ ಸಪೋರ್ಟಿಂಗ್ ಆfಕ್ಟರ್ ಅವಾರ್ಡ್ ಪಡೆದಿದ್ದರು.

ವಲಸಿಗನೊಬ್ಬ ಮುಂಬೈಗೆ ಕೆಲಸ ಹುಡುಕಿಕೊಂಡು ಬಂದು ಬಿಕು ಮಾಠ್ರೆ ಜೊತೆ ಸ್ನೇಹ ಬೆಳೆಸುತ್ತಾನೆ. ನಂತರ ಅವರಿಬ್ಬರೂ ಅಂಡರ್ ವಲ್ರ್ಡ್ ಆಳುತ್ಥಾರೆ. ಮನೋಜ್ ಹಾಗೂ ಶಿಫಾಲಿ ಶಾ ನಟಿಸಿದ ಸಪ್ನೇ ಮೇ ಮಿಲ್ತೀ ಹೇ ಹಾಡು ಇಂದು ಫೇಮಸ್. ಸತ್ಯ ಸಿನಿಮಾದ ನಂತರ ನನಗೆ ಸಾಕಷ್ಟು ಆಫರ್‌ಗಳು ಬಂದವು. ನಿರ್ಮಾಪಕರು ನನ್ನ ಮನೆ ಮುಂದೆ ನಿಂತರು ಎಂದಿದ್ದಾರೆ.