Asianet Suvarna News Asianet Suvarna News

ಮಂಡ್ಯ ಮೂಲ, ಕೋಲಾರದಲ್ಲಿ ವಾಸ, 4 ಜಿಲ್ಲೆಯಲ್ಲಿ ಪ್ರವಾಸ, ಕೊನೆಗೂ ಬೆಂಗ್ಳೂರಿಗೆ ಶಿಫ್ಟ್ ಆದ ಸೋಂಕಿತ

ಮೂರು ನಾಲ್ಕು ಜಿಲ್ಲೆಗಳಿಗೆ ತಲೆ ನೋವಾದ ಕೊರೋನಾ ಸೋಂಕಿತ ಮಂಡ್ಯದಲ್ಲಿ ಪತ್ತೆಯಾಗಿದ್ದು, ಈತನನ್ನು ಈಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ

Mandya covid19 positive patient shifted to bangalore
Author
Bangalore, First Published May 17, 2020, 1:39 PM IST

ಮಂಡ್ಯ(ಮೇ 17): ಮೂರು ನಾಲ್ಕು ಜಿಲ್ಲೆಗಳಿಗೆ ತಲೆ ನೋವಾದ ಕೊರೋನಾ ಸೋಂಕಿತ ಮಂಡ್ಯದಲ್ಲಿ ಪತ್ತೆಯಾಗಿದ್ದು, ಈತನನ್ನು ಈಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋಲಾರದಲ್ಲಿ ಕೊರೋನಾ ಟೆಸ್ಟ್‌ ಗೆ ಒಳಗಾಗಿದ್ದ ಈತ ಬೆಂಗಳರೂರಿಗೆ ಶಿಫ್ಟ್‌ ಆಗುವುದರೊಂದಿಗೆ ಈಗ ಕೊರೋನಾ ಸೋಂಕಿತ ಪ್ರಕರಣ ಜಿಲ್ಲಾಡಳಿತಕ್ಕೆ ಮತ್ತೊಂದು ತಲೆನೋವು ಕಡಿಮೆಯಾದಂತಾಗಿದೆ.

ಸೋಂಕಿತ ವ್ಯಕ್ತಿಯ ಪ್ರಾಥ​ಮಿಕ ಸಂಪ​ರ್ಕ​ದ​ಲ್ಲಿದ್ದ ತಂದೆ, ತಾಯಿ, ಇಬ್ಬರು ಸಹೋ​ದ​ರಿ​ಯ​ವರು, ಸಹೋ​ದ​ರರು, ಅಕ್ಕನ ಮಗ ಅವ​ರನ್ನು ಮದ್ದೂರು ಸರ್ಕಾರಿ ಆಸ್ಪ​ತ್ರೆಗೆ ಕರೆ​ತಂದು ಸ್ವಾ್ಯಬ್‌ ಸಂಗ್ರ​ಹಿಸಿ 7 ಜನರನ್ನು ಕ್ವಾರೆಂಟೈನ್‌ ಮಾಡಲಾಗಿದೆ.

ನಾಲ್ಕು ಜಿಲ್ಲೆಯಲ್ಲಿ ಪ್ರವಾಸ:

ಈ ಸೋಂಕಿತ ವ್ಯಕ್ತಿಯ ಟ್ರಾವೆಲ್‌ ಹಿಸ್ಟರಿ ಬೆಚ್ಚಿ ಬೀಳಿಸುವಂತೆ ಇದೆ. ಮೂರು ನಾಲ್ಕು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದಾನೆ. ಮಂಡ್ಯ, ರಾಮನಗರ, ಕೋಲಾರ, ಬೆಂಗಳೂರು ಜಿಲ್ಲೆಗಳಲ್ಲಿ ಸಂಚಾರ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕಡಿಲುವಾಗಿಲು ಗ್ರಾಮದ ವ್ಯಕ್ತಿ. ಲಾಕ್‌ಡೌನ್‌ ವೇಳೆ ಸ್ವಗ್ರಾಮಕ್ಕೆ ಬಂದಿದ್ದನು. ಏ.24ರಂದು ಮದ್ದೂರು ತಾಲೂಕಿನ ಕಡಿಲುವಾಗಿಲು ಗ್ರಾಮದಲ್ಲಿ ನಿರ್ಮಿಸಿದ್ದ ತನ್ನ ಮನೆಯ ಗೃಹ ಪ್ರವೇಶಕ್ಕೆ ಬಂದಿದ್ದಾನೆ. ಅಲ್ಲಿಂದ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿಯಲ್ಲಿರುವ ಪತ್ನಿ ಮನೆಗೆ ಹೋಗಿದ್ದಾನೆ. ನಂತರ ಚನ್ನಪಟ್ಟಣಕ್ಕೆ ಪ್ರಯಾಣ ಮಾಡಿ ಅಲ್ಲಿಂದ ಸಹೋದ್ಯೋಗಿ ಜೊತೆ ಬೈಕಿನಲ್ಲಿ ಕೋಲಾರಕ್ಕೆ ವಾಪಸ್‌ ಆಗಿದ್ದಾನೆ. ಕೋಲಾರದಲ್ಲಿ ಸ್ವಯಂ ಪ್ರೇರಿತನಾಗಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದಾನೆ. ಪರೀಕ್ಷೆ ಬಳಿಕ ಬೆಂಗಳೂರಿಗೆ ಹೋಗಿದ್ದ. ಕೋಲಾರ ಬಾಡಿಗೆ ಮನೆಯಲ್ಲಿ ವಾಸವಿದ್ದ ಈ ವ್ಯಕ್ತಿಗೆ ಸೋಂಕು ತಗುಲಿದ್ದು ಹೇಗೆ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಸೋಂಕಿತ ಯಾರು

ಕೋಲಾ​ರ ಜಿಲ್ಲೆಯ ಪ್ರಧಾನ ಸಿವಿಲ್‌ ನ್ಯಾಯಾ​ಲ​ಯ​ದಲ್ಲಿ ಪ್ರಥಮ ಸಹಾ​ಯ​ಕ​ನಾಗಿ ಕರ್ತವ್ಯ ನಿರ್ವ​ಹಿ​ಸು​ತ್ತಿ​ರುವ ಮಂಡ್ಯ ಮೂಲದ ವ್ಯಕ್ತಿಗೆ ಕೊರೊನಾ ಸೋಂಕು ಇರು​ವುದು ದೃಢ​ಪ​ಟ್ಟಿದೆ.

ಮದ್ದೂರು ತಾಲೂಕು ಕಡಿ​ಲು​ವಾ​ಗಿಲು ಗ್ರಾಮದ 40 ವರ್ಷದ ವ್ಯಕ್ತಿ​ಯಲ್ಲಿ ಸೋಂಕು ಕಾಣಿ​ಸಿ​ಕೊಂಡಿದೆ. ಈತ ಮಾ.12ರಂದು ಕೋಲಾರ ಜಿಲ್ಲೆ​ಯಲ್ಲಿ ಲಾಕ್‌​ಡೌನ್‌ ಆದ ಬಳಿಕ ನ್ಯಾಯಾ​ಲ​ಯದ ರಜೆ ಮೇಲೆ ತನ್ನ ಹೆಂಡತಿ ಊರಾದ ಹಲ​ಗೂರು ಹೋಬ​ಳಿಯ ದಳ​ವಾ​ಯಿ​ಕೋ​ಡಿ​ಹಳ್ಳಿ ಗ್ರಾಮಕ್ಕೆ ಬಂದಿ​ದ್ದಾನೆ.

ಮದ್ಯದ ನಶೆಯಲ್ಲಿ ಎಮ್ಮೆ ಕುಳಿತ ಕುಡುಕ: ಲಾಕ್‌ಡೌನ್‌ ಮುಂದುವರೆಸಿ ಎಂದು ಪ್ರಧಾನಿ ಮೋದಿಗೆ ಮನವಿ..!

ಆನಂತರ ಏ.23ರಂದು ತನ್ನ ಸ್ವಂತ ಗ್ರಾಮ​ವಾದ ಕಡಿ​ಲು​ವಾ​ಗಿಲು ಗ್ರಾಮಕ್ಕೆ ಮನೆ ಗೃಹ​ಪ್ರ​ವೇಶ ಸಂಬಂಧ ಬಂದಿದ್ದು ಬಳಿಕ ಕಾರ್ಯ​ಕ್ರಮ ಮುಗಿ​ಸಿ​ಕೊಂಡು ಮತ್ತೆ ದಳ​ವಾಯಿ ಕೋಡಿ​ಹಳ್ಳಿ ಗ್ರಾಮಕ್ಕೆ ಮೇ 11ರಂದು ತನ್ನ ಸಂಬಂಧಿ ಜೊತೆ ಬೈಕ್‌​ನಲ್ಲಿ ಚನ್ನ​ಪ​ಟ್ಟ​ಣ​ದ​ವ​ರೆಗೆ ಡ್ರಾಪ್‌ ತೆಗೆ​ದು​ಕೊಂಡು ನಂತರ ಸಹ​ದ್ಯೋಗಿ ಜೊತೆ ಕೋಲಾರ ಜಿಲ್ಲೆಗೆ ತೆರ​ಳಿ​ದ್ದಾನೆ.

ಮೇ 15ರಂದು ಈತ​ನನ್ನು ಕೋವಿಡ್‌ ಪರೀ​ಕ್ಷೆಗೆ ಒಳ​ಪ​ಡಿ​ಸಿ​ದಾಗ ಸೋಂಕು ಇರು​ವುದು ದೃಢ​ಪ​ಟ್ಟಿದೆ. ಹಾಲಿ ಈತ​ನನ್ನು ಬೆಂಗ​ಳೂ​ರಿನ ವಿಕ್ಟೋ​ರಿಯಾ ಆಸ್ಪ​ತ್ರೆ​ಯಲ್ಲಿ ದಾಖ​ಲಿ​ಸ​ಲಾ​ಗಿದೆ.

Follow Us:
Download App:
  • android
  • ios