ಮಂಡ್ಯದ ಕೆಸ್ತೂರು ಗ್ರಾಮದಲ್ಲಿ ಪತಿ ನಡೆಸುತ್ತಿದ್ದ ಜಿಮ್‌ನಲ್ಲಿ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಅನೈತಿಕ ಸಂಬಂಧವೇ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ.

ಮಂಡ್ಯ (ಫೆ.10): ಗಂಡನ ಅನೈತಿಕ ಸಂಬಂಧದಿಂದ ಬೇಸತ್ತಿದ್ದ ಮಹಿಳೆಯೊಬ್ಬಳು ಆತ ನಡೆಸುತ್ತಿದ್ದ ಜಿಮ್‌ನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಸ್ತೂರು ಗ್ರಾಮದಲ್ಲಿ ನಡೆದಿದೆ. ಪತಿ ನಡೆಸುತ್ತಿದ್ದ ಜಿಮ್‌ನಲ್ಲಿಯೇ ಗೃಹಿಣಿ ನೇಣಿಗೆ ಕೊರಳೊಡ್ಡಿದ್ದಾಳೆ. ಗ್ರಾಮದ ವೈಭವ್ ಜಿಮ್ ನಲ್ಲಿ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. 27 ವರ್ಷದ ದಿವ್ಯ ಮೃತ ಗೃಹಿಣಿ. ದಿವ್ಯಳ ಪತಿ ಗಿರೀಶ್‌ ವೈಭವ ಹೆಸರಿನ ಜಿಮ್‌ ನಡೆಸುತ್ತಿದ್ದ . ಬೇರೊಬ್ಬರ ಜೊತೆ ಪತಿ ಗಿರೀಶ್ ಅನೈತಿಕ ಸಂಬಂಧ ಹೊಂದಿದ್ದ ಶಂಕೆ ದಿವ್ಯಗೆ ಇತ್ತು. ಇದರಿಂದ ಮನನೊಂದು ಪತಿ ನಡೆಸುತ್ತಿದ್ದ ಜಿಮ್ ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಕೆಸ್ತೂರು ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೆಂಗಳೂರಿನ ಶ್ರೀಮಂತರಿಗೆ ಮಾತ್ರವೇ ಇನ್ನು ಮೆಟ್ರೋ, ಬಡವ, ಮಧ್ಯಮವರ್ಗಕ್ಕೆ ಸರ್ಕಾರಗಳೇ ಶತ್ರು!

ಇನ್ನೊಂದೆಡೆ, ಗೃಹಣಿಯ ಸಂಬಂಧಿಕರಿಂದ ಜಿಮ್ ನಲ್ಲಿದ್ದ ಪೀಠೋಪಕರಣಗಳು ಧ್ವಂಸವಾಗಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜಿಮ್‌ನಲ್ಲಿದ್ದ ಸಂಬಂಧಿಕರನ್ನ ಹೊರಗೆ ಕಳಿಸಿದ್ದಾರೆ. ದಿವ್ಯಾಳ ಪತಿ ಗಿರೀಶ್, ಗಿರೀಶ್ ತಾಯಿ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ತಿಂಗಳಿಂದ ಕಿರುಕುಳ ನೀಡುತ್ತಿದ್ದ ಆರೋಪವನ್ನೂ ಮಾಡಲಾಗಿದ್ದು, ಇಬ್ಬರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಪ್ರಯಾಗ್‌ರಾಜ್‌ ಕಾಲ್ತುಳಿತದಲ್ಲಿ ಮೃತಪಟ್ಟ ತಾಯಿ-ತಂಗಿಯ ಆಭರಣ ಸುರಕ್ಷಿತವಾಗಿ ತಲುಪಿದೆ ಎಂದ ಸಹೋದರ!