ಮಂಡ್ಯ: ಡಿಸ್ನಿಲ್ಯಾಂಡ್‌ ಮಾದರಿ ಯೋಜನೆ ಜೀವಂತ!

KRSನಲ್ಲಿ ಡಿಸ್ನಿಲ್ಯಾಂಡ್‌ ಮಾದರಿ ಸ್ಥಾಪನೆ ಮಾಡುವ ಯೋಜನೆ ಜೀವಂತವಾಗಿದೆ. ಸರ್ಕಾರ ಬದಲಾಗಿದೆಯಷ್ಟೇ, ಯೋಜನೆ ಕೈಬಿಟ್ಟಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಂಗಳವಾರ ಹೇಳಿದ್ದಾರೆ.

Disneyland type of park in krs mandya project not dropped out says ct ravi

ಮಂಡ್ಯ(ಜ.01): ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್‌ ಮಾದರಿ ಸ್ಥಾಪನೆ ಮಾಡುವ ಯೋಜನೆ ಇನ್ನೂ ಜೀವಂತವಾಗಿದೆ. ಸರ್ಕಾರ ಬದಲಾಗಿದೆಯಷ್ಟೇ, ಯೋಜನೆ ಕೈಬಿಟ್ಟಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಂಗಳವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರವಿ, ಸರ್ಕಾರ ಬದಲಾಯಿತು ಎಂದರೆ ಹಿಂದಿನವರ ಆಲೋಚನೆಗಳನ್ನು ಅಲ್ಲಿಗೆ ಬಿಟ್ಟು ಹೋಗುತ್ತೇವೆ ಎಂದಲ್ಲ. ಆಡಳಿತ ಪಕ್ಷಗಳು, ವ್ಯಕ್ತಿಗಳು ಬದಲಾಗಬಹುದು. ಸರ್ಕಾರ ನಿರಂತರ. ಅವರ ಒಳ್ಳೆಯ ಆಲೋಚನೆಗಳನ್ನು ಖಂಡಿತವಾಗಿಯೂ ಬಳಸಿಕೊಳ್ಳುತ್ತೇವೆ ಎಂದಿದ್ದಾರೆ.

'ಕ್ರಿಸ್ತನ ಪ್ರತಿಮೆ ಬೆಂಬಲಿಸಿದ ಡಿಕೆಶಿ ಕೃಷ್ಣನಲ್ಲಿ ಬೇಧ ಕಂಡಿದ್ದೇಕೆ'?

ಡಿಸ್ನಿಲ್ಯಾಂಡ್‌ ಯೋಜನೆ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡಿದ ಸಚಿವರು, ಪ್ರವಾಸೋದ್ಯಮ ಇಲಾಖೆಯಿಂದ ಡಿಸ್ನಿಲ್ಯಾಂಡ್‌ ಮಾದರಿ ನಿರ್ಮಿಸುವ ಪ್ಲಾನ್‌ ಮಾಡಿಲ್ಲ. ನೀರಾವರಿ ಇಲಾಖೆಯಿಂದ ಮಾಡಿಸುತ್ತೇವೆ ಎಂದಿದ್ದಾರೆ.

ಕೋಲಾರ: ಪ್ರತಿಭಟನೆಯಿಂದ ಎಚ್ಚೆತ್ತ ತಾಲೂಕು ಆಡಳಿತ

2000 ಕೋಟಿ ರು. ಹಾಕುವಷ್ಟು ಬಜೆಟ್‌ ಪ್ರವಾಸೋದ್ಯಮ ಇಲಾಖೆಯಲ್ಲಿ ಇಲ್ಲ . ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಬೇಕು ಎಂಬ ಯೋಚನೆ ಇದೆ. ದೊಡ್ಡ ಬಜೆಟ್‌ನಲ್ಲಿ ಯೋಜನೆ ಕೈಗೊಳ್ಳಬೇಕು ಎಂದರೆ ಬೇರೆ ಇಲಾಖೆ ಅಥವಾ ಖಾಸಗಿ ಸಹಭಾಗಿತ್ವ ಬೇಕಾಗುತ್ತದೆ. ಬೇರೆ ಇಲಾಖೆ ಅಥವಾ ಖಾಸಗಿ ಸಹಭಾಗಿತ್ವಕ್ಕೆ ಮುಂದೆ ಬಂದರೆ ಪ್ಲಾನ್‌ ಮಾಡುತ್ತೇವೆ ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios