ತಾಲೂಕಿನ ಸುಮಾರು 30 ಕ್ಕೂ ಹೆಚ್ಚು ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರು ಮಾಜಿ ಸಚಿವ ಎನ್‌.ಚಲುರಾಯಸ್ವಾಮಿ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು

ಕೆ.ಆರ್‌.ಪೇಟೆ : ತಾಲೂಕಿನ ಸುಮಾರು 30 ಕ್ಕೂ ಹೆಚ್ಚು ಬಿಜೆಪಿ ಮತ್ತು ಜೆಡಿಎಸ್‌ ಮುಖಂಡರು ಮಾಜಿ ಸಚಿವ ಎನ್‌.ಚಲುರಾಯಸ್ವಾಮಿ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು. ಬಿಜೆಪಿಯ ಪಿಎಲ…ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಎನ್‌.ಟಿ.ನಾಗರಾಜೇಗೌಡ, ಹೊನ್ನೇನಹಳ್ಳಿ ರಮೇಶ್‌, ನಾರ್ಗೋನಹಳ್ಳಿ ನಿಂಗೇಗೌಡ, ಅಗಸರಹಳ್ಳಿ ಯೋಗೇಗೌಡ, ಮುರುಳಿ, ಬಸವರಾಜು ಮುಂತಾದವರು ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು. ಜೆಡಿಎಸ್‌ನ ಅರೆಬೂವನಹಳ್ಳಿ ಬಿ.ಆರ್‌.ಗೋಪಾಲ…, ಕಾಮನಹಳ್ಳಿ ಬಾಣೇಗೌಡ, ಹೊನ್ನೇನಹಳ್ಳಿ ಲೋಕೇಶ್‌, ಜಾಗಿನಕೆರೆ ವಿಜಯ ಶೆಟ್ಟಿಗೌಡ, ಅಗಸರಹಳ್ಳಿ ಶಿವಣ್ಣ, ಶ್ರೀಧರ, ಶೇಖರ್‌ , ರಾಮೇಗೌಡ, ಎ.ಜೆ.ಪ್ರಭಾಕರ, ರಂಗೇಗೌಡನ ಕೊಪ್ಪಲು ಸ್ವಾಮೀಗೌಡ, ನಾಟನಹಳ್ಳಿ ಸುದಾ, ಹರೀಶ ಸೇರಿದಂತೆ ಹಲವರು ಜೆಡಿಎಸ್‌ ಪಕ್ಷ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಗೊಂಡರು. ಅಭ್ಯರ್ಥಿ ಬಿ.ಎಲ….ದೇವರಾಜು, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕಿಕ್ಕೇರಿ ಸುರೇಶ್‌, ಬಿ.ನಾಗೇಂದ್ರ ಕುಮಾರ್‌ , ಮುಖಂಡರಾದ ವಿಜಯರಾಮೇಗೌಡ, ಎಂ.ಡಿ.ಕೃಷ್ಣಮೂರ್ತಿ, ಕೋಡಿಮಾರನಹಳ್ಳಿ ದೇವರಾಜು, ವೀಕ್ಷಕ ಚಿನಕುರಳಿ ರಮೇಶ್‌ ಸೇರಿದಂತೆ ಹಲವರು ಇದ್ದರು.

ಕಾರಿಗೆ ಬೆಂಕಿ

ಕೊಳ್ಳೇಗಾಲ: ಕಾಂಗ್ರೆಸ್‌ ಪಕ್ಷ ತ್ಯಜಿಸಿ ಜೆಡಿಎಸ್‌ ಪಕ್ಷ ಸೇರಿದ ಮುಖಂಡನ ಕಾರಿಗೆ ಕೆಲವು ಕಿಡಿಗೇಡಿಗಳು ಬೆಂಕಿ ಹಾಕಿ ಸುಟ್ಟುಹಾಕಿರುವ ಘಟನೆ ವರದಿಯಾಗಿದೆ.

ತಾಲೂಕಿನ ತೆಳ್ಳನೂರು ಗ್ರಾಪಂನ ಅಧ್ಯಕ್ಷೆ ಲೀಲಾವತಿ ಅವರ ಪತಿ ರಮೇಶ್‌ ಕಾರು ಸುಟ್ಟುಹೋಗಿದೆ. ಬ್ರಿಜಾ ಮಾರುತಿ ಕಾರು ತೆಳ್ಳನೂರಿನಲ್ಲಿರುವ ರಮೇಶ್‌ ಅವರ ಜಮೀನಿನ ಶೆಡ್‌ನಲ್ಲಿ ನಿಲ್ಲಿಸಲಾಗಿತ್ತು. ಕಳೆದ ರಾತ್ರಿ ದುಷ್ಕರ್ಮಿಗಳ ಸುಟ್ಟು ಹಾಕಿದ್ದು ಕ್ರಮವಹಿಸಿ ಎಂದು ರಮೇಶ್‌ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.

 ಲೊಕ್ಕನಹಳ್ಳಿ ಗ್ರಾಮದ ಹಿರಿಯ ಮುಖಂಡ ಚಿನ್ನಸ್ವಾಮಿ ಬಿಜೆಪಿ ಪಕ್ಷ ತೊರೆದು ಜೆಡಿಎಸ್‌ ಸೇರ್ಪಡೆ

ಹನೂರು : ಲೊಕ್ಕನಹಳ್ಳಿ ಗ್ರಾಮದ ಹಿರಿಯ ಮುಖಂಡ ಚಿನ್ನಸ್ವಾಮಿ ಬಿಜೆಪಿ ಪಕ್ಷ ತೊರೆದು ಎಂಆರ್‌ ಮಂಜುನಾಥ್‌ ಉಪಸ್ಥಿತಿಯಲ್ಲಿ ಬೆಂಬಲಿಗರ ಜೊತೆ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾದರು. ಬಳಿಕ ಚಿನ್ನಸ್ವಾಮಿ ಮಾತನಾಡಿ, ಜೆಡಿಎಸ್‌ ಅಭ್ಯರ್ಥಿ ಎಂ.ಆರ್‌. ಮಂಜುನಾಥ್‌ ಐದು ವರ್ಷಗಳಿಂದ ಹನೂರು ಜನರ ಕಷ್ಟಸುಖಕ್ಕೆ ಸ್ಪಂದಿಸುತ್ತಿದ್ದು, ಅಂತವರಿಗೆ ಬೆಂಬಲ ವ್ಯಕ್ತಪಡಿಸಿದರೆ ಮುಂದಿನ ದಿನಗಳಲ್ಲಿ ಹನೂರು ಅಭಿವೃದ್ಧಿ ಹಿತದೃಷ್ಟಿಯಿಂದ ಪಕ್ಷ ತೊರೆದು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಎಂದರು

ಅಭ್ಯರ್ಥಿ ಎಂ ಆರ್‌ ಮಂಜುನಾಥ್‌ ಮಾತನಾಡಿ, ಚಿನ್ನಸ್ವಾಮಿ ಅವರು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿರುವುದರಿಂದ ಈ ಭಾಗದಲ್ಲಿ ಅನುಕೂಲದಾಯಕವಾಗಿದೆ. ಈ ಬಾರಿ ಕ್ಷೇತ್ರದ ಎಲ್ಲೆಡೆ ಜನತೆಯಿಂದ ಸ್ಪಂದನೆ ನನಗೆ ಒಳಿತಾಗಲಿದೆ ಎಂದರು.

ಈ ಬಾರಿ ಹನೂರು ಕ್ಷೇತ್ರದ ಜನತೆ ಎರಡು ಕುಟುಂಬದ ರಾಜಕಾರಣದಿಂದ ಬೇಸತ್ತಿದ್ದು, ಈ ಬಾರಿ ಬದಲಾವಣೆ ಬಯಸಿರುವುದರಿಂದ ನನಗೆ ಒಂದು ಬಾರಿ ಅವಕಾಶ ಮಾಡಿಕೊಡಿ. ನಿಮ್ಮ ಸೇವೆ ಮಾಡಲು ಕಳೆದ ಐದು ವರ್ಷಗಳಿಂದ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ, ಎಲ್ಲಾ ಸಮುದಾಯಗಳ ಜನತೆಯನ್ನು ವಿಶ್ವಾಸಕ್ಕೆ ಪಡೆದು ಶ್ರಮಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿಯೂ ಕೇಂದ್ರ ಸ್ಥಾನದಲ್ಲಿದ್ದು ಹನೂರು ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿ ಮತಯಾಚನೆ ಮಾಡಿದರು.

ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಜೆ ಶಿವಮೂರ್ತಿ, ಶಾಗ್ಯ ಬಾಬಣ್ಣ , ಮೈಮುಲ್‌ ನಿರ್ದೇಶಕ ಉದ್ದನೂರು ಪ್ರಸಾದ್‌, ರಾಜುಗೌಡ, ಬಸಪ್ಪನ ದೊಡ್ಡಿ ಬಸವರಾಜ್‌ ಉಪಸ್ಥಿತರಿದ್ದರು