ಮಂಗಳೂರು(ಸೆ.04): ಇನ್ನು ಮುಂದೆ ಕಾನೂನು ಸುವ್ಯವಸ್ಥೆ ಸೇರಿದಂತೆ ಪೊಲೀಸ್‌ ಇಲಾಖೆಯಿಂದ ನೀಡಬೇಕಾದ ಅಗತ್ಯ ಸಂದೇಶಗಳು ಕ್ಷಣಾರ್ಧದಲ್ಲಿ ನಿಮ್ಮ ಮೊಬೈಲ್‌ಗೆ ತಲುಪಲಿದೆ.

ನಾಗರಿಕರನ್ನು ನೇರವಾಗಿ ತಲುಪುವ ಇಂತಹ ಹೊಸ ಪ್ರಯತ್ನಕ್ಕೆ ಮಂಗಳೂರು ನಗರ ಪೊಲೀಸರು ಕೈಹಾಕಿದ್ದು ಯಸ್ವಿಯಾಗಿದ್ದಾರೆ. ಸೋಮವಾರ ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವ ಸಂದರ್ಭ ಈ ನೂತನ ಪ್ರಯೋಗಕ್ಕೆ ಕೈಹಾಕಿದೆ.

ಅಗತ್ಯ ಮಾಹಿತಿಗಳ ಮೆಸೇಜ್‌:

ಗಾಳಿ ಸುದ್ದಿ, ಕಾನೂನು ಸುವ್ಯವಸ್ಥೆ ಮಾಹಿತಿ, ವಿಐಪಿಗಳು ಬಂದಾಗ ಜನತೆಗೆ ಮುಂಚಿತವಾಗಿ ಮಾಹಿತಿ, ತುರ್ತು ಅಡಚಣೆಗಳ ಸಂದರ್ಭ ಟ್ರಾಫಿಕ್‌ ಮಾಹಿತಿ ಇತ್ಯಾದಿ ಅಗತ್ಯ ಸಂದೇಶಗಳನ್ನು ನಾಗರಿಕರಿಗೆ ವಾಟ್ಸಪ್‌ ಗ್ರೂಪ್‌ಗಳ ಈ ಮೂಲಕ ನೀಡಲಾಗುತ್ತದೆ. ನಾಗರಿಕರ ಜಾಗೃತಿಗೆ ಇದರಿಂದ ಅನುಕೂಲವಾಗಲಿದೆ.

ಪೊಲೀಸ್ ಕಂಟ್ರೋಲ್ ರೂಂನಿಂದ ನೇರ ಸಂದೇಶ:

ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಅವರ ಕಲ್ಪನೆಯಲ್ಲಿ ಮೂಡಿಬಂದ ‘ನನ್ನ ಬೀಟ್‌-ನನ್ನ ಹೆಮ್ಮೆ’ ಯೋಜನೆಯಲ್ಲಿ ಪ್ರತಿ ಬೀಟ್‌ ವ್ಯಾಪ್ತಿಯಲ್ಲಿರುವ ನಾಗರಿಕರ ವಾಟ್ಸಾಪ್ ಗ್ರೂಪ್‌ ರಚಿಸಲಾಗಿದೆ. ಅಂತಹ ಎಲ್ಲ ಗುಂಪುಗಳಿಗೆ ಏಕಕಾಲಕ್ಕೆ ಪೊಲೀಸ್‌ ಕಂಟ್ರೋಲ್‌ ರೂಂನಿಂದ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. ಈ ಸಂದೇಶಗಳು ಏಕಕಾಲಕ್ಕೆ ಪ್ರತಿಯೊಬ್ಬ ನಾಗರಿಕರಿಗೂ ಸುಲಭದಲ್ಲಿ ತಲುಪುತ್ತದೆ.

ಮಂಗಳೂರಿನಲ್ಲಿನ್ನು 'ಹೆಮ್ಮೆಯ ಬೀಟ್ ಡ್ಯೂಟಿ'

ಏಕಕಾಲದಲ್ಲಿ 25 ಸಾವಿರ ಜನರಿಗೆ ಸಂದೇಶ:

ಸಾಮಾಜಿಕ ಜಾಲತಾಣಗಳಲ್ಲಿ ಕೋಮುದ್ವೇಷ ಬಿತ್ತುವ ಮಾಹಿತಿಯನ್ನು ರವಾನಿಸುವುದು ಕಾನೂನು ರೀತ್ಯಾ ತಪ್ಪು. ಇಂತಹ ನಡವಳಿಕೆ ತೋರಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಅಂತಹ ಸಂದೇಶಗಳು ಕಂಡುಬಂದರೆ, ಪೊಲೀಸ್‌ ಕಂಟ್ರೋಲ್‌ ರೂಂ ವಾಟ್ಸ್‌ಆ್ಯಪ್‌ ಸಂಖ್ಯೆ- 9480802300 ಮಾಹಿತಿ ತಿಳಿಸುವಂತೆ ಅಧಿಕೃವಾಗಿ ವಾಯ್ಸ್‌ ಮೆಸೇಜ್‌ಗಳನ್ನು ಹರಿಯಬಿಡಲಾಗಿದೆ. ಈ ಸಂದೇಶಗಳು ಏಕಕಾಲಕ್ಕೆ 25 ಸಾವಿರಕ್ಕೂ ಹೆಚ್ಚಿ ನಾಗರಿಕರ ಮೊಬೈಲ್‌ಗೆ ತಲುಪಿದೆ.

ರೌಡಿ ಶೀಟರ್‌ಗಳಿಗೆ ಕಮಿಷನರ್‌ ಕೊಟ್ರು ಹೊಸ ಆಫರ್‌..!

‘ನನ್ನ ಬೀಟ್‌-ನನ್ನ ಹೆಮ್ಮೆ’ ಯೋಜನೆಗೆ ಸೇರ್ಪಡೆಯಾಗಿರುವ ನಾಗರಿಕರ ಮೊಬೈಲ್‌ಗೆ ನೇರವಾಗಿ ಅಗತ್ಯ ಸಂದೇಶಗಳನ್ನು ಕಂಟ್ರೋಲ್‌ ರೂಂನಿಂದ ಕಳುಹಿಸಲಾಗುತ್ತದೆ. 3 ಲಕ್ಷ ಮಂದಿಯನ್ನು ಈ ಯೋಜನೆಯಲ್ಲಿ ಸೇರ್ಪಡೆಗೊಳಿಸುವ ಇದ್ದೇಶ ಇದೆ ಎಂದು  ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಹೇಳಿದ್ಧಾರೆ.