ವಿಪಕ್ಷಗಳಿಗೆ ತಾಕೀತು ಮಾಡಿದ ಸಚಿವ ಈಶ್ವರಪ್ಪ
ದುಷ್ಕೃತ್ಯ ನಡೆಸುವವರ ಬಗ್ಗೆ ಮೃದು ದೋರಣೆ ಸಾಧ್ಯವಿಲ್ಲ. ಇಂತಹ ಕೃತ್ಯಗಳಿಗೆ ಯತ್ನಿಸುವವರ ಬಗ್ಗೆಯೂ ಮೃದಯ ಹೇಳಿಕೆ ನೀಡದಂತೆ ಸಚಿವ ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗ [ಜ.21]: ರಾಜ್ಯದಲ್ಲಿ ದುಷ್ಕೃತ್ಯಕ್ಕೆ ಯತ್ನಿಸುವರ ಕುರಿತಂತೆ ಮೃದು ಧೋರಣೆ ಹೇಳಿಕೆ ನೀಡದಂತೆ ವಿಪಕ್ಷಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ಶಾಂತಿಯುತ ರಾಜ್ಯ. ಇಲ್ಲಿ ಹಿಂದೂ ಮುಸ್ಲಿಂ ಎಲ್ಲರೂ ಒಂದಾಗಿ ಬಾಳ್ವೆ ನಡೆಸುತ್ತಿದ್ದಾರೆ. ಇವರ ನಡುವೆ ಕಿಚ್ಚು ಹಚ್ಚಲೆಂದೇ ದುಷ್ಕೃತ್ಯ ನಡೆಸಲು ಯತ್ನಿಸಲಾಗುತ್ತಿದೆ. ಇಂತಹ ಶಕ್ತಿಗಳ ವಿರುದ್ಧ ನಾವೆಲ್ಲ ಒಂದಾಗಿ ನಿಲ್ಲಬೇಕಿದೆ. ಹಾಗಾದರೆæ ದುಷ್ಕೃತ್ಯಕ್ಕೆ ಧೈರ್ಯ ಬರುವುದಿಲ್ಲ ಎಂದರು.
ಇಂತಹ ವಿಚಾರದಲ್ಲಿ ರಾಜಕಾರಣ ಬೇಡ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಒಂದಾಗಿ ಪೊಲೀಸರ ಜೊತೆಗೆ ನಿಲ್ಲೋಣ. ಪೊಲೀಸರ ವಿರುದ್ಧವೇ ಮಾತನಾಡಲಾರಂಭಿಸಿದರೆ ದುಷ್ಕೃತ್ಯ ಮಾಡುವವರಿಗೆ ಬಲ ಸಿಕ್ಕಂತಾಗುತ್ತದೆ. ಪೊಲೀಸರ ನೈತಿಕ ಬಲ ಕುಸಿಯುತ್ತದೆ ಎಂದು ಹೇಳಿದರು.
ಶಿವಮೊಗ್ಗ ಜನರಿಗೆ ಗುಡ್ ನ್ಯೂಸ್ : ಶರಾವತಿ ಸೇತುವೆ ಶೀಘ್ರ ಪೂರ್ಣ.
ಈ ಹಿಂದೆ ಮಂಗಳೂರಿನ ಘಟನೆ ಸಂಬಂಧ ಪೊಲೀಸರು ಕಠಿಣ ಧೋರಣೆ ತಳೆದಾಗ, ವಿಪಕ್ಷಗಳು ಇದೊಂದು ಪೊಲೀಸರ ಸೃಷ್ಟಿಎಂದು ಹೇಳಿದ್ದವು. ಈಗ ಇಲ್ಲಿ ಜೀವಂತ ಬಾಂಬ್ ಸಿಕ್ಕಿದೆ. ಈಗ ಕಾಂಗ್ರೆಸ್, ಜೆಡಿಎಸ್ ಏನು ಹೇಳುತ್ತವೆ? ಇದನ್ನು ಕೂಡ ಪೊಲೀಸರೇ ಇಟ್ಟಿದ್ದಾರೆ ಎನ್ನುತ್ತಾರಾ? ಎಂದು ಪ್ರಶ್ನಿಸಿದ ಅವರು ಇಂತಹ ವಿಚಾರದಲ್ಲಿ ರಾಜಕಾರಣ ಬೇಡ. ನಾವೆಲ್ಲ ಒಂದಾಗಿ ಈ ಶಕ್ತಿಗಳ ವಿರುದ್ಧ ಕ್ರಮಕ್ಕೆ ಮುಂದಾಗೋಣ ಎಂದು ಮನವಿ ಮಾಡಿದರು.
ಇದನ್ನು ಭದ್ರತಾ ವೈಫಲ್ಯ ಎನ್ನಲು ಸಾಧ್ಯವಿಲ್ಲ. ಸಿಸಿ ಟಿವಿಯಲ್ಲಿ ಈ ಬಾಂಬ್ ಇಟ್ಟವರ ವೀಡಿಯೋ ಪತ್ತೆಯಾಗಿದೆ. ಪೊಲೀಸರು ಇವರನ್ನು ಪತ್ತೆ ಹಚ್ಚುತ್ತಾರೆ ಎಂದರು.