ಮಂಗಳೂರು(ಫೆ.27): ಗುದನಾಳದಲ್ಲಿ ಚಿನ್ನದ ಕ್ಯಾಪ್ಸೂಲ್‌ಗಳನ್ನಿಟ್ಟು ದುಬೈನಿಂದ ಅಕ್ರಮ ಕಳ್ಳಸಾಗಣೆ ಮಾಡುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಮಂಗಳವಾರ ಮತ್ತೊಂದು ಇಂಥದ್ದೇ ಪ್ರಕರಣವನ್ನು ಕಸ್ಟಮ್ಸ್‌ ಅಧಿಕಾರಿಗಳು ಪತ್ತೆಹಚ್ಚಿ 26 ಲಕ್ಷ ಮೌಲ್ಯದ 619 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕಾಸರಗೋಡು ಉಪ್ಪಳ ಮೂಲದ ಮೊಯ್ದೀನ್‌ ಅರ್ಝನ್‌ ಬಂಧಿತ ಆರೋಪಿ. ಈತ ದುಬೈನಿಂದ ಏರ್‌ ಇಂಡಿಯಾ ವಿಮಾನದ ಮೂಲಕ ಮಂಗಳವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಕಸ್ಟಮ್ಸ್‌ ಅಧಿಕಾರಿಗಳ ತಪಾಸಣೆ ಸಂದರ್ಭ ಸಿಕ್ಕಿಬಿದ್ದಿದ್ದಾನೆ.

ಗುದನಾಳದಲ್ಲಿ 58 ಲಕ್ಷ ಮೌಲ್ಯದ ಚಿನ್ನ ಸಾಗಾಟ

26.30 ಲಕ್ಷ ಮೌಲ್ಯದ 24 ಕ್ಯಾರೆಟ್‌ ಚಿನ್ನದ ಕ್ಯಾಪ್ಸೂಲ್‌ಗಳನ್ನು ವಶಪಡಿಸಲಾಗಿದೆ. ಆರೋಪಿಯು ಚಿನ್ನವನ್ನು ಪೇಸ್ವ್‌ ರೂಪಕ್ಕಿಳಿಸಿ ರಬ್ಬರ್‌ ಕ್ಯಾಪ್ಸೂಲ್‌ ಮಾಡಿ ಗುದನಾಳದಲ್ಲಿ ಅಡಗಿಸಿಟ್ಟಿದ್ದ. ಇದೇ ರೀತಿ ಪ್ರಕರಣ ಈ ಹಿಂದೆಯೂ ನಡೆದಿತ್ತು.

ಗುದನಾಳದಲ್ಲಿಟ್ಟು 633 ಗ್ರಾಂ ಚಿನ್ನ ಅಕ್ರಮ ಸಾಗಣೆ..!