ಮಂಡ್ಯ(ಆ.02): ಮಂಡ್ಯದ ಮತ್ತೊಬ್ಬ ಶಾಸಕನಿಗೆ ಕೊರೋನಾ ಪಾಸಿಟಿವ್ ದೃಢವಾಗಿದೆ. ಜೆಡಿಎಸ್‌ ಶಾಸಕನಿಗೆ ಕೊರೋನಾ ಟೆಸ್ಟ್ ನಡೆಸಿದ ಸಂದರ್ಭ ಪಾಸಿಟಿವ್ ಇರುವುದು ದೃಢವಾಗಿದೆ.

ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡಗೆ ಸೋಂಕು ಧೃಡವಾಗಿದೆ. ಸುರೇಶ್ ಗೌಡ ಹಾಗೂ ಕಾರು ಚಾಲಕನಿಗೆ ಸೋಂಕು ಧೃಡ ಪಟ್ಟಿದ್ದು, ಶಾಸಕ ಆಗಸ್ಟ್‌ 1ರಂದು ಸ್ವಯಂಪ್ರೇರಿತರಾಗಿ ಟೆಸ್ಟ್‌ಗೆ ಒಳಗಾಗಿದ್ದರು.

ಬೆಳಗಾವಿ: ಹಿಂಡಲಗಾ ಜೈಲಿನಲ್ಲಿ ಕೈದಿ ಸಾವು, ಕಾರಣ?

ಇಂದು ರಿಪೋರ್ಟ್‌ನಲ್ಲಿ ಕೊರೊನಾ ಪಾಸಿಟಿವ್ ಇರುವುದು ತಿಳಿದುಬಂದಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಸುರೇಶ್ ಗೌಡ ಕ್ಷೇತ್ರದಲ್ಲಿನ ಸೋಂಕಿತರ ಸಂಪರ್ಕದಿಂದ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ.

ನಿನ್ನೆ ಬೆಂಗಳೂರಿನಲ್ಲಿ ಟೆಸ್ಟ್ ಗೆ ಒಳಪಟ್ಟಿದ್ದ ಶಾಸಕ ತಲೆನೋವು, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದರು. ಇಂದು ಬಂದ ರಿಪೋರ್ಟ್ ನಲ್ಲಿ ಸೋಂಕು ದೃಢವಾಗಿದೆ.

ಜೈಲಲ್ಲಿ ಸೆಲ್ಫಿ ಕ್ಲಿಕ್ಕಿಸಿ ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ ಕೈದಿ!

ಶಾಸಕರಿಗೆ ಪಾಸಿಟಿವ್ ಹಿನ್ನಲೆ ನೂರಾರು ಮಂದಿಗೆ ಆತಂಕ ಎದುರಾಗಿದೆ. ಅಧಿಕಾರಿಗಳು, ರಾಜಕೀಯ ಮುಖಂಡರು ಸೇರಿದಂತೆ ನೂರಾರು ಮಂದಿಗೆ ಶಾಸಕರ ಸಂಪರ್ಕವಿದ್ದು, ಗುರುವಾರವಷ್ಟೇ ಶಾಸಕ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.

ಮದುವೆ, ಗೃಹ ಪ್ರವೇಶದಲ್ಲಿ ಭಾಗಿಯಾಗಿದ್ದು, ಇಬ್ಬರು ಜೆಡಿಎಸ್ ಮುಖಂಡರ ಮನೆಗೂ ಭೇಟಿ ನೀಡಿದ್ದರು. ಬಳಿಕ ಅಧಿಕಾರಿಗಳ ಸಭೆಯನ್ನೂ ನಡೆಸಿದ್ದ ಶಾಸಕ ಸುರೇಶ್ ಗೌಡ ಶುಕ್ರವಾರ ವರಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಮನೆಯಲ್ಲೇ ಇದ್ದರು.