Bagalkote; ಅಕ್ರಮ ಸಾರಾಯಿ ಕಡಿವಾಣಕ್ಕಾಗಿ ಪಂಚಾಯತ್‌ ಕಟ್ಟಡ ಏರಿ ಆತ್ಮಹತ್ಯೆ ಯತ್ನದ ಬೆದರಿಕೆ

ವ್ಯಕ್ತಿಯೊಬ್ಬ ತಮ್ಮ ಗ್ರಾಮದಲ್ಲಿ ಅಕ್ರಮ ಸಾರಾಯಿ ನಿಷೇಧ ಮಾಡುವಂತೆ ಆಗ್ರಹಿಸಿ ಆತ್ಮಹತ್ಯೆ ಮಾಡಿಕೊಳ್ಳೋಕೆ ಗ್ರಾಮ ಪಂಚಾಯತಿ ಕಟ್ಟಡ ಏರಿ ಪ್ರತಿಭಟನೆ ನಡೆಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

Man suicide threaten for demand ban illegal liquor in bagalkote gow

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್

ಬಾಗಲಕೋಟೆ (ಸೆ.5): ಸಾಮಾನ್ಯವಾಗಿ ಅಕ್ರಮ ಸಾರಾಯಿ ಬಂದ್ ಮಾಡುವಂತೆ ಕೆಲವು ಗ್ರಾಮಗಳಲ್ಲಿ ಗ್ರಾಮಸ್ಥರು ಪ್ರತಿಭಟನೆ ಮಾಡೋದನ್ನ, ಬಂದ್ ಕರೆಗಳನ್ನ ಮಾಡೋದನ್ನ ನೋಡಿದಿವಿ ಆದರೆ ಇಲ್ಲೊಬ್ಬ ವ್ಯಕ್ತಿ  ತಮ್ಮ ಗ್ರಾಮದ ಗ್ರಾಮ ಪಂಚಾಯತಿ ಕಟ್ಟಡವನ್ನು ಏರಿ ಅಕ್ರಮ ಸಾರಾಯಿ ಬಂದಗೊಳಿಸುವಂತೆ ಆಗ್ರಹಿಸಿ ಆತ್ಮಹತ್ಯೆ ಯತ್ನ ಮಾಡಿಕೊಳ್ಳಲು ಮುಂದಾಗಿದ್ದ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಸಂಬಂಧ ವಿಡಿಯೋ ಮೈರಲ್ ಆಗಿದೆ.  ವ್ಯಕ್ತಿಯೊಬ್ಬ ತಮ್ಮ ಗ್ರಾಮದಲ್ಲಿ ಅಕ್ರಮ ಸಾರಾಯಿ ನಿಷೇಧ ಮಾಡುವಂತೆ ಆಗ್ರಹಿಸಿ ಆತ್ಮಹತ್ಯೆ ಮಾಡಿಕೊಳ್ಳೋಕೆ ಗ್ರಾಮ ಪಂಚಾಯತಿ ಕಟ್ಟಡ ಏರಿ ಪ್ರತಿಭಟನೆ ನಡೆಸಿದ್ದಾನೆ. ಈ ಮೂಲಕ ಹೈಡ್ರಾಮಾ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕಾಕನೂರ ಗ್ರಾಮದಲ್ಲಿ ನಡೆದಿದೆ. ಕಾಕಪ್ಪ  ಎಂಬ ವ್ಯಕ್ತಿಯು ಕಾಕನೂರು ಗ್ರಾಮದಲ್ಲಿ ಅಕ್ರಮ ಸಾರಾಯಿ ನಿಷೇಧ ಮಾಡುವಂತೆ ಪಂಚಾಯತ್ ಅಧ್ಯಕ್ಷರಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಆದರೂ ಈ ಮನವಿಗೆ ಯಾರೂ ಆತನಿಗೆ ಸ್ಪಂದನೆ ನೀಡಿಲ್ಲ, ಹೀಗಾಗಿ ಏನಾದರೂ ಮಾಡಿ ಈ ಬಗ್ಗೆ ಗಮನ ಸೆಳೆಯಬೇಕೆಂದು ಯೋಚನೆ ಹಾಕಿಕೊಂಡಿದ್ದ.

ಕಾಕನೂರ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ನಡೆಯುತ್ತಿದೆ, ಹೀಗಾಗಿ ಈ ಬಗ್ಗೆ ಹೇಗಾದರೂ ಮಾಡಿ ಸಮಸ್ಯೆಯನ್ನ ಮುಂದಿಡಬೇಕೆಂದು ಯೋಚಿಸಿದ ಕಾಕಪ್ಪ, ತಕ್ಷಣ ಪ್ಲ್ಯಾನ್ ವೊಂದನ್ನ ಮಾಡಿ ಗ್ರಾಮದಲ್ಲಿರೋ  ಗ್ರಾಮ ಪಂಚಾಯತ್ ಕಟ್ಟಡ ಮೇಲೆ ಏರಿ ಕುಳಿತ, ಕುಳಿತುಕೊಂಡು ತಮ್ಮ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿ ನಿಷೇಧ ಮಾಡಿ,ನಾನು ಮನೆ ಕೇಳಲ್ಲ,ನೀರು ಕೇಳಲ್ಲ ಸಾರಾಯಿ ಬಂದ್ ಮಾಡಿರಿ.ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿಡಿಓ ಹಾಗೂ ಸಂಭಂದಪಟ್ಟವರು ಗಮನ ಹರಿಸಬೇಕು ಇಲ್ಲವಾದಲ್ಲಿ ಪಂಚಾಯತ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅವಾಜ್ ಹಾಕಿದ.

Bagalkote: ರಂಗನಾಥ ಸ್ವಾಮಿಗೆ ಇಲ್ಲಿ ಸಾರಾಯಿ ನೈವೇದ್ಯ: ಮದ್ಯ ನೈವೇದ್ಯ ಸಲ್ಲಿಸಿ ಕೃತಾರ್ಥರಾಗ್ತಾರೆ ಭಕ್ತವೃಂದ

ಪಂಚಾಯಿತಿ ಕಟ್ಟಡ ಮೇಲೆ ಕುತ್ತಿಗೆಗೆ ಹಗ್ಗ ಹಾಕಿಕೊಂಡು ಹೈಡ್ರಾಮಾ 
ಇನ್ನು ಗ್ರಾಮದ ಪಂಚಾಯತಿ ಕಟ್ಟಡ ಏರಿದ್ದ ಕಾಕಪ್ಪ ಕುತ್ತಿಗೆಗೆ ತನ್ನ ಕೈಯಲ್ಲಿದ್ದ ಟವಲ್ ಸುತ್ತು ಹಾಕಿಕೊಂಡು ಕಟ್ಟಡದ ಕಂಬಕ್ಕೆ ಕಟ್ಟಿಹಾಕಿ ಕೂತಿದ್ದ. ಬಂದವರಿಗೆಲ್ಲಾ ತಾನು ಯಾವ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿದ್ದೇನೆ, ತನ್ನ ಬೇಡಿಕೆ ಏನು ಅಂತ ತಿಳಿಸುತ್ತಿದ್ದ, ಹೀಗೆ ಸುಮಾರು ಒಂದು ಗಂಟೆ ಕಾಲ ಮುಂದುವರೆದಾಗ, ಊರಿನ ಯುವಕರೆಲ್ಲಾ ಪಂಚಾಯತಿ ಬಳಿ ಸೇರಲಾರಂಭಿಸಿದರು. ಯಾರೇ ಹೇಳಿದರೂ ಕಾಕಪ್ಪ ಕೆಳಗಡೆ ಇಳಿಯಲಿಲ್ಲ. ನಂತರ ಗ್ರಾಮದ ಯುವಕರು ಹಾಗೂ ಹಿರಿಯ ಮುಖಂಡರು ಸೇರಿಕೊಂಡು ಕಾಕಪ್ಪನ ಮನ ಒಲಿಸುವ ಯತ್ನ ನಡೆಸಿದರು, ಗ್ರಾಮದಲ್ಲಿ ಅಕ್ರಮ ಸಾರಾಯಿ ಬಂದ ಮಾಡುತ್ತೇವೆ ಎಂದು ಭರವಸೆ ನೀಡಿದ ಬಳಿಕ ಕಟ್ಟಡದ ಮೇಲೆ ಇರುವ ವ್ಯಕ್ತಿಯನ್ನು ಕೆಳಗೆ ಇಳಿಸುವಲ್ಲಿ ಯಶಸ್ಸು ಕಂಡರು.

ಮದುವೆ ಮಂಟಪದಲ್ಲೇ ವಧುವರರಿಗೆ ಸಾರಾಯಿ ಕುಡಿಸಿದ ಸ್ನೇಹಿತರು

ಪಂಚಾಯತಿ ಬಳಿಯ ಹೈಡ್ರಾಮಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ 
ಕಾಕನೂರು ಗ್ರಾಮದಲ್ಲಿ ಅಕ್ರಮ ಸಾರಾಯಿ ನಿಷೇಧ ಮಾಡುವಂತೆ ನಡೆಸಿರುವ ಕಾಕಪ್ಪನ ಈ ಹೈ ಡ್ರಾಮಾದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Latest Videos
Follow Us:
Download App:
  • android
  • ios