ಮಂಡ್ಯ, (ಮೇ.08): ಮಂಡ್ಯ DC ಕಾರು ಚಾಲಕನಿಗೆ ಸೋಂಕು ದೃಢಪಟ್ಟ ಬೆನ್ನಹಿಂದೆಯೇ ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರಿಗೂ ಕೊರೋನಾ ವೈರಸ್ ಸೋಂಕು ತಗುಲಿದೆ.

ಕಾರು ಚಾಲಕನಿಗೆ ಗುರುವಾರ ಪಾಸಿಟೀವ್ ಬಂದ ಹಿನ್ನೆಲೆಯಲ್ಲಿ ಎಸ್.ಅಶ್ವತಿ ಶುಕ್ರವಾರದಿಂದ ಹೋಂ ಐಸೋಲೇಷನ್ ಆಗಿದ್ದರು.  ಬಳಿಕ ಅನುಮಾನದ ಮೇಲೆ ಕೋವಿಡ್ ಪರೀಕ್ಷೆಗೊಳಗಾದಾಗ ವರದಿಯಲ್ಲಿ ಪಾಸಿಟೀವ್ ದೃಢಪಟ್ಟಿದೆ.

ಮಂಡ್ಯ : 8 ಗ್ರಾಮ ಸೀಲ್‌ಡೌನ್‌! 

ಕೋವಿಡ್ ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರು ಸದ್ಯ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ ನಿರ್ವಹಣೆ ಹೊಣೆ ಎಲ್ಲೂ ಜಿಲ್ಲಾಧಿಕಾರಿಗಳ ಮೇಲಿದೆ. ಆದ್ರೆ, ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರು ಚಿಕಿತ್ಸೆಗೊಳಗಾಗಿರುವುದರಿಂದ ಕೊಂಚ ಆತಂಕಕ್ಕೆ ಕಾರಣವಾಗಿದೆ.