ಮಂಗಳೂರಿನ ಬಂದರಿನಲ್ಲಿ ಸರಕನ್ನು ಮೇಲಕ್ಕೆ ಎತ್ತುವ ಡ್ರೆಡ್ಜಿಂಗ್ ಹಡಗೊಂಡು ಮುಳುಗಿದೆ. ಇದರಲ್ಲಿದ್ದ 13 ಮಂದಿಯನ್ನು ರಕ್ಷಣೆ ಮಾಡಲಾಗಿದೆ. 

ಮಂಗಳೂರು [ಸೆ.03]: ಅರಬ್ಬಿ ಸಮುದ್ರದಲ್ಲಿ ಸರಕನ್ನು ಮೇಲೆತ್ತುವ ಡ್ರೆಡ್ಜಿಂಗ್ ಹಡಗೊಂದು ಮುಳುಗಿದ್ದು, ಭಾರೀ ದುರಂತ ತಪ್ಪಿದೆ. 

ಮಂಗಳೂರು ಬಂದರಿನಿಂದ 5 ನಾಟಿಕಲ್ ಮೈಲು ದೂರದಲ್ಲಿ ತ್ರಿದೇವಿ ಪ್ರೇಮ್ ಎಂಬ ಡ್ರೆಡ್ಜಿಂಗ್ ಹಡಗು ಮುಳುಗಿ ಹೋಗಿದ್ದು, ಇದರಲ್ಲಿದ್ದ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ.

ಸೋಮವಾರವೇ ಹಡಗು ಸಮುದ್ರದಲ್ಲಿ ಅರ್ಧಂಬರ್ಧ ಮುಳುಗಿತ್ತು. ಈ ವೇಳೆ ಅದರಲ್ಲಿದ್ದ 13 ಸಿಬ್ಬಂದಿಯನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದರು. ಇಂದು ಹಡಗು ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆಲ ತಿಂಗಳುಗಳ ಹಿಂದಷ್ಟೇ ಉಡುಪಿ ಕಡಲ ತಡಿಯಲ್ಲಿ ಮೀನುಗಾರರ ಸುವರ್ಣ ತ್ರಿಭುಜ ದೋಣಿ ನಾಪತ್ತೆಯಾಗಿ ಅದರಲ್ಲಿದ್ದ 7 ಮಂದಿ ಮೀನುಗಾರರು ಕಣ್ಮರೆಯಾಗಿದ್ದರು. ಇದುವರೆಗೂ ಮೀನುಗಾರರ ಪತ್ತೆಯಾಗಿಲ್ಲ.