ನಾವು ಮಂಡ್ಯದ ಗಂಡು.. ಹೆಲ್ಮೆಟ್‌ ಧರಿಸೊಲ್ಲ ಎಂದೂ.. ಎಂದು ಹಠವಿಡಿದು ರಸ್ತೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ಮಂಡ್ಯದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ಮಂಡ್ಯ (ಜು.08): ಮಂಡ್ಯ ನಗರದಲ್ಲಿ ಹೆಲ್ಮೆಟ್‌ ಇಲ್ಲದೇ ಸಂಚಾರ ಮಾಡುತ್ತಿದ್ದ ಬೈಕ್‌ ಸವಾರರನ್ನು ಪೊಲೀಸರು ನಿಲ್ಲಿಸಿ ದಂಡ ವಿಧಿಸುತ್ತಿದ್ದುದನ್ನು ವಿರೋಧಿಸಿದ ಮಂಡ್ಯದ ಯುವಕರು ನಾವು ಹೆಲ್ಮೆಟ್‌ ಕೂಡ ಧರಿಸೊಲ್ಲ, ಪೊಲೀಸರಿಗೆ ದಂಡವನ್ನೂ ಕಟ್ಟುವುದಿಲ್ಲ ಎಂದು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿಯೇ ಕುಳಿತು ಪ್ರತಿಭಟನೆ ಆರಂಭಿಸಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಲ್ಲದೇ, ಪೊಲೀಸರ ಕರ್ತವ್ಯಕ್ಕೂ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಪ್ರತಿಭಟನೆಗೆ ಕುಳಿತ ಯುವಕರ ಮೇಲೆ ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದು, ಅಲ್ಲಿಂದ ಯುವಕರು ಪರಾರಿ ಆಗಿದ್ದಾರೆ.

ಮಂಡ್ಯದ ಗಂಡು.. ಮುತ್ತಿನ ಚಂಡು.. ನಾನ್‌ ನಿಮ್ಮೂರ ಬಂಧು.. ನಿಮ್ಮ ಮರೆಯೊಲ್ಲ ಎಂದು.. ಎಂಬ ಹಾಡು ಯಾರಿಗೆ ಗೊತ್ತಿಲ್ಲ ಹೇಳಿ. ರೆಬೆಲ್‌ಸ್ಟಾರ್‌ ಅಂಬರೀಶ್‌ ನಟನೆಯ ಈ ಹಾಡು ಈಗಲೂ ಮಂಡ್ಯದ ಯುವಕರ ಫೇವರೀಟ್‌ ಆಗಿದೆ. ಆದರೆ, ಸಂಚಾರ ನಿಯಮಗಳನ್ನು ಪಾಲನೆ ಮಾಡುವಲ್ಲಿ ಮಾತ್ರ ಯಾರ ಮಾತನ್ನೂ ಕೇಳದೆ ಉಲ್ಲಂಘನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇನ್ನು ರಾಜ್ಯಾದ್ಯಂತ ಎಲ್ಲ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸಲೇಬೇಕು. ಇನ್ನು ಗ್ರಾಮೀಣ ಭಾಗದಲ್ಲಿ ಹೆಲ್ಮೆಟ್‌ ಧರಿಸುವವರ ಸಂಖ್ಯೆ ತೀವ್ರ ವಿರಳವಾಗಿರುತ್ತದೆ. ಇನ್ನು ಮಂಡ್ಯದಲ್ಲಿಯೂ ಕೂಡ ನಾವು ಹೆಲ್ಮೆಟ್‌ ಧರಿಸುವುದಿಲ್ಲ ಎನ್ನುವ ಯುವಕರು, ಪೊಲೀಸರು ವಿಧಿಸುವ ದಂಡವನ್ನೂ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದ ಯುವಕರ ಗುಂಪಿನ ಮೇಲೆ ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ. 

ಗೃಹಜ್ಯೋತಿ ಅರ್ಜಿ ಸ್ಥಿತಿ ತಿಳಿಯಲು ಪ್ರತ್ಯೇಕ ಲಿಂಕ್‌ ಬಿಡುಗಡೆ: ಮೊಬೈಲ್‌ನಲ್ಲೇ ಪರಿಶೀಲನೆ ಮಾಡಿ

ಬೈಕ್‌ ತಪಾಸಣಾ ಕಾರ್ಯಕ್ಕೂ ಅಡ್ಡಿ: ಮಂಡ್ಯದಲ್ಲಿ ರಸ್ತೆ ಮಧ್ಯೆಯೇ ಯುವಕರ ಹೈಡ್ರಾಮಾ ನಡೆದಿದೆ. ಹೈಡ್ರಾಮ ಸೃಷ್ಟಿಸಿದ ಯುವಕ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಶನಿವಾರ ಬೆಳಗ್ಗೆ ಮಂಡ್ಯ ಪೊಲೀಸರು‌ ದ್ವಿಚಕ್ರ ವಾಹನ ತಪಾಸಣೆಗೆ ಮುಂದಾಗಿದ್ದಾರೆ. ಆದರೆ, ಯುವಕರ ಗುಂಪೊಂದು ಪೊಲೀಸರ ತಪಾಸಣಾ ಕಾರ್ಯಕ್ಕೆ ಅಡ್ಡಿಪಡಿಸಿದೆ. ಮಂಡ್ಯ ನಗರದ ಫ್ಯಾಕ್ಟರಿ ವೃತ್ತದಲ್ಲಿ ಬೆಂಗಳೂರು - ಮೈಸೂರು ಹಳೆಯ ಹೆದ್ದಾರಿಯಲ್ಲಿ ಪೊಲೀಸರು ನಡೆಸುತ್ತಿದ್ದ ತಪಾಸಣಾ ಕಾರ್ತಕ್ಕೆ ಬೈಕ್ ಸವಾರರು ವಿರೋಧ ವ್ಯಕ್ತಪಡಿಸಿದ್ದಾರೆ. 

ಬೆಳಗಾವಿ ಜೈನಮುನಿಗೆ ಕರೆಂಟ್‌ ಶಾಕ್‌ ಕೊಟ್ಟು ಕೊಲೆ: ದೇಹ ತುಂಡರಿಸಿ ಗದ್ದೆಗೆ ಬೀಸಾಡಿದರು

ರಸ್ತೆಯಲ್ಲಿ ಪ್ರತಿಭಟಿಸಿ ಹೈಡ್ರಾಮಾ: ಬೈಕ್‌ ಸವಾರರು ಸಂಚಾರಿ ನಿಯಮ ಪಾಲಿಸದ್ದಕ್ಕೆ ಪೊಲೀಸರು ಫೈನ್ ಹಾಕುತ್ತಿದ್ದರು. ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದರ ಬಗ್ಗೆ ದಂಡ ವಿಧಿಸಿದ್ದಕ್ಕೆ ಕೆಲ ಯುವಕರು ಆಕ್ರೋಶ ವ್ಯಕ್ತಪಡಿದ್ದಾರೆ. ಜೊತೆಗೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಪಡಿಸಿದ್ದಲ್ಲದೆ ರಸ್ತೆ ಮಧ್ಯೆಯೇ ಪ್ರತಿಭಟನೆ ನಡೆಸಿ ಹೈಡ್ರಾಮಾ ಮಾಡಿದ್ದಾರೆ. ಪ್ರತಿಭಟನೆಗಿಳಿದು ಹೈಡ್ರಾಮ ಸೃಷ್ಟಿಸಿದ ಯುವಕರ ಗುಂಪಿನ ಮೇಲೆ ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ. ಇನ್ನು ಲಾಠಿ ಏಟು ಬಿಳ್ತಿದ್ದಂತೆ ಯುವಕರು ಸ್ಥಳದಿಂದ ಪೇರಿ ಕಿತ್ತಿದ್ದಾರೆ.