'ಪಂಪ್‌ವೆಲ್ ಫ್ಲೈಓವರ್ ಉದ್ಘಾಟನೆ ಆಗಿಲ್ಲ, ಟೋಲ್ ಕೊಡಲ್ಲ'..!

ಮಂಗಳೂರಿನ ಪಂಪ್‌ವೆಲ್‌ ಫ್ಲೈಓವರ್‌ ಕಾಮಗಾರಿ ಪೂರ್ತಿಯಾಗದ ಹಿನ್ನೆಲೆಯಲ್ಲಿ ಟೋಲ್ ಕಲೆಕ್ಷನ್ ನಿಲ್ಲಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಮಂಗಳೂರು ಟೋಲ್‌ ಗೇಟ್‌ ಬಳಿ ಜಮಾಯಿಸಿದ್ದಾರೆ.

mangalore bjp workers gathered near tollgate asks officers not to collect toll

ಮಂಗಳೂರು(ಜ.01): ಮಂಗಳೂರಿನ ಪಂಪ್‌ವೆಲ್‌ ಫ್ಲೈಓವರ್‌ ಕಾಮಗಾರಿ ಪೂರ್ತಿಯಾಗದ ಹಿನ್ನೆಲೆಯಲ್ಲಿ ಟೋಲ್ ಕಲೆಕ್ಷನ್ ನಿಲ್ಲಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಮಂಗಳೂರು ಟೋಲ್‌ ಗೇಟ್‌ ಬಳಿ ಜಮಾಯಿಸಿದ್ದಾರೆ.

ಮಂಗಳೂರಿನ ಪಂಪ್‌ವೆಲ್ ಫ್ಲೈ ಓವರ್ ಕಾಮಗಾರಿ ಪೂರ್ತಿಯಾಗದ ಹಿನ್ನೆಲೆ ಸಂಸದ ನಳಿನ್ ಸೂಚನೆಯಂತೆ ತಲಪಾಡಿ ಟೋಲ್ ಗೇಟ್ ಬಂದ್ ಮಾಡಲು ಬಿಜೆಪಿಗರು ಮುಂದಾಗಿದ್ದಾರೆ.

ಮಂಡ್ಯ: ಡಿಸ್ನಿಲ್ಯಾಂಡ್‌ ಮಾದರಿ ಯೋಜನೆ ಜೀವಂತ!

ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸಹಿತ ಪಕ್ಷದ ಮುಖಂಡರು ಭಾಗಿಯಾಗಿದ್ದು, ಕೇರಳ ಗಡಿಭಾಗದ ತಲಪಾಡಿ ಟೋಲ್ ಗೇಟ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದಾರೆ.

ನವಯುಗ ಮತ್ತು ಟೋಲ್ ಗೇಟ್ ಅಧಿಕಾರಿಗಳನ್ನ ತರಾಟೆಗೆ ಪಡೆದ ಶಾಸಕರು ನೀವಾಗಿಯೇ ಬಂದ್ ಮಾಡಿದ್ರೆ ಉತ್ತಮ, ಇಲ್ಲವಾದರೆ ನಾವೇ ಬಂದ್ ಮಾಡ್ತೇವೆ ಅಂತ ಎಚ್ಚರಿಸಿದ್ದಾರೆ. ಈ ಮೊದಲು ಗಡುವು ನೀಡಿದಂತೆ ಪಂಪ್ ವೆಲ್ ಫ್ಲೈಓವರ್ ಇಂದು ಉದ್ಘಾಟನೆಯಾಗಬೇಕಿತ್ತು. ನವಯುಗ ಸಂಸ್ಥೆ ಬೇಜವಾಬ್ದಾರಿಯಿಂದ ಕಾಮಗಾರಿ ಇನ್ನೂ ಅಪೂರ್ಣವಾಗಿದೆ.

'ಕ್ರಿಸ್ತನ ಪ್ರತಿಮೆ ಬೆಂಬಲಿಸಿದ ಡಿಕೆಶಿ ಕೃಷ್ಣನಲ್ಲಿ ಬೇಧ ಕಂಡಿದ್ದೇಕೆ'?

ಮಂಗಳವಾರ ಡಿಸಿ ಕಚೇರಿಯಲ್ಲಿ ಸಭೆ ನಡೆಸಿದ ಸಂಸದ ನಳಿನ್ ಕುಮಾರ್ ಕಟೀಲ್ ಟೋಲ್ ಗೇಟ್ ಬಂದ್‌ಗೆ ಸೂಚನೆ ನೀಡಿದ್ದರು. 2010ರಿಂದ ನಡೆಯುತ್ತಿರುವ ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿ ಇನ್ನೂ ಪೂರ್ಣವಾಗದೆ ಸಂಸದ ನಳಿನ್ ‌ಕುಮಾರ್ ಕಟೀಲ್ ಮುಜುಗರಕ್ಕೆ ಕಾರಣವಾಗಿದೆ. ಹೀಗಾಗಿ ನಿನ್ನೆ ನವಯುಗ ಸಂಸ್ಥೆಗೆ ಎಚ್ಚರಿಕೆ ನೀಡಿ ಕ್ರಿಮಿನಲ್ ಕೇಸು ದಾಖಲಿಸಿ ಟೋಲ್ ಸ್ಥಗಿತಕ್ಕೆ ನಳಿನ್ ಸೂಚನೆ ನೀಡಿದ್ದರು.

Latest Videos
Follow Us:
Download App:
  • android
  • ios