ಮೈಸೂರು(ಮಾ.06): ಪತ್ನಿಯ ಮೃತದೇಹಕ್ಕೆ ಮಚ್ಚಿನಿಂದ ಬಾರಿ ಬಾರಿ ಚುಚ್ಚಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಸತ್ತಿದ್ದ ಪತ್ನಿ ಕುತ್ತಿಗೆಗೆ ಯದ್ವಾತದ್ವ ಮಚ್ಚಿನಿಂದ ಕೊಚ್ಚಿರುವ ವಿಕೃತ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ.

ಮಮತಾ(23) ತಂದೆಯಿಂದಲೇ ಕೊಲೆಯಾದ ದುರ್ದೈವಿ. ಮೈಸೂರು ಜಿಲ್ಲೆಯಲ್ಲಿ ಭೀಕರ ಕೊಲೆ ನಡೆದಿದ್ದು, ತಂದೆ ಕೈಹಿಡಿದ ಮತ್ನಿಗೆ ಚಾಕು ಚುಚ್ಚಿದ್ದಾನೆ. ಸತ್ತಿರುವ ಪತ್ನಿ ಕುತ್ತಿಗೆಯನ್ನು ಮಚ್ಚಿನಿಂದ ಯದ್ವಾದತ್ವ ಕೊಚ್ಚಿದ್ದು, ಮೈಸೂರು ತಾಲೂಕಿನ ಹೊಸ ಕಾಮನಕೊಪ್ಪಲು ಗ್ರಾಮದಲ್ಲಿ ಘಟನೆ ನಡೆದಿದೆ.

ತುಮಕೂರಲ್ಲಿ ಭೀಕರ ಅಪಘಾತ: 13 ಜನ ದುರ್ಮರಣ

ಆರೋಪಿ ಪತಿ ನಾಗೇಶ್‌ನನ್ನು ಬಂಧಿಸಲಾಗಿದೆ. ಕೊಲೆ ಮಾಡಿ ಮನೆಯಲ್ಲೇ ಇದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ಮಮತಾ ಆರೋಪಿ ನಾಗೇಶ್​ ಎರಡನೇ ಪತ್ನಿಯಾಗಿದ್ದಾರೆ. 
ಮೊದಲ ಪತ್ನಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಬರ್ತ್ ಡೇ ದಿನವೇ ಬಿಜೆಪಿ ಮುಖಂಡನ ಬರ್ಬರ ಹತ್ಯೆ

ಆಗಾಗ ಕೌಟುಂಬಿಕ ಕಲಹ ನಡೆಯುತ್ತಿತ್ತು. ಗಲಾಟೆ ಬಿಡಿಸಲು ಮಮತಾ ತಂದೆ ಬಂದಿದ್ದರು. ಮಾವನ ಎದುರೇ ನಾಗೇಶ್ ಪತ್ನಿಯ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಪತ್ನಿಗೆ ಮಚ್ಚಿನಿಂದ ಹತ್ತಕ್ಕೂ ಹೆಚ್ಚು ಬಾರಿ ಹಲ್ಲೆ ಮಾಡಿದ್ದಾನೆ. ಇಲವಾಲ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಮೃತದೇಹ ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.