ಮಂಗಳೂರು(ಜ.29): 10 ವರ್ಷದ ಹಿಂದೆ ಕಾಮಗಾರಿ ಆರಂಭಿಸಿ ಹಲವು ಬಾರಿ ಗಡುವುಗಳು ಮುಗಿದು ಕೊನೆಗೂ ಮಂಗಳೂರು ಪಂಪ್‌ವೆಲ್‌ ಫ್ಲೈಓವರ್‌ಗೆ ಉದ್ಘಾಟನೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಫ್ಲೈಓವರ್‌ ಉದ್ಘಾಟನೆಗೆ ಹಲವು ಬಾರಿ ಗಡುವು ಫಿಕ್ಸ್ ಮಾಡಿಯೂ ಕಾಮಗಾರಿ ಪೂರ್ತಿಯಾಗದೆ ಸಂಸದ ನಳಿನ್ ಕುಮಾರ್ ಟ್ರೋಲ್ ಆಗುತ್ತಲೇ ಇದ್ದರು.

"

ಮಂಗಳೂರು ಪಂಪ್ ವೆಲ್ ಫ್ಲೈ ಓವರ್ ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಪಂಪ್ ವೆಲ್ ಫ್ಲೈಓವರ್ ಕಾಮಗಾರಿ ಕೊನೆಗೂ ‌ಪೂರ್ಣವಾಗಿದೆ. 10 ವರ್ಷದ ಬಳಿಕ ಪೂರ್ಣಗೊಂಡ ಪಂಪ್ ವೆಲ್ ಫ್ಲೈ ಓವರ್‌ಗೆ ಜ.31ರ ಬೆಳಗ್ಗೆ ಉದ್ಘಾಟನೆಗೆ ದಿನಾಂಕ ಫಿಕ್ಸ್ ಆಗಿದೆ.

ಕೊನೆಗೂ ಸಂಚಾರಕ್ಕೆ ಸಿದ್ಧವಾಯ್ತು ಪಂಪ್‌ವೆಲ್‌ ಮೇಲ್ಸೇತುವೆ!

ಫ್ಲೈ ಓವರ್ ಜ.31ರ ಬಳಿಕ ವಾಹನ ಸಂಚಾರಕ್ಕೆ ಸಂಪೂರ್ಣ ಮುಕ್ತವಾಗಲಿದೆ. 2010ರಲ್ಲಿ ಆರಂಭಿಸಿದ್ದ 600ಮೀ. ಉದ್ದದ ಫ್ಲೈ ಓವರ್ ಕಾಮಗಾರಿಯನ್ನು ಗುತ್ತಿಗೆ ಪಡೆದಿದ್ದ ಕಂಪನಿ ನವಯುಗ 2013ಕ್ಕೇ ಪೂರ್ಣಗೊಳ್ಳಬೇಕಿತ್ತು.

10 ವರ್ಷವಾದರೂ ಪೂರ್ಣಗೊಳ್ಳದೇ ಹತ್ತಾರು ಡೆಡ್ ಲೈನ್ ಗಳನ್ನು ಕಂಡಿರುವ ರಾಷ್ಟ್ರೀಯ ‌ಹೆದ್ದಾರಿ 66ರ ಪಂಪ್ ವೆಲ್ ಬಳಿಯ ಫ್ಲೈ ಓವರ್ ಕೊನೆಗೂ ಉದ್ಘಾಟನೆಯಾಗಲಿದೆ. ಕರಾವಳಿ ಭಾಗದಲ್ಲಿ ಸಾಮಾಜಿಕ ತಾಣಗಳಲ್ಲಿ ಈ ಕಾಮಗಾರಿ ಭಾರೀ ಟ್ರೋಲ್ ಆಗಿತ್ತು.

ಕಾಮಗಾರಿಯೇ ಮುಗಿಯದ ಪಂಪ್‌ವೆಲ್‌ ಫ್ಲೈಓವರ್‌ಗೆ ಕೊನೆಗೂ ಉದ್ಘಾಟನೆ ಭಾಗ್ಯ..?