ಮಂಡ್ಯ(ಫೆ.28): ಅಡುಗೆ ವಿಚಾರಕ್ಕೆ ಸಂಬಂಧಿಸಿ 14 ವರ್ಷದಿಂದ ಜೊತೆಗಿದ್ದ ಪತ್ನಿಗೇ ಬೆಂಕಿ ಹಚ್ಚಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಅಡುಗೆ ವಿಚಾರಕ್ಕೆ ಜಗಳ, ಪತ್ನಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.

ಅಡುಗೆ ವಿಚಾರಕ್ಕೆ ಜಗಳ ನಡೆದು ಕ್ರೂರ ಗಂಡ ಪತ್ನಿಗೆ ಸೀಮೆ ಎಣ್ಣೆ ಸುರಿದು ಸುಡಲು ಮುಂದಾಗಿದ್ದಾನೆ. ಹೆಂಡತಿಗೆ ಬೆಂಕಿ ಹಚ್ಚಿ ರಾತ್ರಿಯೆಲ್ಲಾ ಮನೆಯಲ್ಲೇ ಇರಿಸಿಕೊಂಡು ಯಾರಿಗೂ ಹೇಳದಂತೆ ಪತ್ನಿಯನ್ನು ಹೆದರಿಸಿದ್ದ.

ಗಂಡನ ಕುಟುಂಬಸ್ಥರ ಕೊಲೆಗೈದ ಸೈನೆಡ್ ಸೊಸೆ ಆತ್ಮಹತ್ಯೆ?

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಳಕವಾಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಹದೇವಸ್ವಾಮಿ ಎಂಬಾತ ಪತ್ನಿ ಗೀತಾ‌ಳನ್ನು ಕೊಲ್ಲಲು ಯತ್ನಿಸಿದ್ದಾನೆ. ಗುರುವಾರ ರಾತ್ರಿ ಅಡುಗೆ ವಿಚಾರಕ್ಕೆ ಜಗಳ ತೆಗೆದುನಂತರ ಬೆಂಕಿ ಹಚ್ಚಿದ್ದಾನೆ.

ಗಂಡನ ದುಷ್ಕೃತ್ಯದಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಮಹಿಳೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. 14ವರ್ಷದ ಹಿಂದೆ ಗೀತಾ ಮಹದೇವಸ್ವಾಮಿ ಮದುವೆಯಾಗಿತ್ತು. ಇತ್ತೀಚೆಗೆ ಸಂಸಾರದಲ್ಲಿ ಪದೇ ಪದೇ ಜಗಳವಾಗ್ತಿತ್ತು ಎಂದು ಹೇಳಲಾಗ್ತಿದೆ.