ಬಂಟ್ವಾಳ (ಅ.21): ಶೇಂದಿ ತೆಗೆಯಲು ಹೋದ ವ್ಯಕ್ತಿಯೊಬ್ಬರು ಸಂಶಯಾಸ್ಪದವಾಗಿ ಮೃತಪಟ್ಟಘಟನೆ ಬಂಟ್ವಾಳ ಠಾಣಾ ವ್ಯಾಪ್ತಿಯ ಕರ್ಪೆ ಎಂಬಲ್ಲಿ ನಡೆದಿದೆ. 

ಮೃತಪಟ್ಟವ್ಯಕ್ತಿಯನ್ನು ಕರ್ಪೆ ನಿವಾಸಿ ನಾರಾಯಣ ಪೂಜಾರಿ (50) ಎಂದು ಗುರುತಿಸಲಾಗಿದೆ. ಶೇಂದಿ ತೆಗೆಯುವ ಕೆಲಸ ಮಾಡುತ್ತಿದ್ದ ಇವರು ಎಂದಿನಂತೆ ಮನೆಯಿಂದ ಶೇಂದಿ ತೆಗೆಯಲು ಹೋಗಿದ್ದರು.

 ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಶೇಂದಿ ಮರದ ಬುಡದಲ್ಲಿ ದೇಹವೆಲ್ಲ ರಕ್ತಸಿಕ್ತವಾಗಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಜಡ್ಜ್‌ಗೆ ಸ್ಫೋಟಕ ಬೆದರಿಕೆ ಹಾಕಿದ್ದವ ಅರೆಸ್ಟ್‌ ...

ನಾರಾಯಣ ಪೂಜಾರಿ ಅವರ ಸಾವಿನ ಬಗ್ಗೆ ಸಾಕಷ್ಟು ಸಂಶಯಗಳು ಮೂಡುತ್ತಿದ್ದು, ಶೇಂದಿ ತೆಗೆಯಲು ಹೋದವರು ಹಾಳೆ ಮರದಿಂದ ಬಿದ್ದು ಮೃತಪಟ್ಟಿದ್ದಾರೆಯೇ ಅಥವಾ ಇವರನ್ನು ಕೊಲೆ ಮಾಡಿದ್ದಾರೆಯೇ ಎಂಬುದು ಪೊಲೀಸ್‌ ತನಿಖೆಯ ನಂತರ ತಿಳಿಯಬೇಕಿದೆ. 

ಘಟನಾ ಸ್ಥಳಕ್ಕೆ ಬಂಟ್ವಾಳ ಠಾಣಾ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ, ಬಂಟ್ವಾಳ ಗ್ರಾಮಾಂತರ ಎಸ್ ಐ. ಪ್ರಸನ್ನ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.