Asianet Suvarna News Asianet Suvarna News

'ಕ್ರಿಸ್ತನ ಪ್ರತಿಮೆ ಬೆಂಬಲಿಸಿದ ಡಿಕೆಶಿ ಕೃಷ್ಣನಲ್ಲಿ ಬೇಧ ಕಂಡಿದ್ದೇಕೆ'?

ರಾಮನಗರ ಜಿಲ್ಲೆಯಲ್ಲಿ ಕ್ರಿಸ್ತನ ಪ್ರತಿಮೆಯನ್ನು ಸ್ಥಾಪಿಸುವುದಕ್ಕೆ ಮುಂದಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಹಿಂದೊಮ್ಮೆ ಇಸ್ಕಾನ್‌ ಸಂಸ್ಥೆಯವರು ಥೀಮ್‌ ಪಾರ್ಕ್ ಮಾಡುವ ಯೋಜನೆಗೆ ಅಡ್ಡಗಾಲಾಗಿ ಶ್ರೀಕೃಷ್ಣನನ್ನು ವಿರೋಧಿಸಿದ್ದೇಕೆ ಎಂದು ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

why dk shivakumar opposed god krishna questions ct ravi in mandya
Author
Bangalore, First Published Jan 1, 2020, 8:00 AM IST
  • Facebook
  • Twitter
  • Whatsapp

ಮಂಡ್ಯ(ಜ.01): ಕರ್ನಾಟಕದಲ್ಲಿ ಭಾಷಾವಾರು ಪ್ರಾಂತ್ಯ ರಚನೆ ಮಾಡುವ ಸಮಯದಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್‌ ಸರ್ಕಾರ. ಗಡಿ ವಿವಾದದ ಸೃಷ್ಟಿಕರ್ತರೂ ಅವರೇ ಆಗಿದ್ದಾರೆ ಎಂದು ಸಕ್ಕರೆ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ನೇರವಾಗಿ ಆರೋಪಿಸಿದ್ದಾರೆ.

ಮದ್ದೂರು ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾಷಾವಾರು ಪ್ರಾಂತ್ಯ ರಚನೆ ಪ್ರಕ್ರಿಯೆ ಆರಂಭವಾದ ಸಮಯದಲ್ಲಿ ಮಹಾರಾಷ್ಟ್ರ, ಕಾಸರಗೋಡು ಸೇರಿದಂತೆ ಗಡಿ ಭಾಗದಲ್ಲಿ ಕನ್ನಡ ಮಾತನಾಡುವ ಪ್ರದೇಶಗಳನ್ನು ಸರಿಯಾಗಿ ಗುರುತಿಸಿ ರಚನೆ ಮಾಡಿದ್ದರೆ ಗಡಿ ವಿವಾದವೇ ಉದ್ಭವಿಸುತ್ತಿರಲಿಲ್ಲ ಎಂದಿದ್ದಾರೆ.

ಕೋಲಾರ: ಪ್ರತಿಭಟನೆಯಿಂದ ಎಚ್ಚೆತ್ತ ತಾಲೂಕು ಆಡಳಿತ

ಅಂದು ಬಿಜೆಪಿ ಹುಟ್ಟೇ ಇರಲಿಲ್ಲ. ಕಾಂಗ್ರೆಸ್‌ ಅನ್ನು ವಿರೋಧಿಸುವ ಪ್ರಬಲ ರಾಜಕೀಯ ಶಕ್ತಿಗಳೂ ಇರಲಿಲ್ಲ. ಈಗ ಗಡಿ ವಿವಾದದಲ್ಲಿ ಬಿಜೆಪಿ ಲಾಭ ಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಭಾವನಾತ್ಮಕವಾಗಿ ಪ್ರಚೋದಿಸುತ್ತಿದೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ?. ಗಡಿವಿವಾದವನ್ನು ಅಂದೇ ಬಗೆಹರಿಸಿದ್ದರೆ ಇಂದು ಸಮಸ್ಯೆಯೇ ಇರುತ್ತಿರಲಿಲ್ಲವಲ್ಲ ಎಂದು ಕುಟುಕಿದ್ದಾರೆ.

ಬಿಜೆಪಿ ರಾಷ್ಟ್ರೀಯ ಹಿತದೊಳಗೆ ಕರ್ನಾಟಕದ ಹಿತವನ್ನು ಕಾಪಾಡುವ ಉದ್ದೇಶ ಹೊಂದಿದೆ. ನೆರೆ ರಾಜ್ಯಗಳನ್ನು ಎತ್ತಿಕಟ್ಟಿಬಡಿದಾಟದ ರಾಜಕಾರಣ ಮಾಡುವುದರಲ್ಲಿ ಆಸಕ್ತಿ ಇಲ್ಲ. ಬೆಳಗಾವಿ ಗಡಿ ವಿವಾದದ ವಿಷಯದಲ್ಲೂ ಬಿಜೆಪಿ ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದ ಹಿತ ಕಾಪಾಡುವ ಧ್ಯೇಯದೊಂದಿಗೆ ಪರಿಹಾರಕ್ಕೆ ಮುಂದಾಗಿದೆ ಎಂದರು. ರಾಮನಗರ ಜಿಲ್ಲೆಯಲ್ಲಿ ಕ್ರಿಸ್ತನ ಪ್ರತಿಮೆಯನ್ನು ಸ್ಥಾಪಿಸುವುದಕ್ಕೆ ಮುಂದಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಹಿಂದೊಮ್ಮೆ ಇಸ್ಕಾನ್‌ ಸಂಸ್ಥೆಯವರು ಥೀಮ್‌ ಪಾರ್ಕ್ ಮಾಡುವ ಯೋಜನೆಗೆ ಅಡ್ಡಗಾಲಾಗಿ ಶ್ರೀಕೃಷ್ಣನನ್ನು ವಿರೋಧಿಸಿದ್ದೇಕೆ ಎಂದು ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

2018ರ ಹೊಸ ವರ್ಷಾಚರಣೆ ವೇಳೆ ಎಂಜಿ ರಸ್ತೆ-ಇಂದಿರಾನಗರದದಲ್ಲಿ ಏನಾಗಿತ್ತು?.

ಇಸ್ಕಾನ್‌ ಸಂಸ್ಥೆಯವರು ಥೀಮ್‌ ಪಾರ್ಕ್ ಮಾಡುವ ಯೋಜನೆ ಕೈಗೆತ್ತಿಕೊಂಡಾಗ ಅಂದು ಸದನ ಸಮಿತಿ ರಚನೆ ಮಾಡಿ ಡಿ.ಕೆ.ಶಿವಕುಮಾರ್‌ ಇಲ್ಲದ ತೊಂದರೆ ಕೊಟ್ಟು ಯೋಜನೆ ಕೈಬಿಡುವಂತೆ ಮಾಡಿದ್ದರು. ಇಂದು ಕ್ರಿಸ್ತನ ಪ್ರತಿಮೆಗೆ ಸ್ಥಾಪನೆಗೆ ಬೆಂಬಲವಾಗಿ ನಿಂತವರು ಅಂದು ಕೃಷ್ಣನಿಗೆ ಏಕೆ ವಿರೋಧಿಸಿದರು. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವುದು ಸರಿಯೇ ಎಂದು ಮತ್ತೊಮ್ಮೆ ಪ್ರಶ್ನಿಸಿದರು. ನಮಗೆ ಕೃಷ್ಣ, ಕ್ರಿಸ್ತ ಇಬ್ಬರೂ ಒಂದೇ. ಇಬ್ಬರಲ್ಲಿ ಯಾವುದೇ ಬೇಧವಿಲ್ಲ. ಬೇಧ ಮಾಡುವುದೂ ಇಲ್ಲ. ದೇವರೊಬ್ಬ ನಾಮ ಹಲವು ಎಂಬ ಮಾತಿನಲ್ಲಿ ನಂಬಿಕೆ ಇಟ್ಟವರು ನಾವು. ಕ್ರಿಸ್ತನ ಪ್ರತಿಮೆ ನಿರ್ಮಿಸುವುದಕ್ಕೆ ಅವರು ಸ್ವತಂತ್ರರಿದ್ದಾರೆ. ಆದರೆ, ಸರ್ಕಾರದ ಗೋಮಾಳ ಜಮೀನಿನಲ್ಲಿ ಪ್ರತಿಮೆ ನಿರ್ಮಾಣವಾಗುತ್ತಿರುವುದರ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿದೆ. ವರದಿಯಲ್ಲಿ ಏನು ಬರುತ್ತೋ ಅದನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಅದರಲ್ಲಿ ತಪ್ಪೇನಿದೆ ಎಂದು ಹೇಳಿದ್ದಾರೆ.

ಮಲ್ಪೆ ಬೀಚ್‌ನಿಂದ ಎಂಜಿ ರಸ್ತೆವರೆಗೆ...ಹೊಸ ವರ್ಷ ಬರಮಾಡಿಕೊಳ್ಳಲು ಕರ್ನಾಟಕ ಸಿದ್ಧ

ಪ್ರವಾಸೋದ್ಯಮಕ್ಕೆ ಒಂದು ಹೊಸ ನೀತಿ ಜಾರಿಯಾಗಲಿದೆ. ಹಳ್ಳಿಗಳನ್ನು ಪ್ರವಾಸಿ ತಾಣಗಳನ್ನಾಗಿ ಮಾಡುವ ಉದ್ದೇಶ ಇದರಲ್ಲಿ ಅಡಗಿದೆ. ಸ್ಥಳೀಯ ಪಾರಂಪರಿಕ ತಿನಿಸುಗಳನ್ನು ಪರಿಚಯಿಸುವುದರೊಂದಿಗೆ ಪ್ರವಾಸಿಗರನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ ಎಂದಿದ್ದಾರೆ.

ಈಗಾಗಲೇ ಶ್ರೀರಂಗಪಟ್ಟಣ ದಸರಾ ಸಮಯದಲ್ಲಿ ಶ್ರೀನಿವಾಸ ಅಗ್ರಹಾರದಲ್ಲಿ ನಡೆಸಲಾದ ಪ್ರಯೋಗ ಯಶಸ್ಸನ್ನು ಕಂಡಿದೆ. ಅದೇ ಮಾದರಿಯನ್ನು ಉಳಿದ ಕಡೆಗಳಲ್ಲೂ ಮಾಡುವ ಧ್ಯೇಯವನ್ನು ಹೊಂದಲಾಗಿದೆ. ಇದಕ್ಕೆ ಇಸ್ಫೋಸಿಸ್‌ ಪ್ರತಿಷ್ಠಾನದ ನೆರವನ್ನು ಕೋರಿರುವುದಾಗಿ ಹೇಳಿದ್ದಾರೆ.

ಎಂಜಿ ರಸ್ತೆಗೆ ಬಾ ಎಂದ ಶಿಕ್ಷಕನಿಗೆ ಬಿತ್ತು ಗೂಸಾ

ನಾನು ಉಪ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಲ್ಲ. ಅದರ ಬಗ್ಗೆ ನಾನು ತಲೆಕೆಡಿಸಿಕೊಂಡಿಯೂ ಇಲ್ಲ. ಯಾರು ಏನಾಗಬೇಕೋ ಆಗಲಿ. ನನಗೆ ಸಿಕ್ಕಿರುವ ಇಲಾಖೆಯೊಳಗೆ ಯಾವ ರೀತಿ ಕೆಲಸ ಮಾಡುತ್ತೇನೆ ಎನ್ನುವುದಷ್ಟೇ ನನಗೆ ಮುಖ್ಯ ಎಂದು ಉಪಮುಖ್ಯಮಂತ್ರಿ ಹುದ್ದೆ ರದ್ದು ಮಾಡುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

Follow Us:
Download App:
  • android
  • ios