ಮಂಗಳೂರು(ಸೆ.04): ವೇದಿಕೆಯಲ್ಲಿ ಹಾಡುತ್ತಿರುವಾಗಲೇ ಗಾಯಕ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಗಣೇಶೋತ್ಸವ ಪ್ರಯುಕ್ತ ಆರ್ಕೆಸ್ಟ್ರಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ಹಾಡುತ್ತಿದ್ದ ಕಲಾವಿದ ಕಾರ್ಯಕ್ರಮದ ನಡುವೆಯೇ ಕುಸಿದುಬಿದ್ದು ಮೃತಪಟ್ಟಿದ್ದಾರೆ.

ಅರಬ್ಬಿ ಸಮುದ್ರದಲ್ಲಿ ಮುಳುಗಿದ ಸರಕು ಮೇಲೆತ್ತುವ ಹಡಗು

ಬಿಜೈ ಬಳಿಯ ಪಿಂಟೋ ಲೇನ್ ಬಳಿ ಗಣೇಶೋತ್ಸವದಲ್ಲಿ ಘಟನೆ ನಡೆದಿದೆ. ಹಾಡು ಹಾಡುತ್ತಿರುವಾಗಲೇ ಲಾವಿದ ಜೆರಿ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆ ಗೆ ಕೊಂಡೊಯ್ಯುವ ವೇಳೆ ಕಲಾವಿದೆ ಸಾವನ್ನಪ್ಪಿದ್ದಾರೆ.

ಚಾಲೆಂಜರ್ಸ್ ಪ್ರೆಂಡ್ಸ್ ಸರ್ಕಲ್ ರಸಮಂಜರಿ ಕಾರ್ಯಕ್ರಮ ಆಯೋಜಿಸಿತ್ತು. ಬಿಜೈ ಗಣೇಶೋತ್ಸವದ ಶೋಭಯಾತ್ರೆ ಹಿನ್ನೆಲೆಯಲ್ಲಿ ರಸ ಮಂಜರಿ ಆಯೋಜಿಸಲಾಗಿತ್ತು.