ಮೈಸೂರು(ಫೆ.01): ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಬೇರೊಬ್ಬನ ಜೊತೆ ಸಂಸಾರ ಮಾಡಿಕೊಂಡು, ಟಿಕ್‌ಟಾಕ್ ವಿಡಿಯೋ ಮಾಡಿ ಪತಿಗೆ ಟಾಂಗ್ ಕೊಡುತ್ತಿದ್ದವಳಿಗೆ ಪತಿ ಚಾಕುವಿನಿಂದ ಇರಿದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಕೌಟುಂಬಿಕ ಕಲಹದಿಂದ ತನ್ನ ಪತ್ನಿಗೆ ಗಂಡನೇ ಚಾಕು ಇರಿದಿದ್ದಾನೆ. ಹೆಂಡತಿ‌ ಟಿಕ್‌ಟಾಕ್ ನಿಂದ ಬೇಸರಗೊಂಡು ಕೊಲೆಯತ್ನ ನಡೆಸಿದ್ದು, ಘಟನೆ ನಂತರ ಪೊಲೀಸರಿಗೆ ಶರಣಾಗಿದ್ದಾನೆ.

ಮಂಗಳೂರು: ಕತ್ತು ಸೀಳಿ ಯುವಕನ ಕೊಲೆ

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಘಟನೆ ನಡೆದಿದ್ದು, ಶ್ರೀನಿವಾಸ್ ಪತ್ನಿಗೆ ಚಾಕು ಹಾಕಿದ ಪತಿ. ಶ್ರೀನಿವಾಸ್ 10 ವರ್ಷಗಳ ಹಿಂದೆ ಸವಿತಾ ಎಂಬುವವರನ್ನು ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದು, ಆಗಾಗ ಇವರ ಮಧ್ಯೆ ಜಗಳ ಆಗುತ್ತಿತ್ತು ಎನ್ನಲಾಗುತ್ತಿದೆ.

ಇವರಿಬ್ಬರ ಮಧ್ಯೆ ಮತ್ತೆ ಜಗಳವಾಗಿದ್ದು, ಕೋಪಗೊಂಡ ಶ್ರೀನಿವಾಸ್​ ತನ್ನ ಪತ್ನಿ ಸವಿತಾ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ. ಪರಿಣಾಮ ಸವಿತಾ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ಶ್ರೀನಿವಾಸ್​, ನನ್ನ ಹೆಂಡ್ತಿಯನ್ನು ನಾನೇ ಚಾಕುವಿನಿಂದ ಇರಿದಿದ್ದೇನೆ ಎಂದು ಪೊಲೀಸರಿಗೆ ಶರಣಾಗಿದ್ದಾನೆ.

ಗಂಡನ ಬಿಟ್ಟು ಬಂದವಳಿಗೆ ಬೇಕಿತ್ತು ಪುರುಷನ ಸಂಗ, ಬಾವಿಯಲ್ಲಿತ್ತು ಇಬ್ಬರ ಹೆಣ

ನನ್ನನ್ನು ಮತ್ತು ಮಕ್ಕಳನ್ನು ದೂರ ಮಾಡಿ ಬೇರೊಬ್ಬರೊಂದಿಗೆ ಸವಿತಾ ಜೀವನ ನಡೆಸುತ್ತಿದ್ದಳು. ಪ್ರತಿದಿನ ಟಿಕ್ ಟಾಕ್ ಮಾಡಿ ನನ್ನನ್ನು ಅಣಕಿಸಿ ವಾಟ್ಸಪ್​​ನಲ್ಲಿ ಹೀಯಾಳಿಸುವ ಸ್ಟೋರಿ ಹಾಕುತ್ತಿದ್ದಳು. ಮಕ್ಕಳ ಹುಟ್ಟುಹಬ್ಬಕ್ಕೆ ಮನೆಗೆ ಬಂದಿದ್ದಾಗ ನಾನು ಈ ಕೃತ್ಯ ಎಸಗಿದ್ದೇನೆ ಎಂದು ಹೇಳಿದ್ದಾನೆ. ಸವಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪಿರಿಯಾಪಟ್ಟಣ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.