ಮನುಷ್ಯ ಧರ್ಮದ ಸಾರ ಅರಿತು ಬಾಳಬೇಕು: ಶಾಸಕ ವಿಜಯೇಂದ್ರ

ಮನುಷ್ಯ ಧರ್ಮದ ನೆರಳಿನಲ್ಲಿ ನಡೆಯಬೇಕು, ಅದರ ಜೊತೆಗೆ ಧರ್ಮದ ಸಾರವನ್ನು ತಿಳಿಯಬೇಕು. ಇಂತಹ ಧರ್ಮ ಉಳಿಸುವ ಶ್ರೇಷ್ಠ ಕಾರ್ಯವನ್ನು ಧರ್ಮಸ್ಥಳದ ಶ್ರೀ ಕ್ಷೇತ್ರ ಮಾಡುತ್ತಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. 

Man should know the essence of religion and live Says MLA BY Vijayendra gvd

ಶಿರಾಳಕೊಪ್ಪ (ಅ.13): ಮನುಷ್ಯ ಧರ್ಮದ ನೆರಳಿನಲ್ಲಿ ನಡೆಯಬೇಕು, ಅದರ ಜೊತೆಗೆ ಧರ್ಮದ ಸಾರವನ್ನು ತಿಳಿಯಬೇಕು. ಇಂತಹ ಧರ್ಮ ಉಳಿಸುವ ಶ್ರೇಷ್ಠ ಕಾರ್ಯವನ್ನು ಧರ್ಮಸ್ಥಳದ ಶ್ರೀ ಕ್ಷೇತ್ರ ಮಾಡುತ್ತಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ಇಲ್ಲಿಗೆ ಸಮೀಪದ ಬಸವನಂದಿಹಳ್ಳಿ ಚೆನ್ನಬಸವೇಶ್ವರ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌, ಶಿಕಾರಿಪುರ, ಲಯನ್ಸ್ ಕ್ಲಬ್ ಶಿರಾಳಕೊಪ್ಪ, ಮದ್ಯವಜರ್ನ ವ್ಯವಸ್ಥಾಪನಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಒಂದು ವಾರದಿಂದ ನಡೆಯುತ್ತಿರುವ ಮದ್ಯವರ್ಜನ ಶಿಬಿರ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು. 

ರಾಜ್ಯದಲ್ಲಿ ಧರ್ಮವನ್ನು ಉಳಿಸುವ, ಬೆಳೆಸುವ ಕಾರ್ಯವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ ಕುಡಿತದಿಂದ ಈಡೀ ಕುಟುಂಬ ನಾಶವಾಗುತ್ತದೆ. ಇಂದು ಮದ್ಯವರ್ಜನ ಶಿಬಿರ ಮುಖೇನ ಇಡೀ ಕುಟುಂಬಕ್ಕೆ ನ್ಯಾಯ ಒದಗಿಸಿಕೊಟ್ಟಂತಾಗಿದೆ ಎಂದು ತಿಳಿಸಿದರು. ಟ್ರಸ್ಟ್‌ ನಿರ್ದೇಶಕ ಬಾಬು ನಾಯಕ್ ಮಾತನಾಡಿ, ಜನಜಾಗೃತಿ ವೇದಿಕೆ ಸಹಕಾರದಿಂದ ಈವರೆಗೆ 1737ನೇ ಮದ್ಯವರ್ಜನ ಶಿಬಿರ ಇದಾಗಿದೆ. ಇದರಿಂದ ಲಕ್ಷಾಂತರ ಜನರನ್ನು ಕುಡಿತದ ದುಶ್ಚಟ ಬಿಡಿಸಿ, ಸಮಾಜದ ಮುಖ್ಯವಾಹಿನಿಗೆ ಕರೆತರಲಾಗಿದೆ. ಪುನಃ ಅವರಿಗೆ ಸಮಾಜದಲ್ಲಿ ಸ್ಥಾನಮಾನ ದೊರಕುವಂತೆ ಮಾಡಿದ್ದೇವೆ ಎಂದರು.

ಹಿರೇಮಾಗಡಿಯ ಶಿವಮೂರ್ತಿ ಶಿವಾಚಾರ್ಯ ಮುರುಘರಾಜೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದರು. ವೇದಿಕೆ ಮೇಲೆ ಎಂಎಡಿ.ಬಿ ಮಾಜಿ ಅಧ್ಯಕ್ಷ ಕೆ.ಎಸ್ .ಗುರುಮೂರ್ತಿ, ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಮದ್ಯವರ್ಜನ ಶಿಬಿರದ ಸಮಿತಿ ಅಧ್ಯಕ್ಷ ಯೋಗಿರಾಜ್ ಗೌರವ ಅಧ್ಯಕ್ಷ ಲಯನ್ ಗಿರೀಶ್, ಕೆ.ರೇವಣಪ್ಪ, ನಿವೇದಿತಾ ರಾಜು, ಸಣ್ಣ ಹನುಮಂತ್ಪಪ್, ಚನ್ನವೀರ ಶೆಟ್ಟಿ ಸೇರಿದಂತೆ ಇತರ ಪ್ರಮುಖರು ಹಾಜರಿದ್ದರು.

ರೈತರ ಅನುದಾನಕ್ಕೆ ಸಿದ್ದರಾಮಯ್ಯ ಕತ್ತರಿ: ಜಿ.ಟಿ.ದೇವೆಗೌಡ ಆರೋಪ

ದೇಶದಲ್ಲಿ ಪ್ರತಿವರ್ಷ 4 ಲಕ್ಷ ಜನರು ಮದ್ಯಪಾನದಿಂದ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ನಾವು ಈ ದಿನ ಪ್ರತಿಜ್ಞೆ ಮಾಡಿ ನಮ್ಮ ಗ್ರಾಮದಲ್ಲಿ ಯಾರೇ ಕುಡಿಯುತ್ತಿದ್ದರೂ ಅವರನ್ನು ಕುಡಿತದ ಚಟದಿಂದ ಬಿಡಿಸಿ ಸರಿದಾರಿಗೆ ತರುವ ಕಾರ್ಯ ಮಾಡಬೇಕಿದೆ. ಶಾಸಕನಾದ ಮೇಲೆ 158 ಗ್ರಾಮಗಳಿಗೆ ಭೇಟಿ ನೀಡಿ, ತಾಲೂಕಿನಲ್ಲಿ ಜನರ ಮಧ್ಯೆ ಕೆಲಸ ಮಾಡುತ್ತಿದ್ದೇನೆ
- ಬಿ.ವೈ.ವಿಜಯೇಂದ್ರ, ಶಾಸಕ, ಶಿಕಾರಿಪುರ ಕ್ಷೇತ್ರ

Latest Videos
Follow Us:
Download App:
  • android
  • ios