ಬೆಳೆ ವಿಮಾ ಯೋಜನೆ ಹಿನ್ನಡೆ: ಸುಮಲತಾ ಅಸಮಾಧಾನ

*  4.50 ಲಕ್ಷ ರೈತರಿಗೆ 10 ಸಾವಿರ ಫಲಾನುಭವಿಗಳು ನೋಂದಣಿ
*  ಹೆಚ್ಚಿನ ಪ್ರಚಾರ, ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸೂಚನೆ
*  ಬೆಳೆ ವಿಮಾ ಯೋಜನೆ ಹಿನ್ನೆಡೆಗೆ ಪ್ರಚಾರ ಮತ್ತು ಜಾಗೃತಿಯ ಕೊರತೆ ಇದೆ 
 

Mandya MP Sumalatha Ambareesh talks Over Crop Insurance Plan grg

ಮಂಡ್ಯ(ಜೂ.29):  ಜಿಲ್ಲೆಯಲ್ಲಿ ಬೆಳೆ ವಿಮಾ ಯೋಜನೆ ಸಾಕಷ್ಟುಹಿನ್ನಡೆ ಸಾಧಿಸಿದೆ. 4.50 ಲಕ್ಷ ರೈತರಿಗೆ 10 ಸಾವಿರ ಮಂದಿ ರೈತರು ಮಾತ್ರ ಬೆಳೆ ವಿಮೆಗೆ ನೋಂದಾಯಿಸಿ ಕೊಂಡಿರುವುದು ಪ್ರಗತಿಯ ಲಕ್ಷಣವಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್‌ ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಲೀಡ್‌ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್‌ ಬರೋಡಾ ವತಿಯಿಂದ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಬೆಳೆ ವಿಮಾ ಯೋಜನೆ ಹಿನ್ನೆಡೆಗೆ ಪ್ರಚಾರ ಮತ್ತು ಜಾಗೃತಿಯ ಕೊರತೆ ಇದೆ. ರೈತ ಸಮೂಹಕ್ಕೆ ಬೆಳೆ ವಿಮಾ ಯೋಜನೆಯ ಅರಿವು ಮೂಡಿಸುವಲ್ಲಿ ಕೃಷಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇದರ ಬಗ್ಗೆ ಹೆಚ್ಚಿನ ತಿಳಿವಳಿಕೆ ಮೂಡಿಸಿ ಹೆಚ್ಚು ಜನರನ್ನು ನೋಂದಾಯಿಸಬೇಕು ಎಂದು ಸೂಚಿಸಿದರು.

ಬೆಂಗಳೂರು- ಮೈಸೂರು ಹೆದ್ದಾರಿ ಕ್ರೆಡಿಟ್‌ ವಾರ್, ಪ್ರತಾಪ್‌ ಸಿಂಹಗೆ ಸುಮಲತಾ ಪರೋಕ್ಷ ಪಂಚ್!

ಪ್ರಧಾನಮಂತ್ರಿ ಫಸಲ್‌ ಭಿಮಾ ಯೋಜನೆಯಡಿ ಒಂದು ಹಂಗಾಮಿಗೆ 1720 ಪ್ರೀಮಿಯಂ ಕಟ್ಟಿದರೆ ಅತಿವೃಷ್ಟಿಮತ್ತು ಅನಾವೃಷ್ಟಿಯಿಂದ ಬೆಳೆ ನಷ್ಟವಾದರೆ ಭತ್ತಕ್ಕೆ 85 ಸಾವಿರ ರು. ವಿಮಾ ಹಣ ದೊರಕುತ್ತದೆ. ಇಷ್ಟೊಂದು ಹಣ ಯೋಜನೆಯ ಫಲಾನುಭವಿಗಳಿಗೆ ಸಿಕ್ಕರೂ ಏಕೆ ನೋಂದಾಯಿಸಿಕೊಳ್ಳುತ್ತಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಎಂಟಿ ಕೃಷಿ ನಿರ್ದೇಶಕ ಅಶೋಕ್‌ ಮಾತನಾಡಿ, 2018ರಲ್ಲಿ ಬೆಳೆ ವಿಮಾ ಯೋಜನೆ ಜಾರಿಯಾದಾಗ 45 ಸಾವಿರ ರೈತರು ಫಲಾನುಭವಿಗಳಾಗಿದ್ದರು. ಯೋಜನೆ ಬಗ್ಗೆ ಅರಿವಿದ್ದರೂ ರೈತರು ನೋಂದಣಿಗೆ ಮುಂದಾಗುತ್ತಿಲ್ಲ. ಹಿಂದೆಲ್ಲಾ ಜಿಲ್ಲೆಯಲ್ಲಿ ಅಕಾಲಿಕ ಮಳೆ ಎನ್ನುವುದು ಇರಲಿಲ್ಲ. ಎರಡು ವರ್ಷಗಳಿಂದ ಅಕಾಲಿಕವಾಗಿ ಮಳೆ ಸುರಿಯುವುದು, ಪ್ರವಾಹ ಸೃಷ್ಟಿಯಾಗಿ ಬೆಳೆ ನಷ್ಟವಾಗುತ್ತಿದೆ. ಹೀಗಾಗಿ ಈ ಬಾರಿ 10 ಸಾವಿರ ಜನರು ವಿಮಾ ನೋಂದಣಿ ಮಾಡಿಸಿದ್ದಾರೆ ಎಂದರು.

ಹಿಂದೂಗಳ ಸರದಿ ಆಯ್ತು...ಈಗ ಮುಸ್ಲಿಮರ ಸರದಿ, ಬೃಹತ್ ಶಕ್ತಿ ಪ್ರದರ್ಶಕ್ಕೆ ಪ್ಲಾನ್?

ಜಿಪಂ ಸಿಇಒ ದಿವ್ಯಾಪ್ರಭು ಮಾತನಾಡಿ, ಇದು ಸಕಾರಣವಲ್ಲ. ರೈತರನ್ನು ಬೆಳೆ ವಿಮಾ ವ್ಯಾಪ್ತಿಗೆ ತರುವುದಕ್ಕೆ ಪ್ರೇರಣೆ ನೀಡಬೇಕು. ಯೋಜನೆಯ ಅನುಕೂಲಗಳನ್ನು ಅವರಿಗೆ ವಿವರಿಸಿ ನೋಂದಣಿಗೆ ಆಕರ್ಷಿಸಬೇಕು. 4.50 ಲಕ್ಷ ರೈತರಿಗೆ 10 ಸಾವಿರ ಮಂದಿ ರೈತರು ನೋಂದಣಿಯಾದರೆ ಏನು ಪ್ರಯೋಜನ. ಅದು ಸಾಧನೆಯೇ ಅಲ್ಲ. ಈಗ ಮುಂಗಾರು ಹಂಗಾಮು ಶುರುವಾಗಿರುವುದರಿಂದ ಕೂಡಲೇ ಬೆಳೆ ವಿಮಾ ಯೋಜನೆ ಕುರಿತಂತೆ ಹಳ್ಳಿ ಹಳ್ಳಿಗಳಲ್ಲಿ ಕರಪತ್ರಗಳನ್ನು ಹಂಚಿ ಹೆಚ್ಚಿನ ಪ್ರಚಾರ ನಡೆಸುವುದು ಜಾಗೃತಿ ಕಾರ್ಯಕ್ರಮ ನಡೆಸುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕ ಎಂ.ಪಿ.ದೀಪಕ್‌, ರಿಸವ್‌ರ್‍ ಬ್ಯಾಂಕ್‌ ಆಫ್‌ ಇಂಡಿಯಾ ಬೆಂಗಳೂರು ವ್ಯವಸ್ಥಾಪಕ ಸುಪ್ರಿಯಾ ಬ್ಯಾನರ್ಜಿ, ನಬಾರ್ಡ್‌ ವ್ಯವಸ್ಥಾಪಕಿ ಹರ್ಷಿತಾ ಸಭೆಯಲ್ಲಿದ್ದರು.
 

Latest Videos
Follow Us:
Download App:
  • android
  • ios