Asianet Suvarna News Asianet Suvarna News

ಮಂಡ್ಯ: ನೆರೆ ಸಂತ್ರಸ್ತರಿಗೆ ವ್ಯಾಪಾರಿಗಳಿಂದ ನೆರವು

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು ಮತ್ತು ಸವದತ್ತಿ ತಾಲೂಕಿನಲ್ಲಿ ನೆರೆ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲು ಮಳವಳ್ಳಿ ತಾಲೂಕಿನ ವ್ಯಾಪಾರಿಗಳು ಅಗತ್ಯ ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿದ್ಧಾರೆ. ಸುಮಾರು 1.50 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ನೀಲಗಿರಿ, ಸರ್ವೆ ಪೊಲ್ಸ್‌, ಟಾರ್ಪಲ್ ಹಾಗೂ ಮೊಳೆಗಳನ್ನು ಲಾರಿಯಲ್ಲಿ ಕಳುಹಿಸಲಾಗಿದೆ.

Mandya shopkeepers sent relief materials for flood victims
Author
Bangalore, First Published Aug 20, 2019, 8:40 AM IST

ಮಂಡ್ಯ(ಆ.20): ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಮನೆ ಕಳೆದುಕೊಂಡಿರುವ ನೆರೆ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಶೆಡ್‌ ನಿರ್ಮಿಸಲು ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಮರದ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸುಮಾರು 1.50 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ನೀಲಗಿರಿ, ಸರ್ವೆ ಪೊಲ್ಸ್‌, ಟಾರ್ಪಲ್ ಹಾಗೂ ಮೊಳೆಗಳನ್ನು ಲಾರಿಯಲ್ಲಿ ಕಳುಹಿಸಿ ಮಾನವೀಯತೆ ಮೆರೆದರು.

ಮರದ ವ್ಯಾಪಾರಿ ಕುಮಾರ್‌ ಮಾತನಾಡಿ, ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು ಮತ್ತು ಸವದತ್ತಿ ತಾಲೂಕಿನಲ್ಲಿ ನೆರೆಹಾವಳಿಯಿಂದ ಇಡೀ ಗ್ರಾಮಗಳೇ ನೀರಿನಲ್ಲಿ ಮುಳುಗಡೆಯಾಗಿವೆ. ಸಾವಿರಾರು ಕುಟುಂಬಗಳು ಮನೆಯನ್ನು ಕಳೆದುಕೊಂಡಿವೆ. ಅಲ್ಲಿನ ಜನತೆಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಮರದ ವ್ಯಾಪಾರಿಗಳು ಮತ್ತು ಸಾರ್ವಜನಿಕರಿಂದ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲು ಒಂದು ಲಾರಿ ಪೋಲ್ಸ್‌, ಟಾರ್ಪಾಲ್‌ ಮತ್ತು ಮೊಳೆಗಳನ್ನು ಕಳುಹಿಸಿಕೊಡಲಾಗುತ್ತಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈಗಾಗಗಲೇ ಅಲ್ಲಿನ ಜಿಲ್ಲಾಧಿಕಾರಿಗಳು ಮತು ತಹಶೀಲ್ದಾರ್‌ ಜೊತೆಗೆ ಮಾತುಕತೆ ನಡೆಸಲಾಗಿದೆ. ಅವಶ್ಯವಿರುವ ಪೋಲ್ಸ್‌ ಕಳುಹಿಸುವಂತೆ ಹೇಳಿದ್ದಾರೆ. ಕಿರುಗಾವಲಿನಿಂದ ಮರದ ವ್ಯಾಪಾರಿಗಳು ತೆರಳಿ ಶೆಡ್‌ಗಳನ್ನು ನಿರ್ಮಿಸಿಕೊಟ್ಟು ಬರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ಈ ವೇಳೆ ಆನಂದ್‌, ನವೀನ್‌, ಪುಟ್ಟಸ್ವಾಮಿ, ಕಾಂತು ಉಪಸ್ಥಿತರಿದ್ದರು.

ತಮ್ಮ ಕ್ಷೇತ್ರದ ಜನತೆಯಲ್ಲಿ ಹೊಸ ಜಾಗೃತಿ ಹುಟ್ಟು ಹಾಕುತ್ತಿರುವ ಸುಮಲತಾ

Follow Us:
Download App:
  • android
  • ios