ಮಂಡ್ಯ[ಆ. 01]  ತಾಯಿಯ ಅಸ್ಥಿ ವಿಸರ್ಜನೆ ವೇಳೆ ನದಿಯಲ್ಲಿ ಮಗ ಕೊಚ್ಚಿ ಹೋಗಿದ್ದಾನೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ಬಳಿಯ ಕಾವೇರಿ ನದಿ ಸಂಗಮದಲ್ಲಿ ದುರ್ಘಟನೆ ನಡೆದಿದೆ.

ಶ್ರೀಕಾಂತ್ (45 ) ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಶ್ರೀಕಾಂತ್ ಬೆಂಗಳೂರಿನ ರಾಜಾಜಿ ನಗರ ನಿವಾಸಿ. ತಾಯಿ ಅಂಬುಜಾ ಅವರ ಅಸ್ತಿ ವಿಸರ್ಜನೆಗಾಗಿ 5 ಜನರ ಜೊತೆ ಸಂಗಮಕ್ಕೆ ಶ್ರೀಕಾಂತ್ ಬಂದಿದ್ದರು.

ಈಕ್ವಲ್ ಜಸ್ಟೀಸ್... ಸಂಸತ್‌ನಲ್ಲಿ ಕಾವೇರಿ ಕತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸುಮಲತಾ

ಮೃತ ದೇಹಕ್ಕಾಗಿ ಶೋಧ ಅಗ್ನಿಶಾಮಕ ಸಿಬ್ಬಂದಿ,ಪೋಲಿಸರಿಂದ ಶೋಧ ಕಾರ್ಯ ಮುಂದುವರಿಸಿದ್ದಾರೆ. ಶ್ರೀರಂಗಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.