ಬೆಂಗಳೂರು(ಜು.03): ಪ್ರಧಾನಿ ಕಚೇರಿ ಸಲಹೆಗಾರ ಎಂದು ನಕಲಿ ಗುರುತಿನ ಚೀಟಿ ನೀಡಿ ಪ್ರತಿಷ್ಠಿತ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ಕಿಡಿಗೇಡಿಯೊಬ್ಬನ ವಿರುದ್ಧ ಕಬ್ಬನ್‌ ಪಾರ್ಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅನಿಕೇತ್‌ ದೇ ಎಂಬಾತನೆ ವಂಚಿಸಿದ್ದು, ಕೃತ್ಯ ಎಸಗಿ ಪರಾರಿಯಾಗಿರುವ ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕೆಲ ದಿನಗಳ ಹಿಂದೆ ಕಬ್ಬನ್‌ ಪಾರ್ಕ್ ಸಮೀಪ ಐಟಿಸಿ ಗಾರ್ಡೆನಿಯಾ ಹೋಟೆಲ್‌ನಲ್ಲಿ ಅನಿಕೇತ್‌ ವಾಸ್ತವ್ಯ ಹೂಡಿದ್ದ ತೆರಳಿದ್ದ. ಆತನ ಪೂರ್ವಾಪರ ವಿಚಾರಿಸಿದಾಗ ವಂಚನೆ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೈಯಪ್ಪನಹಳ್ಳಿ 3ನೇ ಕೋಚಿಂಚ್‌ ಟರ್ಮಿನಲ್‌ ಪೂರ್ಣ: ಮೆಜೆಸ್ಟಿಕ್, ಯಶವಂತಪುರದಿಂದ 64 ಟ್ರೈನ್ ಶಿಫ್ಟ್

ಪ್ರಧಾನ ಮಂತ್ರಿಗಳ ಕಚೇರಿಯ ರಾಷ್ಟ್ರೀಯ ಭದ್ರತಾ ವಿಭಾಗದ ಯುವ ಸಲಹೆಗಾರ ಎಂದು ರಾಷ್ಟ್ರೀಯ ಚಿಹ್ನೆಯನ್ನು ಬಳಸಿ ಅಧಿಕೃತ ವಿಸಿಟಿಂಗ್‌ ಕಾರ್ಡ್‌ ಎಂಬಂತೆ ನಕಲು ಮಾಡಿಕೊಂಡಿದ್ದ. ಮೇಕ್‌ ಮೈ ಟ್ರಿಪ್‌ ಎಂಬ ವೆಬ್‌ಸೈಟ್‌ನಿಂದ ಕಬ್ಬನ್‌ ಪಾರ್ಕ್ ಹತ್ತಿರದ ಐಟಿಸಿ ಗಾರ್ಡೇನಿಯಾ ಹೋಟೆಲ್‌ನಲ್ಲಿ ರೂಂ ಬುಕ್‌ ಮಾಡಿ ಜೂ.16 ರಿಂದ 20 ವರೆಗೆ ತಂಗಿದ್ದ. ಆದರೆ ಅನಿಕೇತ್‌ ಹೆಸರಿನ ಅಧಿಕಾರಿಗಳು ಪ್ರಧಾನಿ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿಲ್ಲ. ಈ ಬಗ್ಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.