ಸೀಕ್ವೆನ್ಸ್‌ ಬದಲಿಸಿ ವಿಡಿಯೋ ಬಿಡುಗಡೆ ಮಾಡಿದ್ರಾ ಕುಮಾರಸ್ವಾಮಿ..?

ಶುಕ್ರವಾರ ಮಂಗಳೂರು ಗಲಭೆ ಕುರಿತು ಜೆಡಿಎಸ್ ವಿಡಿಯೋ ರಿಲೀಸ್ ಮಾಡಿದ್ದು, ಈ ಬಗ್ಗೆ ಪೊಲೀಸ್ ಆಯುಕ್ತ ಐಪಿಎಸ್ ಹರ್ಷ ಅವರು ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ 1000ಕ್ಕೂ ಹೆಚ್ಚು ವಿಡಿಯೋಗಳನ್ನು ಸಂಗ್ರಹಿಸಿರುವ ಮಂಗಳೂರು ಪೊಲೀಸರು ಮಾಜಿ ಸಿಎಂ ಕುಮಾರಸ್ವಾಮಿ ರಿಲೀಸ್ ಮಾಡಿದ ವಿಡಿಯೋ ಬಗ್ಗೆ ಏನ್ ಹೇಳಿದ್ರು..? ಇಲ್ಲಿ ಓದಿ.

mangalore ips harsha reaction about hd kumaraswamy video release

ಮಂಗಳೂರು(ಜ.11): ಶುಕ್ರವಾರ ಮಂಗಳೂರು ಗಲಭೆ ಕುರಿತು ಜೆಡಿಎಸ್ ವಿಡಿಯೋ ರಿಲೀಸ್ ಮಾಡಿದ್ದು, ಈ ಬಗ್ಗೆ ಪೊಲೀಸ್ ಆಯುಕ್ತ ಐಪಿಎಸ್ ಹರ್ಷ ಅವರು ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ 1000ಕ್ಕೂ ಹೆಚ್ಚು ವಿಡಿಯೋಗಳನ್ನು ಮಂಗಳೂರು ಪೊಲೀಸರು ಸಂಗ್ರಹಿಸಿದ್ದಾರೆ.

"

ಈ ಹಿಂದೆಯೇ ಗಲಭೆ ಬಗ್ಗೆ ವಿಡಿಯೋಗಳಿದ್ದರೆ ಕಳಿಸಿ ಎಂದು ಐಪಿಎಸ್ ಹರ್ಷ ಅವರು ಕೇಳಿಕೊಂಡಿದ್ದರು. ಈ ಸಂದರ್ಭ ಕಮಿಷನರ್ ಸೂಚನೆಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, 1000ಕ್ಕೂ ಹೆಚ್ಚು ವಿಡಿಯೋಗಳು ಲಭ್ಯವಾಗಿತ್ತು.

ಕಮಿಷನರ್‌ ಮನವಿಗೆ ಮಾಸ್ ರಿಪ್ಲೈ: ಮಂಗಳೂರು ಗಲಭೆಯ 1000ಕ್ಕೂ ಹೆಚ್ಚು ವಿಡಿಯೋ ಲಭ್ಯ

ಶುಕ್ರವಾರ ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ ಅವರು ಮಂಗಳೂರು ಗಲಭೆ ಸಂಬಂಧ ಬಿಡುಗಡೆ ಮಾಡಿದ ವೀಡಿಯೋ ಬಗ್ಗೆ ಹರ್ಷಾ ಅವರು ಪ್ರತಿಕ್ರಿಯಿಸಿದ್ದಾರೆ. ಮಂಗಳೂರು ‌ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷಾ ಹೇಳಿಕೆ ನೀಡಿದ್ದು, ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅದರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

ಗಲಭೆಕೋರರ ಗುಂಪು ಅಕ್ರಮ ಕೂಟ ರಚಿಸಿ ವ್ಯಾಪಕ ಹಿಂಸಾಚಾರ ‌ನಡೆಸಿದೆ. ಈ ವೇಳೆ ಕರ್ತವ್ಯನಿರತ ಪೊಲೀಸರು ಕಾನೂನು ಕ್ರಮ ಜರುಗಿಸಿ ಶಾಂತಿ ಸುವ್ಯವಸ್ಥೆ ಕಾಪಾಡಿದ್ದಾರೆ. ಈ ಘಟನೆ ಕುರಿತು ಆರೋಪಿಗಳ ಪತ್ತೆಗೆ ದೃಶ್ಯಗಳನ್ನು ಮಂಗಳೂರು ಕಮಿಷನರ್ ಫೇಸ್ ಬುಕ್ ಪೇಜ್ ‌ನಲ್ಲಿ ಹಾಕಲಾಗಿದೆ. ಸಾರ್ವಜನಿಕರು ಕೂಡ ಸಾಕಷ್ಟು ವಿಡಿಯೋ ಕಳಿಸಿದ್ದು, ಹಲವಾರು ಚಾನೆಲ್ ಗಳು ದೃಶ್ಯಗಳನ್ನು ‌ಬಿತ್ತರಿಸಿದೆ ಎಂದಿದ್ದಾರೆ.

ಕುಮಾರಸ್ವಾಮಿ ಸ್ಫೋಟಕ ವಿಡಿಯೋ ರಿಲೀಸ್: ಒಂದಲ್ಲ ಎರಡಲ್ಲ 35

ಇತ್ತೀಚೆಗೆ ಘಟನೆಗೆ ಸಂಬಂಧಿಸಿ ಕೆಲ ಆಯ್ದ ತುಣುಕುಗಳ ಸೀಕ್ವೆನ್ಸ್ ಬದಲಿಸಿ ಬಿಡುಗಡೆ ಮಾಡಲಾಗಿದೆ. ಈ ತುಣುಕುಗಳ ಸಮಗ್ರ ಚಿತ್ರಣ ಸಿಕ್ಕರೆ ಮಾತ್ರ ನೈಜ ಚಿತ್ರಣ ಸಿಗಲು ಸಾಧ್ಯ. ಈಗಾಗಲೇ ಸಿಐಡಿ ಮತ್ತು ಮ್ಯಾಜಿಸ್ಟ್ರೇಟ್ ತನಿಖೆಗೆ ಪೊಲೀಸ್ ಇಲಾಖೆ ಎಲ್ಲಾ ದಾಖಲೆ ನೀಡಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಿ ಸತ್ಯ ಹೊರ ಬರಲಿ ಎಂದಿದ್ದಾರೆ.

Latest Videos
Follow Us:
Download App:
  • android
  • ios