ಮಂಡ್ಯ(ಆ.11): ಜಲಪ್ರಳಯದಿಂದ ತತ್ತರಿಸಿರುವ ಉತ್ತರ ಕರ್ನಾಟಕ, ಮಡಿಕೇರಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ಆಹಾರದ ಸಮಸ್ಯೆ ಉಂಟಾಗಿರುವುದರಿಂದ ನೊಂದ ಜನತೆಗೆ ಆಸರೆ ಸೇವಾ ಟ್ರಸ್ಟ್‌ ಆಹಾರ ತಯಾರಿಸಿ ಕಳುಹಿಸಿ ಮಾನವೀಯತೆ ಮೆರೆದಿದೆ.

4 ಸಾವಿರಕ್ಕೂ ಹೆಚ್ಚು ಚಪಾತಿಗಳನ್ನು ಎನ್‌ಎಸ್‌ಎಸ್‌ ಸ್ವಯಂ ಸೇವಕರಿಂದ ತಯಾರು ಮಾಡಿ ಸಂತ್ರಸ್ತರಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆಸರೆ ಸೇವಾಟ್ರಸ್ಟ್‌ ಅಧ್ಯಕ್ಷ ರಘು ಹೇಳಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರವಾಹ ಉಂಟಾಗಿ ಅಲ್ಲಿಯ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಅವರ ನೆರವಿಗೆ ಧಾವಿಸುವುದು ಪ್ರತಿಯೊಬ್ಬರ ಕರ್ತವ್ಯ. ಹಾಗಾಗಿ ನಮ್ಮ ಟ್ರಸ್ಟ್‌ ವತಿಯಿಂದ ಕೈಲಾದ ಸೇವೆ ಮಾಡುತ್ತಿದ್ದೇವೆ. ಪ್ರವಾಹದಿಂದ ನಲುಗಿ ಮನೆ ಕಳೆದುಕೊಂಡು ನಿರ್ಗತಿಕರಾಗಿರುವವರಿಗೆ ನೆರವು ನೀಡಬೇಕು ಎಂದು ಮನವಿ ಮಾಡಿದ್ದಾರೆ.

115 ಅಡಿ ತಲುಪಿದ KRS: 60 ಸಾವಿರ ಕ್ಯುಸೆಕ್ ನೀರು ಬಿಡುಗಡೆ

ಬೋರೇಗೌಡ, ವಿಕಾಶ್‌ ಗೌಡ, ಬೊಪ್ಪಸಮುದ್ರ ಚೇತನ, ಆಲಭುಜನಹಳ್ಳಿ ಕಿಶೋರ್‌, ಮಂಜುನಾಥ್‌, ಕೀರ್ತಿ, ಗೌತಮ್‌, ತಳಗವಾದಿ ಸುರೇಶ್‌, ಆನಂದ್‌ ಇದ್ದರು.