ಬಾಗಲಕೋಟೆ(ಮೇ.09): ಕೊರೋನಾ ಆತಂಕದ ಮಧ್ಯೆ ಲಾಕ್‌ಡೌನ್ ಸಡಿಲಿಕೆ ಮಾಡಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದಕ್ಕೆ 8 ವರ್ಷದ ಬಾಲಕಿಯೂ ವಿರೋಧ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ನಡೆದಿದೆ.

ರಾಜ್ಯದಲ್ಲಿ ಮತ್ತೆ ಮದ್ಯ ಮಾರಾಟ ಆರಂಭಿಸಿದ್ದಕ್ಕೆ 8 ವರ್ಷದ ಸ್ಪೂರ್ತಿ ಹುಲ್ಲಿಕೇರಿ ಎಂಬ ಬಾಲಕಿ ವಿಡಿಯೋ ಮೂಲಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಮದ್ಯ ಯಾಕೆ ಬಂದ್‌ ಮಾಡಿಸ್ತಿಲ್ಲ ಎಂದು ಪ್ರಶ್ನಿಸಿದ್ದಾಳೆ. ಜೊತೆಗೆ ಮದ್ಯ ಬಂದ್ ಮಾಡಿಸಿ ಎಂದು ಬಾಲಕಿ ಮನವಿ ಕೂಡ ಮಾಡಿಕೊಂಡಿದ್ದಾಳೆ.

ಮದ್ಯ ಸೇವಿಸಿ ಕೊರೋನಾ ಚೆಕ್‌ಪೋಸ್ಟ್‌ ಮೇಲೆ ಲಾರಿ ಹತ್ತಿಸಿದ ಚಾಲಕ..!

ಬಾಲಕಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಹಿಂದೆಯೂ ಕೂಡ ಮದ್ಯ ಬಂದ್ ಮಾಡಿಸಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದ ಬಾಲಕಿ, ಇದೀಗ ಮತ್ತೊಂದು ವಿಡಿಯೋ ಮೂಲಕ ಮದ್ಯ ಮಾರಾಟ ಬಂದ್ ಮಾಡುವಂತೆ ಬಾಲಕಿ ಆಗ್ರಹಿಸಿದ್ದಾಳೆ. 

ಮದ್ಯ ಆರಂಭಿಸಿದ್ದಕ್ಕೆ ಕೊಲೆ, ಜಗಳ ಆಗುತ್ತಿವೆ ಎಂದು ಮದ್ಯ ಮತ್ತೆ ಆರಂಭಿಸಿದ್ದರಿಂದ ಆಗುತ್ತಿರುವ ಸಮಸ್ಯೆಗಳನ್ನ ಬಾಲಕಿ ಎಳೆಎಳೆಯಾಗಿ ತೆರೆದಿಟ್ಟಿದ್ದಾಳೆ.  ಮದ್ಯ ಬಂದ್ ಮಾಡದಿದ್ದರೆ ನಾಳೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಬಾಲಕಿ ಎಚ್ಚರಿಕೆ ಕೂಡ ನೀಡಿದ್ದಾಳೆ.