Mandya ಸಿಕ್ಕ ಚಿನ್ನದ ಸರ ಒಪ್ಪಿಸಿದ ಯುವಕನಿಗೆ ಪೊಲೀಸರ ಪ್ರಶಂಸೆ

  • ಸಿಕ್ಕ ಚಿನ್ನದ ಸರ ಪೊಲೀಸರಿಗೆ ಒಪ್ಪಿಸಿದ ಯುವಕ
  • ವಾರಸುದಾರರಿಗೆ ವಾಪಸ್ ನೀಡುವಂತೆ ಮನವಿ
  • ಯುವಕನ ಪ್ರಾಮಾಣಿಕತೆಗೆ ಪೊಲೀಸರಿಂದ ಪ್ರಶಂಸೆ
Mandya young boy handed over the gold chain to police gow

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣನ್ಯೂಸ್

ಮಂಡ್ಯ (ಮೇ.27): ಚಿನ್ನದ ದರ (gold price) ಗಗನಕ್ಕೇರಿದೆ. ಇವತ್ತಿನ ಬೆಲೆಯಲ್ಲಿ ಸಣ್ಣ ಆಭರಣ ಮಾಡಿಸೋದಕ್ಕೂ ಲಕ್ಷ ಲಕ್ಷ ಹಣ ಬೇಕು. ಇಂತಹ ದುಬಾರಿ ಚಿನ್ನ ಅಚಾನಕ್ಕಾಗಿ ಸಿಕ್ಕರೆ ಯಾರಾದ್ರು ಬಿಡ್ತಾರ.? ಹಿಂದು ಮುಂದೂ ನೋಡದೆ ಜೋಬಿಗಿಳಿಸಿಕೊಂಡು ಹೋಗ್ತಾ ಇರ್ತಾರೆ. ಆದ್ರೆ ಮಂಡ್ಯದ (Mandya) ನಾಗಮಂಗಲದಲ್ಲೊಬ್ಬ ಯುವಕ ಮಾತ್ರ ಹೀಗೆ ಯೋಚಿಸಲಿಲ್ಲ. ಬದಲಾಗಿ ಹೋಟೆಲ್ ರೂಂ‌ನಲ್ಲಿ ಸಿಕ್ಕ ಚಿನ್ನದ ಸರವನ್ನ ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ.

ಹೋಟೆಲ್ ರೂಂ‌ನಲ್ಲಿ ಸಿಕ್ತು 33 ಗ್ರಾಂ ಚಿನ್ನದ ಸರ :  ಹಾಸನ ಮೂಲದ ಮೈಸೂರು ನಿವಾಸಿ ಚಂದ್ರಶೇಖರ್ ಪ್ರಮಾಣಿಕತೆ ಮೆರೆದ ಯುವಕ. ಟ್ರಾಕ್ಟರ್ ಷೋ ರೂಂನಲ್ಲಿ ಕೆಲಸ ಮಾಡ್ತಿರುವ ಚಂದ್ರಶೇಖರ್ ಗುರುವಾರ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕಾಗಿ ನಾಗಮಂಗಲಕ್ಕೆ ಬಂದಿದ್ದರು. ರಾತ್ರಿ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕುಟುಂಬಸ್ಥರೊಂದಿಗೆ ಹೋಟೆಲ್‌ನಲ್ಲಿ (Hotel) ವಾಸ್ತವ್ಯ ಹೂಡಲು ತೆರಳಿದ್ದರು.

Mandya; ಖಾಯಿಲೆ ಎಂದು ಮಗುವನ್ನು ಚರ್ಚ್‌ನಲ್ಲಿ ಬಿಟ್ಟು ಪೋಷಕರು ಪರಾರಿ!

ಈ ವೇಳೆ ಹೋಟೆಲ್ ರೂಂ‌ನಲ್ಲಿ ಸರವೊಂದು ಚಂದ್ರಶೇಖರ್‌ ಕಣ್ಣಿಗೆ ಬಿದ್ದಿತ್ತು. ಅದನ್ನ ಕೈಗೆತ್ತಿಕೊಂಡು ಪರಿಶೀಲಿಸಿದ ಚಂದ್ರಶೇಖರ್ ಅಪ್ಪಟ ಚಿನ್ನ ಎನ್ನುವುದನ್ನು ಖಾತ್ರಿ ಮಾಡಿಕೊಂಡರು. ಬೆಳಿಗ್ಗೆ ನೇರವಾಗಿ ಅಗ್ರಹಾರ ಪೊಲೀಸ್ ಠಾಣೆಗೆ ತೆರಳಿದ ಚಂದ್ರಶೇಖರ್ ಪಿಎಸ್‌ಐ ಭೇಟಿಯಾಗಿ ಚಿನ್ನದ ಸರ ಒಪ್ಪಿಸಿದ್ದರು. ಅದರ ವಾರಸುದಾರರಿಗೆ ತಲುಪಿಸುವಂತೆ ಮನವಿ ಮಾಡಿದ್ದರು.

ಯುವಕನ ಪ್ರಾಮಾಣಿಕತೆಗೆ ಮೆಚ್ಚುಗೆ : ಸಿಕ್ಕ ಚಿನ್ನದ ಸರವನ್ನ ತಾನೇ ಇಟ್ಟುಕೊಂಡು ಬಿಡಬಹುದಿತ್ತು. ಆದ್ರೆ ಆ ಕೆಲಸವನ್ನ ಚಂದ್ರಶೇಖರ್ ಮಾಡಲಿಲ್ಲ. ಬದಲಾಗಿ ಮಾನವೀಯ ದೃಷ್ಟಿಯಿಂದ ಯೋಚಿಸಿದ ಅವರು. ಅದರ ವಾರಸುದಾರರು ಎಷ್ಟು ಕಷ್ಟ ಪಟ್ಟು ಅದನ್ನ ಮಾಡಿಸಿರಬಹದು ಎಂದು ಯೋಚಿಸಿದರು. ಚೈನ್ ಕಳೆದುಕೊಂಡವರಿಗೆ ಮತ್ತೆ ಸಿಕ್ಕರೆ ಖುಷಿ ಆಗ್ತಾರೆ ಎಂಬ ಉದ್ದೇಶದಿಂದ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಸಿಕ್ಕ ಚಿನ್ನದ ಸರವನ್ನ ಪೊಲೀಸರಿಗೆ ಒಪ್ಪಿಸಿದ್ದರು. ಅಚಾನಕ್ಕಾಗಿ ಸಿಕ್ಕ ಚಿನ್ನದ ಸರ ದುರುಪಯೋಗ ಆಗಬಾರದೆಂದು ಪೊಲೀಸರಿಗೆ ತಲುಪಿಸಿದ ಚಂದ್ರಶೇಖರ್ ವಾರಸುದಾರರಿಗೆ ನೀಡುವಂತೆ ಮಾನವಿ ಮಾಡಿದ್ರು. ಯುವಕನ ನಡೆಗೆ ಪ್ರಶಂಸೆ ವ್ಯಕ್ತಪಡಿಸಿದ ಪೊಲೀಸರು. ಈಗೀಗ ಕಾಲದಲ್ಲಿ ಒಂದು ರೂಪಾಯಿ ಸಿಕ್ಕರೂ ಬಿಡದ ಜನಗಳ ಮಧ್ಯೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನದ ಸರ ಸಿಕ್ಕರೂ ಅದನ್ನ ಪ್ರಾಮಾಣಿಕವಾಗಿ ಹಿಂದಿರುಗಿಸಿದ್ದಾರೆ. ಚಂದ್ರಶೇಖರ್ ಪ್ರಾಮಾಣಿಕತೆ ಇತರರಿಗೂ ಮಾದರಿಯಾಗಲಿ ಎಂದರು.

ಮನೆ ಬಾಗಿಲಿಗೆ ಶಾಲೆ ಯೋಜನೆಗೆ BBMP ಚಾಲನೆ

Latest Videos
Follow Us:
Download App:
  • android
  • ios