ಮಂಗಳೂರು (ನ.23):  ಮೈಸೂರು- ಮಂಗಳೂರು ನಡುವೆ ಡಿ.10ರಿಂದ ವಿಮಾನ ಸೇವೆ ಆರಂಭವಾಗುವ ನಿರೀಕ್ಷೆಯಿದೆ. ಏರ್‌ ಇಂಡಿಯಾದ ಅಂಗ ಸಂಸ್ಥೆ ಅಲಯಸ್ಸ್‌ ಏರ್‌ ವಾರದಲ್ಲಿ ನಾಲ್ಕು ದಿನ ಮೈಸೂರು- ಮಂಗಳೂರು ನಡುವೆ ವಿಮಾನ ಹಾರಾಟ ನಡೆಸಲು ಯೋಜಿಸಿದೆ.

ಮೈಸೂರು ನಗರದಲ್ಲಿ ಕರಾವಳಿ ಪ್ರದೇಶದ ಸಾವಿರಾರು ಜನರಿದ್ದು, ವಿಮಾನ ಹಾರಾಟದಿಂದ ಅವರಿಗೆ ಶೀಘ್ರ ಪ್ರಯಾಣಕ್ಕೆ ಅನುಕೂಲವಾಗಲಿದೆ. ಭಾರತೀಯ ವಿಮಾನಯಾನ ಪ್ರಾಧಿಕಾರವು ಮಂಗಳೂರು-ಮೈಸೂರು ನಡುವೆ ವಿಮಾನ ಹಾರಾಟಕ್ಕೆ ಅ.25ರಿಂದಲೇ ಅನುಮತಿ ನೀಡಿತ್ತು. 

ಕಲಬುರಗಿ- ದೆಹಲಿಗೆ 2 ಗಂಟೆ ನೇರ ವಿಮಾನ ಹಾರಾಟ ಆರಂಭ ...

ಕಾರಣಾಂತರಗಳಿಂದಾಗಿ ಡಿಸೆಂಬರ್‌ನಲ್ಲಿ ವಿಮಾನ ಹಾರಾಟ ಆರಂಭವಾಗಲಿದೆ.