Asianet Suvarna News Asianet Suvarna News

Mangaluru: ಅನುಮತಿಯಿಲ್ಲದೇ ಡ್ರೋನ್ ಹಾರಿಸಿದ್ರೆ ಕಾನೂನು ಕ್ರಮ!

ಪೊಲೀಸ್ ಇಲಾಖೆ ಅನುಮತಿ ಪಡೆಯದೇ ಮಂಗಳೂರು ‌ನಗರದಲ್ಲಿ ಡ್ರೋನ್ ಹಾರಿಸಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಮಂಗಳೂರು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Mangaluru city police Legal action against illegal flying of drones gow
Author
First Published Dec 15, 2022, 2:14 PM IST

ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್  

ಮಂಗಳೂರು (ಡಿ.15): ಪೊಲೀಸ್ ಇಲಾಖೆ ಅನುಮತಿ ಪಡೆಯದೇ ಮಂಗಳೂರು ‌ನಗರದಲ್ಲಿ ಡ್ರೋನ್ ಹಾರಿಸಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಮಂಗಳೂರು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ DGCA DIGITAL SKY PLATFORM ನಲ್ಲಿ ರಿಜಿಸ್ಟರ್ ಆಗದೇ ಡ್ರೋನ್ ಉಪಯೋಗಿಸುತ್ತಿರುವುದು ಗಮನಕ್ಕೆ ಬಂದಿರುತ್ತದೆ. ನಗರದಲ್ಲಿ ಸಾಕಷ್ಟು ಕೈಗಾರಿಕೆ, ಪುವಾಸಿ ತಾಣ, ಧಾರ್ಮಿಕ ಕ್ಷೇತ್ರ, ವಿದ್ಯಾ ಸಂಸ್ಥೆ, ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರು, ತೈಲ ಸಂಗ್ರಾಹಣ ಕೇಂದ್ರ ಹಾಗೂ ಇನ್ನಿತರೆ ಸೂಕ್ಷ್ಮ ಪ್ರದೇಶಗಳಿದೆ. ಹೀಗಾಗಿ ಇವುಗಳ ಭದ್ರತೆ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ DGCA ರವರಿಂದ ಪರವಾನಗಿ ಪಡೆದು NANO DRONEನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ವರ್ಗದ ಡೋನ್‌ನ್ನು ಉಪಯೋಗಿಸಲು ಕಮಿಷನರ್ ಕಚೇರಿಯಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಲು ಸೂಚಿಸಲಾಗಿದೆ.

ಒಂದು ವೇಳೆ ಅನುಮತಿ ಇಲ್ಲದೇ ಡೋನ್ ಹಾರಿಸಿದ್ದಲ್ಲಿ ಅವರ ವಿರುದ್ಧ AIRCRAFT ACT 1934 SEC 10, 11, 11A ಹಾಗೂ DRONE RULES 2021 ರ ನಿಯಮ 49 ಮತ್ತು 50 ರಂತೆ ಪುಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವ ಎಚ್ಚರಿಕೆಯನ್ನು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ನೀಡಿದ್ದಾರೆ. 

ಪಂಜಾಬ್‌ ಗಡಿ ಬಳಿ ಮತ್ತೆ ಪಾಕ್‌ ಡ್ರೋನ್‌ಗಳು ಪತ್ತೆ: ಭದ್ರತಾ ಪಡೆಗಳಿಂದ ಗುಂಡಿನ ದಾಳಿ

ಡ್ರೋನ್ ಹಾರಾಟ ನಡೆಸಲು ಅನುಮತಿ ಪಡೆಯುವ ವಿಧಾನ

1) DGCA ರವರಿಂದ ಪಡೆದ UIN/UAOP ಯ ಪ್ರತಿ. ಡೋನ್ ನ ನಿರ್ದಿಷ್ಟತೆ (Specification).

2) ಡ್ರೋನ್ ಅಪರೇಟರ್ ಗಳ ತರಬೇತಿ ಪ್ರಮಾಣ ಪತ್ರ

3) ಭೂಮಿ/ ಆಸ್ತಿ ಮಾಲೀಕರ ಅನುಮತಿ ಪತ್ರ. (ಡ್ರೋನ್‌ನು ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಮಾಡಲು ಬಳಸುವ ಪ್ರದೇಶಕ್ಕೆ ಮಾತ್ರ)

ಶತ್ರು ಡ್ರೋನ್‌ ಉರುಳಿಸಲು ಸೇನೆಯಿಂದ ಹದ್ದುಗಳಿಗೆ ಟ್ರೇನಿಂಗ್‌..!

4) ಡ್ರೋನ್ ಹಾರಿಸುವಾಗ ಏನಾದರೂ ಘಟನೆ/ಅಪಘಾತ ಸಂಭವಿಸಿದ್ದಲ್ಲಿ ಮೂರನೇ ವ್ಯಕ್ತಿಗೆ ಆಗುವಂತಹ ಹಾನಿಯನ್ನು ಆಪರೇಟರ್‌ಗಳು ಹೊಣೆಗಾರಿಕೆಯೊಂದಿಗೆ ವಿಮೆಯನ್ನು ಹೊಂದಿರತಕ್ಕದ್ದು. ಮಾನ್ಯವಿರುವ PCC ಯನ್ನು ಹೊಂದಿರತಕ್ಕದ್ದು

5) ಡ್ರೋನ್ ಹಾರಿಸಲು ಸೂಕ್ತ ಕಾರಣ ಹಾಗೂ ಸಂಬಂಧಪಟ್ಟ ದಾಖಲಾತಿಯನ್ನು ಸಲ್ಲಿಸತಕ್ಕದ್ದು

6) ಈ ಮೇಲಿನ ದಾಖಲಾತಿಗಳನ್ನು ನೀಡಿದ್ದಲ್ಲಿ 01 ತಿಂಗಳ ಅವಧಿಗೆ ಡ್ರೋನ್ ಹಾರಿಸಲು ಅನುಮತಿಯನ್ನು ನೀಡಲಾಗುವುದು. ಅಲ್ಲದೇ ಪಡೆದ ಅನುಮತಿ ಪತ್ರವನ್ನು ಡ್ರೋನ್ ಹಾರಿಸುವ ಮುಂಚೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆ ನೀಡಲಾಗಿದೆ.

Follow Us:
Download App:
  • android
  • ios