Mandya News: ವಿದ್ಯುತ್ ಶಾಕ್ ತಗುಲಿ ಫುಟ್ಬಾಲ್ ಆಟಗಾರನ ಸ್ಥಿತಿ ಗಂಭೀರ: ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ಪೋಷಕರು
Mandya Football Player Vishwas Electric Shock: ನಿರ್ಮಾಣ ಹಂತದಲ್ಲಿದ್ದ ಮನೆಗೆ ನೀರು ಹಾಕಲು ಮೋಟಾರ್ ಆನ್ ಮಾಡುವ ವೇಳೆ ಕರೆಂಟ್ ಶಾಕ್ (Electric Shock) ಹೊಡೆದು ರಾಷ್ಟ್ರೀಯ ಫುಟ್ಬಾಲ್ ಆಟಗಾರನ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ
ವರದಿ: ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ.
ಮಂಡ್ಯ (ಜು. 06): ನಿರ್ಮಾಣ ಹಂತದಲ್ಲಿದ್ದ ಮನೆಗೆ ನೀರು ಹಾಕಲು ಮೋಟಾರ್ ಆನ್ ಮಾಡುವ ವೇಳೆ ಕರೆಂಟ್ ಶಾಕ್ (Electric Shock) ಹೊಡೆದು ರಾಷ್ಟ್ರೀಯ ಫುಟ್ಬಾಲ್ ಆಟಗಾರನ (Football Player) ಸ್ಥಿತಿ ಚಿಂತಾಜನಕವಾಗಿರುವ ಘಟನೆ ಮಂಡ್ಯದಲ್ಲಿ (Mandya) ನಡೆದಿದೆ. ನಗರದ ಗುತ್ತಲು ನಿವಾಸಿ ನರಸಿಂಹಮೂರ್ತಿ ಮತ್ತು ಶ್ಯಾಮಲಾ ದಂಪತಿ ಮಗ ವಿಶ್ವಾಸ್ ವಿದ್ಯುತ್ ಶಾಕ್‌ನಿಂದ ಚಿಂತಾಜನಕ ಸ್ಥಿತಿಯಲ್ಲಿದ್ದು, ಮೈಸೂರಿನ (Mysuru) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಿಇಎಸ್ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿರುವ ವಿಶ್ವಾಸ್ ಓದಿನ ಜತೆಗೆ ಫುಟ್ಬಾಲ್ ಕ್ರೀಡೆಯಲ್ಲೂ ಆಸಕ್ತಿ ಹೊಂದಿದ್ದು, ರಾಷ್ಟ್ರೀಯ ತಂಡಕ್ಕೆ ಹಲವು ಬಾರಿ ಆಡಿದ್ದಾರೆ.
ಆರ್ಥಿಕವಾಗಿ ತೀವ್ರ ಹಿಂದುಳಿದಿರುವ ಕುಟುಂಬದವರು ಮಗನಿಗೆ ಚಿಕಿತ್ಸೆ ಕೊಡಿಸಲು ಪರದಾಡುತ್ತಿದ್ದರೆ, ಮತ್ತೊಂದೆಡೆ ಸ್ನೇಹಿತನಿಗಾಗಿ ವಿದ್ಯಾರ್ಥಿಗಳು ಜನರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಜು.೧ರಂದು ಸ್ವರ್ಣ ಫುಟ್‌ಬಾಲ್ ಸಂಸ್ಥೆ ಆಯೋಜಿಸಿದ್ದ ಹೊನಲು ಬೆಳಕಿನ ಏಳು ಮಂದಿ ಆಟಗಾರರ ಫುಟ್ಬಾಲ್ ಕ್ರೀಡೆಯಲ್ಲಿ ಭಾಗವಹಿಸಬೇಕಿದ್ದ ಪ್ರತಿಭಾವಂತ ಆಟಗಾರ ವಿಶ್ವಾಸ್ ಜು.೧ರಂದು ನಿರ್ಮಾಣ ಹಂತದಲ್ಲಿದ್ದ ತಮ್ಮ ಮನೆಗೆ ನೀರು ಹಾಕಲು ಮೋಟಾರ್ ಆನ್ ಮಾಡುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಶಾಕ್‌ಗೆ ಒಳಗಾಗಿದ್ದಾರೆ.
ಇದರಿಂದಾಗಿ ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ವಿದ್ಯುತ್ ದುರಂತಕ್ಕೆ ಒಳಗಾದ ವಿಶ್ವಾಸ್ ದೇಹದ ಶೇ.80ರಷ್ಟು ಭಾಗ ಹಾನಿಗೊಳಗಾಗಿದ್ದು, ಕೋಮಾ ಸ್ಥಿತಿಯಲ್ಲಿದ್ದಾನೆ. ವಿಶ್ವಾಸ್ ಚಿಕಿತ್ಸೆಗೆ ದಿನವೊಂದಕ್ಕೆ ಸಾವಿರಾರೂ ರೂ. ವೆಚ್ಚ ತಗುಲುತ್ತಿದೆ. ಇತ್ತ ಕಾಲೇಜಿನ ವಿದ್ಯಾರ್ಥಿಗಳು ಹಣ ಸಂಗ್ರಹಿಸಿ ಚಿಕಿತ್ಸೆಗೆಂದು ನೀಡುತ್ತಿದ್ದಾರೆ. ಅಂತೆಯೇ ಪುಟ್ಬಾಲ್ ಕ್ಲಬ್‌ಗಳು ಕೂಡ ಆರ್ಥಿಕ ನೆರವು ಕೊಡುತ್ತಿದ್ದಾರೆ. ಆದರೂ ಇನ್ನಷ್ಟು ಹಣದ ಅವಶ್ಯಕತೆ ಇದೆ.
ಇದನ್ನೂ ಓದಿ: ಶಾಲೆಗೆ ಹೋದ ಬಾಲಕಿ ಹೆಣವಾದಳು, ಮುಖ್ಯ ಶಿಕ್ಷಕ ಅಮಾನತು
ಆದ್ದರಿಂದ ಸಹಾಯ ಮಾಡುವವರು ಬ್ಯಾಂಕ್ ಖಾತೆ ಸಂಖ್ಯೆ-17202610002717 (ಐಎಫ್‌ಎಸ್‌ಸಿ ಕೋಡ್-SYNB0001720), ಫೋನ್ ಪೇ ಅಥವಾ ಗೂಗಲ್ ಪೇ ಸಂಖ್ಯೆ - 9900201307 (ಅಶ್ವಿನಿ) ಹಣ ಕಳುಹಿಸಬಹುದು. ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಪ್ರತಿಭಾವಂತ ಯುವ ಪ್ರತಿಭೆಗೆ ನೆರವಾಗಬೇಕೆಂದು ಕುಟುಂಬದವರು ಮನವಿ ಮಾಡಿದ್ದಾರೆ.