ಈ ವರ್ಷ ಅರ್ಧಕ್ಕರ್ಧ ಮಾವಿನ ಫಸಲು ಕುಂಠಿತ
ಈ ವರ್ಷ ಕಳದ ವರ್ಷಕ್ಕಿಂತ ಅರ್ಧಕ್ಕರ್ಧ ಮಾವಿನ ಫಸಲು ಇಳಿಮುಖವಾಗಿದೆ. ಭಾರೀ ಕುಠಿತವಾಗಿದೆ.
ಬೆಂಗಳೂರು[ಮಾ.16] : ವಾತಾವರಣದಲ್ಲಿನ ಏರುಪೇರಿನಿಂದಾಗಿ ಪ್ರಸಕ್ತ ವರ್ಷದಲ್ಲಿ ರಾಜ್ಯದಲ್ಲಿ ಮಾವಿನ ಫಸಲು ಇಳಿಮುಖವಾಗಿದ್ದು, ರಾಜ್ಯದಲ್ಲಿ ಶೇ.50ರಷ್ಟುಮಾವಿನ ಉತ್ಪಾದನೆ ಕಡಿಮೆಯಾಗಿದೆ. ರಾಜ್ಯದಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದ ಬೆಳೆಯಲ್ಲಿ ಸಾಮಾನ್ಯವಾಗಿ ಪ್ರತಿ ವರ್ಷ 14 -15 ಲಕ್ಷ ಟನ್ ಮಾವು ಉತ್ಪಾದನೆಯಾಗುತ್ತಿತ್ತು.
ಆದರೆ, ಈ ವರ್ಷ ಚಳಿಯ ಪ್ರಮಾಣ ಹೆಚ್ಚಾಗಿಲ್ಲದ ಕಾರಣ ಹೂವು ಬಿಡುವುದು ತಡವಾಗಿದೆ. ಅಲ್ಲದೆ, ಮಾವಿನ ಹೂವಿಗೆ ತೆನೆ ಕೊರಕ ಬಾಧೆ, ಜಿಗಿಹುಳ ಮತ್ತು ಬೂದಿ ರೋಗಗಳು ಬೆಳೆಯನ್ನು ಮತ್ತಷ್ಟುಹಾಳು ಮಾಡಿವೆ. ಹೀಗಾಗಿ ಈ ಬಾರಿ ಮಾವಿನ ಉತ್ಪಾದನೆಯಲ್ಲಿ ಭಾರೀ ಕಡಿಮೆಯಾಗಲಿದೆ.
1 ಡಜನ್ ಆಲ್ಫಾನ್ಸೋ ಮಾವಿನ ದರ 1 ಸಾವಿರ ರೂ.: ಹೌಹಾರಿದ ಗ್ರಾಹಕ!..
ರಕ್ಷಣೆಗೆ ತರಬೇತಿ: ತಡವಾಗಿ ಬಿಟ್ಟಹೂವಿಗೆ ಕಾಲ ಕಾಲಕ್ಕೆ ಅಗತ್ಯ ಔಷಧಿಗಳನ್ನು ಸಿಂಪಡಿಸಿ, ಹೂವು ಉದುರುವುದನ್ನು ತಡೆಯಬೇಕು. ಇಲ್ಲದಿದ್ದರೆ ಬಿಟ್ಟಹೂವಿಗೆ ತೆನೆ ಕೊರಕ, ಬೂದಿರೋಗ, ಜಿಗಿಹುಳದ ಬಾಧೆಯಿಂದ ಮತ್ತಷ್ಟುನಷ್ಟಹೊಂದಬೇಕಾಗುತ್ತದೆ. ಹೀಗಾಗಿ ಮಾವು ಹೂವಿನಿಂದ ಹಣ್ಣಿನವರೆಗೆ, ನಂತರ ಗ್ರಾಹಕರ ಕೈ ಸೇರುವವರೆಗೆ ಬೆಳೆಯನ್ನು ಹೇಗೆ ಆರೈಕೆ ಮಾಡಬೇಕು.
ಗುಣಮಟ್ಟದ ಹಣ್ಣನ್ನು ಉತ್ಪಾದಿಸುವುದು ಹೇಗೆ, ಮಾರುಕಟ್ಟೆಹೇಗೆ ಎಂಬುದರ ಬಗ್ಗೆ ಮಾವು ಅಭಿವೃದ್ಧಿ ಮಂಡಳಿಯು ಬೆಳೆಗಾರರಿಗೆ ಜನವರಿಯಿಂದಲೇ ಮಾವು ಬೆಳೆಯುವ ಜಿಲ್ಲೆಗಳಲ್ಲಿ ತರಬೇತಿಗಳನ್ನು ನೀಡುತ್ತಿದೆ. ಕರಪತ್ರಗಳನ್ನು ಮಾಡಿ, ಅವುಗಳನ್ನು ರೈತರಿಗೆ ವಿತರಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ. ನಾಗರಾಜ್ ತಿಳಿಸಿದ್ದಾರೆ.