ದಾಖಲಾತಿ ನಡೆಸಿದರೂ ಸದ್ಯಕ್ಕಿಲ್ಲ ಕಾಲೇಜು ತರಗತಿ!

  •  ವರ್ಷಂಪ್ರತಿ ಜೂನ್‌ನಲ್ಲಿ ಆರಂಭವಾಗುತ್ತಿದ್ದ ಪದವಿ ತರಗತಿ 
  • ಅ.29ರಿಂದ ಪದವಿ ತರಗತಿ ಆರಂಭಿಸಲು ಸಭೆ ನಡೆಸಿದ ವಿವಿ ಈಗ ಮತ್ತೆ ತರಗತಿ ಆರಂಭವನ್ನು ನ.8ಕ್ಕೆ ಮುಂದೂಡಿದೆ
Mangaluru VV will  re open Colleges  from November 8th  snr

 ವರದಿ :  ಆತ್ಮಭೂಷಣ್‌

 ಮಂಗಳೂರು (ಅ.24):  ವರ್ಷಂಪ್ರತಿ ಜೂನ್‌ನಲ್ಲಿ ಆರಂಭವಾಗುತ್ತಿದ್ದ ಪದವಿ ತರಗತಿ (Class) ಈ ಬಾರಿ ಅಕ್ಟೋಬರ್‌ ಕೊನೆ ಹಂತಕ್ಕೆ ಬಂದರೂ ಶುರುವಾಗಿಲ್ಲ. ಖಾಸಗಿ ಸ್ವಾಯತ್ತ ಶಿಕ್ಷಣ ಸಂಸ್ಥೆಗಳು (Education Institution) ಪದವಿ ತರಗತಿ ಆರಂಭಿಸಿವೆ, ಆದರೆ ಕೊಡಗು, ದ.ಕ (Dakshna Kannada). ಹಾಗೂ ಉಡುಪಿ (Udupi) ಜಿಲ್ಲಾ ವ್ಯಾಪ್ತಿ ಹೊಂದಿರುವ ಮಂಗಳೂರು ವಿಶ್ವವಿದ್ಯಾಲಯಕ್ಕೆ (Mangaluru VV) ಇನ್ನೂ ಸಮಯ ಕೂಡಿಬಂದಿಲ್ಲ. ಅ.29ರಿಂದ ಪದವಿ ತರಗತಿ ಆರಂಭಿಸಲು ಸಭೆ ನಡೆಸಿದ ವಿವಿ ಈಗ ಮತ್ತೆ ತರಗತಿ ಆರಂಭವನ್ನು ನ.8ಕ್ಕೆ ಮುಂದೂಡಿದೆ. ವಿವಿ ಆಡಳಿತದ ಈ ಕ್ರಮದಿಂದ ಪದವಿ ತರಗತಿಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು (Students) ಕಾಯುವ ಪರಿಸ್ಥಿತಿ ಉಂಟಾಗಿದೆ. ಇಷ್ಟೆಲ್ಲ ವಿಳಂಬಕ್ಕೆ ಕಾರಣ ಕೇಂದ್ರ ಸರ್ಕಾರ (Central Govt) ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ(NEP) ಬಗ್ಗೆ ಇನ್ನೂ ವಿವಿ ಆಡಳಿತ ಸ್ಪಷ್ಟತೆ ಹೊಂದದೇ ಇರುವುದು!

ಕೋವಿಡ್‌ (Covid) ಮಾರ್ಗಸೂಚಿಯಂತೆ ಪದವಿ ತರಗತಿ ಕೂಡ ನಡೆಸುವಂತೆ ಸರ್ಕಾರ ನಿರ್ದೇಶನ ನೀಡಿ ತಿಂಗಳು ಕಳೆದರೂ ವಿವಿಗೆ ತರಗತಿ ಆರಂಭಿಸಲು ಸಾಧ್ಯವಾಗುತ್ತಿಲ್ಲ. ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯನ್ನು (Education Policy) ಈ ಶೈಕ್ಷಣಿಕ ಸಾಲಿನಿಂದಲೇ ಪ್ರಾರಂಭಿಸುವುದಾಗಿ ವಿವಿ ಆಡಳಿತ ಸಾಕಷ್ಟುಮೊದಲೇ ಹೇಳಿದೆ. ಆದರೆ ಹೊಸ ಶಿಕ್ಷಣ ನೀತಿ ಬಗ್ಗೆ ಸ್ಪಷ್ಟತೆ ಇಲ್ಲದೆ ವಿವಿ ತರಗತಿ ಆರಂಭಿಸಲು ಹಿಂದೇಟು ಹಾಕುತ್ತಿದೆ ಎಂದು ಸಾರ್ವಜನಿಕವಾಗಿ ದೂರು ಕೇಳಿಬರುತ್ತಿದೆ.

ಅ. 25 ರಿಂದ 1-5 ನೇ ಕ್ಲಾಸ್ ಶುರು, ಶಿಕ್ಷಣ ಇಲಾಖೆಗೆ ತಲೆನೋವು ತಂದ ತಜ್ಞರ ಸಲಹೆಗಳು

ಅಂತಿಮವಾಗದ ಸಿಲೆಬಸ್‌:  ಹೊಸ ಶಿಕ್ಷಣ ನೀತಿಯಡಿ ಈ ಸಾಲಿನ ಶೈಕ್ಷಣಿಕ ವರ್ಷ ಆರಂಭಿಸಲು ಹೊರಟಿರುವ ವಿವಿಗೆ ಸಿಲೆಬಸ್‌ ಏನು? ಪಠ್ಯ ಯಾವುದು? ಪರೇಡ್‌ ಎಷ್ಟು? ಹೀಗೆ ಯಾವ ಪ್ರಶ್ನೆ ಕೇಳಿದರೂ ಸಿದ್ಧ ಉತ್ತರ ಇಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯಡಿ ತರಗತಿ ಆರಂಭಿಸಲು ಇನ್ನೂ ಮಂಗಳೂರು ವಿವಿ ಪೂರ್ವಸಿದ್ಧತೆ ಮಾಡಿಕೊಂಡಿಲ್ಲ. ಇದರಿಂದಾಗಿ ನ.8ರಿಂದ ಪದವಿ ಕಾಲೇಜುಗಳು ಆರಂಭ ಎಂದು ಹೇಳುತ್ತರಾದರೂ ಈ ಬಗ್ಗೆ ಅಧಿಕೃತ ಆದೇಶ ವಿವಿ ವ್ಯಾಪ್ತಿಯ ಯಾವುದೇ ಕಾಲೇಜುಗಳಿಗೆ ತಲುಪಿಲ್ಲ.

ಈಗಾಗಲೇ ಸ್ವಾಯತ್ತ ಕಾಲೇಜುಗಳಲ್ಲಿ ಪದವಿ ತರಗತಿ ಆರಂಭವಾಗಿ ಪಾಠ ಪ್ರವಚನ ನಡೆಯುತ್ತಿದೆ. ಹೊಸ ಶಿಕ್ಷಣ ನೀತಿಯಡಿ ಇವು ತರಗತಿ ನಡೆಸುತ್ತಿವೆ. ಎಸ್‌ಡಿಎಂ, ಅಲೋಶಿಯಸ್‌, ಆಗ್ನೇಸ್‌ ಕಾಲೇಜುಗಳಲ್ಲಿ ಈಗಾಗಲೇ ಪದವಿ ತರಗತಿ ಆರಂಭಗೊಂಡು ಮೊದಲ ಹಂತದ ತರಗತಿ ಪರೀಕ್ಷೆಗಳು ನಡೆಯುವ ಸನಿಹದಲ್ಲಿವೆ. ಸ್ವಾಯತ್ತ ಕಾಲೇಜುಗಳಿಗೆ ಹೊಸ ಶಿಕ್ಷಣ ನೀತಿಯ ಸಿಲೆಬಸ್‌ ಸಾಧ್ಯ ಎಂದಾದರೆ, ವಿವಿಗೆ ಯಾಕೆ ಸಾಧ್ಯವಾಗುತ್ತಿಲ್ಲ ಎನ್ನುವುದು ವಿವಿ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ.

ವಿವಿ ಕಚೇರಿಯಲ್ಲಿ ಉಡಾಫೆ ವರ್ತನೆ!

ಮಂಗಳೂರು ವಿವಿ ವ್ಯಾಪ್ತಿಯಲ್ಲಿ 207ಕ್ಕೂ ಅಧಿಕ ಖಾಸಗಿ, ಸರ್ಕಾರಿ ಕಾಲೇಜುಗಳು ಇವೆ. ಈ ಕಾಲೇಜುಗಳಲ್ಲಿ ಪ್ರಥಮ ಪದವಿಗೆ ದಾಖಲಾತಿ ನಡೆಸಲಾಗಿದೆ. ಆದರೆ ಕಾಲೇಜು (College) ಆರಂಭಿಸಬೇಕಾದರೆ ತರಗತಿ ವೇಳಾಪಟ್ಟಿಹೇಗೆ ಇರಬೇಕು, ಬೋಧನಾ ಅವಧಿ, ವಿಷಯ ಚಟುವಟಿಕೆಗಳ ಬಗ್ಗೆ ವಿವಿಗೆ ಕರೆ ಮಾಡಿದರೆ ಯಾವುದೇ ಸರಿಯಾದ ಮಾಹಿತಿ ನೀಡುತ್ತಿಲ್ಲ. ವಿವಿ ಕೈಪಿಡಿಯಲ್ಲಿ ವಿವಿ ಕುಲಪತಿಗಳಿಂದ ತೊಡಗಿ ರಿಜಿಸ್ಟ್ರಾರ್‌, ಕುಲಸಚಿವರು, ಕಚೇರಿ ಮುಖ್ಯಸ್ಥರ ದೂರವಾಣಿ ಸಂಪರ್ಕ ಸಂಖ್ಯೆಗಳಿವೆ. ಇವರೆಲ್ಲ ವಿವಿಗೆ ಬೇಕಾದ ಕೆಲಸ ಆಗಬೇಕಿದ್ದರೆ ಅಥವಾ ಕಾಲೇಜುಗಳು ದಾಖಲೆ ಸಲ್ಲಿಸಬೇಕಿದ್ದರೆ ತುರ್ತು ಕರೆ ಮಾಡುತ್ತಾರೆಯೇ ವಿನಃ ಕಾಲೇಜುಗಳಿಂದ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಒಂದು ವೇಳೆ ಕರೆ ಸ್ವೀಕರಿಸಿದರೂ ಬೇಜವಾಬ್ದಾರಿ ಉತ್ತರ ನೀಡುತ್ತಾರೆ, ಇಲ್ಲವೇ ಬೇರೆಯವರ ನಂಬರು ನೀಡಿ ಕೈತೊಳೆದುಕೊಳ್ಳುತ್ತಾರೆ ಎಂದು ಜಿಲ್ಲೆಯ ನೊಂದ ಕಾಲೇಜು ಪ್ರಾಂಶುಪಾಲರೊಬ್ಬರು ಹೇಳುತ್ತಾರೆ.

ಪ್ರತಿ ಜಿಲ್ಲೆಯಲ್ಲೂ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜ್ `ಸೂಪರ್-30'

ನ.6ರಂದು ಹೊಸ ಶೈಕ್ಷಣಿಕ ವರ್ಷ (Educational Year) ಆರಂಭದ ದಿನ ಎಂದು ಈಗ ನಿರ್ಧರಿಸಲಾಗಿದೆ. ನ.8ರಿಂದ ಪ್ರಥಮ, ಮೂರನೇ ಹಾಗೂ ಐದನೇ ಸೆಮಿಸ್ಟರ್‌ ತರಗತಿ ಆರಂಭವಾಗಲಿದೆ. ಈ ಬಗ್ಗೆ ಅ.25ರಂದು ಮಂಗಳೂರು ಪುರಭವನದಲ್ಲಿ ಹೊಸ ಶಿಕ್ಷಣ ನೀತಿ ಅಳವಡಿಕೆ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ವರ್ಷದ ಹೊಸ ನೀತಿಯಡಿ ಕೋರ್ಸ್‌ಗಳ ಕುರಿತು ಡೀಮ್‌್ಡ ಕಾಲೇಜುಗಳ ಜೊತೆ ಸಂವಾದ ಕಾರ್ಯಕ್ರಮವೂ ಏರ್ಪಡಲಿದೆ. ನಾನಾ ಕಾರಣಗಳಿಗೆ ರಜೆ ಬಂದ ಕಾರಣ ವಿವಿ ಸೆಮಿಸ್ಟರ್‌ ಪರೀಕ್ಷೆ ಮುಕ್ತಾಯಗೊಳಿಸಲು ಸಾಧ್ಯವಾಗಿಲ್ಲ. ಈಗ ಅ.19ರಂದು ಮುಂದೂಡಿದ ಪರೀಕ್ಷೆ 29ರಂದು ನಡೆಯಲಿದೆ. ನಂತರ ಮೌಲ್ಯಮಾಪನ ನಡೆದು ಫಲಿತಾಂಶ ಪ್ರಕಟಿಸ ಗುವುದು. ಆ ಬಳಿಕವೇ ಪದವಿ ತರಗತಿಗಳ ಆರಂಭಕ್ಕೆ ದಿನಾಂಕ ನಿಗದಿಪಡಿಸಲಾಗಿದೆ.

-ಡಾ.ಪಿ.ಎಸ್‌.ಯಡಪಡಿತ್ತಾಯ, ಕುಲಪತಿ, ಮಂಗಳೂರು ವಿವಿ

Latest Videos
Follow Us:
Download App:
  • android
  • ios