ಮಂಡ್ಯ(ಡಿ.9): 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಇಂದು ಹೊರಬೀಳಲಿದ್ದು, ನಕಲಿ ಪಾಸ್‌ ಹಿಡಿದು ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಲು ಪ್ರಯತ್ನಿಸಿರುವ ಘಟನೆ ಮಂಡ್ಯದ ಕೆ. ಆರ್. ಪೇಟೆಯಲ್ಲಿ ನಡೆದಿದೆ.

ಸ್ಟ್ರಾಂಗ್‌ ರೂಂ ಒಳಗೆ ಅಕ್ರಮವಾಗಿ ಪ್ರವೇಶಕ್ಕೆ ಪ್ರಯತ್ನಿಸಿದ್ದು, ಪೊಲೀಸರು ವ್ಯಕ್ತಿಯನ್ನು ಗೇಟ್ ಬಳಿಯೇ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಕಲಿ ಪಾಸ್ ನೊಂದಿಗೆ ಒಳ ಪ್ರವೇಶಕ್ಕೆ ಯತ್ನ ನಡೆಸಿದ್ದು, ಲೋಕಸಭಾ ಚುನಾವಣೆ ವೇಳೆ ವಿತರಿಸಿದ್ದ ಪಾಸ್ ಹಿಡಿದು ಒಳಗೆ ಪ್ರವೇಶಿಸಲು ಪ್ರಯತ್ನಿಸಲಾಗಿದೆ. ವ್ಯಕ್ತಿ ನಕಲಿ ಮತ ಎಣಿಕೆ ಏಜೆಂಟ್ ಪಾಸ್ ಹೊಂದಿದ್ದ.

ಯುವಕರೆಲ್ಲರೂ ಸ್ತ್ರೀಯರ ರಕ್ಷಣೆಗೆ ನಿಲ್ಲಲಿ : ಡಿಕೆಶಿ

ಇಂದು ಅಭ್ಯರ್ಥಿಗಳ ಹಣೆ ಬರಹ ಬಯಲಾಗಲಿದ್ದು ಮತ ಎಣಿಕಾ ಕಾರ್ಯಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿದೆ. ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿರುವ ಎಣಿಕಾ ಕಾರ್ಯ ಆರಂಭವಾಗಲಿದ್ದು, ಕೆ.ಆರ್.ಪೇಟೆಯ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. 1 ಕೊಠಡಿಯಲ್ಲಿ 14  ಟೇಬಲ್‌ಗಳಿದ್ದು, 19 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.

ಬೆಂಗಳೂರಲ್ಲಿ 11 ತಿಂಗಳಲ್ಲಿ 133 ರೇಪ್‌ ಕೇಸ್‌!

ಪ್ರತೀ ಟೇಬಲ್‌ಗೆ ತಲಾ ಒಬ್ಬರು ಎಣಿಕಾ ಮೇಲ್ವಿಚಾರಕ, ಎಣಿಕಾ ಸಹಾಯರು ಹಾಗೂ ಒಬ್ಬರು ಎಣಿಕಾ ಮೈಕ್ರೋ ಅಬ್ಸರ್ವರ್ ಗಳು ಇರಲಿವೆ. ಕ್ಷೇತ್ರದಲ್ಲಿ ಒಟ್ಟು 2,08,254 ಮತಗಳಿದ್ದು, 1,67,685 ಮತಗಳು ಚಲಾವಣೆಯಾಗಿದ್ದವು. ಎಸ್ಪಿ ಪರಶುರಾಮ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಕಣದಲ್ಲಿ 7 ಅಭ್ಯರ್ಥಿಗಳಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ, ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್, ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಸೇರಿ ಕಣದಲ್ಲಿ 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಉಪ ಚುನಾವಣೆ ಫಲಿತಾಂಶ: 11 ಗಂಟೆಗೆ ಚಿತ್ರಣ