ಉಡುಪಿ(ನ.22): ಬ್ಯಾಂಕಾಕ್‌ನಲ್ಲಿ ನ.12 ರಿಂದ 16ರ ವರೆಗೆ ನಡೆದ ಮಿಸೆಸ್‌ ವರ್ಲ್ಡ್ ಸೂಪರ್‌ ಮಾಡೆಲ್‌- 2019ರ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ವೈದ್ಯೆ ಡಾ. ಪ್ರಿಯದರ್ಶಿನಿ ರೈ ಡಿಸೋಜ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮಿಸ್‌ ಗುಡ್‌ ನೆಸ್‌ ಅಂಬಾಸಿಡರ್‌ ಎಂಬ ಸಬ್‌ ಟೈಟಲ್‌ನ್ನು ಕೂಡ ಪಡೆದುಕೊಂಡಿದ್ದಾರೆ.

ಪ್ರತಿಷ್ಠಿತ ಫ್ಯಾಶನ್‌ ಸಂಸ್ಥೆ ಎ.ಬಿ.ಸಿ.ಡಿ ಹಾಗೂ ಸ್ಪಾಟ್ಲೈಟ್ ಇಂಟರ್‌ ನ್ಯಾಶನಲ್‌ ಫಿಲ್ಮ್ಸ್‌ ಆಯೋಜಿಸಿದ ಈ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ವಿವಿಧ ದೇಶಗಳ ಮಹಿಳಾ ಸ್ಪರ್ಧಿಗಳು ಭಾಗವಹಿಸಿದ್ದರು. ಇದರಲ್ಲಿ ಡಾ. ಪ್ರಿಯದರ್ಶಿನಿ ರೈ ಡಿಸೋಜ ಬೈಂದೂರು ವಿಜೇತರಾಗಿದ್ದಾರೆ.

ರಾಜ್ಯದಲ್ಲಿ 31 ಮತ್ಸ್ಯ ದರ್ಶಿನಿ ಹೋಟೆಲ್, ಮಲ್ಪೆಗೆ ಬರಲಿದೆ ತೇಲುವ ಜೆಟ್ಟಿ..!

ಮೂಲತಃ ಬೈಂದೂರಿನ ಬಿ.ಟಿ. ವಿಜಯ ರೈ ಹಾಗೂ ಲೀನಾ ವಿ. ರೈ ದಂಪತಿಯ ಮಗಳಾದ ಅವರು ಅರುಣ್‌ ಡಿಸೋಜ ಅವರನ್ನು ಮದುವೆಯಾದ ಬಳಿಕ ಮಂಗಳೂರಿನಲ್ಲಿ ನೆಲೆಸಿ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಚಿಕ್ಕಂದಿನಿಂದಲೂ ಫ್ಯಾಶನ್‌ ಲೋಕದಲ್ಲಿ ಸಾಧನೆ ಮಾಡುವ ಕನಸು ಕಂಡಿದ್ದ ಅವರು ಅದನ್ನೀಗ ನನಸಾಗಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಅವರು ಅಪ್ಪಟ ಭಾರತೀಯ ನಾರಿಯಾಗಿ ಕಾಣಿಸಿಕೊಂಡು ವಿದೇಶಗಳಲ್ಲಿಯೂ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ. ತಮ್ಮ ಮಕ್ಕಳಾದ ಆನಾ ಹಾಗೂ ಆಂಡ್ರಿಯಾ ಅವರಿಗೂ ಫ್ಯಾಶನ್‌ ಲೋಕದ ಬಗ್ಗೆ ಮಾರ್ಗದರ್ಶವನ್ನು ನೀಡುತ್ತಿದ್ದಾರೆ.

ಈ ಸ್ಪರ್ಧೆ ಸೌಂದರ್ಯ- ಪ್ರತಿಭೆಗೆ ವೇದಿಕೆ

ದೇಶದ ಕಲೆ ಮತ್ತು ಸಂಸ್ಕೃತಿ, ದೇಶಗಳ ನಡುವಿನ ಬಾಂಧವ್ಯ ಹೆಚ್ಚಿಸಲು ಇಂತಹ ಸ್ಪರ್ಧೆಗಳು ಸಹಕಾರಿಯಾಗುತ್ತವೆ. ನನಗೆ ಭಾರತ ದೇಶದ ಸೌಂದರ್ಯ ಮತ್ತು ಪ್ರತಿಭೆಯನ್ನು ವಿದೇಶಿಯರ ಮುಂದೆ ನಿರೂಪಿಸಲು ಈ ಸ್ಪರ್ಧೆಯು ಅತ್ಯುತ್ತಮ ವೇದಿಕೆಯಾಯಿತು ಎಂದು ಡಾ. ಪ್ರಿಯದರ್ಶಿನಿ ರೈ ಡಿಸೋಜ ಹೇಳಿದ್ದಾರೆ.

ಫೋನ್ ಕಾಲ್‌ನಿಂದ ಮುರಿದು ಬಿದ್ದ ಮದುವೆ..!