ಮಂಡ್ಯ [ಆ.19] : ಸಂಸದೆಯಾಗಿ ಆಯ್ಕೆಯಾದ ಬಳಿಕ ಮೊದಲ ಅಧಿವೇಶನ ಮುಗಿಸಿಕೊಂಡು  ಮಂಡ್ಯಕ್ಕೆ ತೆರಳಿ ಎಲ್ಲಾ ತಾಲೂಕುಗಳಿಗೂ ಭೇಟಿ ನೀಡುತ್ತಿರುವ ಸುಮಲತಾ ಅಂಬರೀಶ್ ತಮ್ಮ ಕ್ಷೇತ್ರದಲ್ಲಿ ಪರಿಸರ ರಕ್ಷಣೆಗೆ ಮುಂದಾಗಿದ್ದಾರೆ. 
 
ಕಳೆದ ಕೆಲವು ದಿನಗಳಿಂದ ಮಂಡ್ಯದಲ್ಲಿಯೇ ನೆಲೆಸಿರುವ ಸುಮಲತಾ, ಹೋದ ಕಡೆಯೆಲ್ಲಾ ಎಲ್ಲರೂ ಹಾರ ಹಾಕಿ ಸನ್ಮಾನ ಮಾಡಿ ಪ್ರೀತಿ ತೋರಿಸುತ್ತಿದ್ದಾರೆ.  ನೀವು ಸನ್ಮಾನ ಮಾಡುವ ಬದಲು ಗಿಡ ನೆಟ್ಟು ಪರಿಸರ ರಕ್ಷಣೆ ಮಾಡಿ ಎಂದು ತಮ್ಮ ಕ್ಷೇತ್ರದ  ಜನರಿಗೆ ಪರಿಸರ ಜಾಗೃತಿಯ ಕರೆ ನೀಡಿದರು. 

ಗಿಡನೆಟ್ಟು ಆ ಫೋಟೋವನ್ನು ನನಗೆ ಕಳುಹಿಸಿ. ನಿಮ್ಮ ಹೆಸರು ಹಾಕಿ ಆ ಫೋಟೋವನ್ನ ನನ್ನ ಫೇಸ್‌ಬುಕ್‌‌ನಲ್ಲಿ ಹಂಚಿಕೊಳ್ಳುತ್ತೇನೆ. ಹಣ ಅನಾವಶ್ಯಕವಾಗಿ  ಖರ್ಚಾಗಬಾರದು. ‌ಪರಿಸರಕ್ಕೆ ಒಳಿತಾಗಬೇಕೆಂದು ನಾನು ಈ ನಿರ್ಧಾರ ಮಾಡಿದ್ದೇನೆ. ನನಗೆ ಸನ್ಮಾನಕ್ಕೆ ಬಳಸುವ ಹಣವನ್ನ ಬಡವರಿಗೆ ನೀಡಿದರೂ ಒಳ್ಳೆಯದು ಎಂದು ಸುಮಲತಾ ಅಂಬರೀಶ್ ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಮಗೆ ಸನ್ಮಾನಕ್ಕಾಗಿ ಹಣ ವ್ಯರ್ಥ ಮಾಡದಂತೆ ತಮ್ಮ ಕ್ಷೇತ್ರದ ಜನರಲ್ಲಿ, ಅಭಿಮಾನಿಗಳಲ್ಲಿ ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ಮನವಿ ಮಾಡಿದರು.