Asianet Suvarna News Asianet Suvarna News

ಗಂಡನ ಕುಟುಂಬಸ್ಥರ ಕೊಲೆಗೈದ ಸೈನೆಡ್ ಸೊಸೆ ಆತ್ಮಹತ್ಯೆ?

ಗಂಡನ ಕುಟುಂಬಸ್ಥರನ್ನು ಸೈನೆಡ್‌ ಹಾಕಿ ಕೊಂದಿದ್ದ ಆರೋಪಿ ಆತ್ಮಹತ್ಯೆಗೆ ಯತ್ನ| 2019ರ ಅಕ್ಟೋಬರ್‌ನಲ್ಲಿ ಬಂಧನವಾದ ಬಳಿಕ ನ್ಯಾಯಾಂಗ ಬಂಧನದಲ್ಲಿರುವ ಜಾಲಿ ಜೋಸೆಫ್

Kerala cyanide killer Jolly attempts suicide in jail
Author
Bangalore, First Published Feb 28, 2020, 12:12 PM IST
  • Facebook
  • Twitter
  • Whatsapp

ಕಲ್ಲಿಕೋಟೆ[ಫೆ.28]: ಆಹಾರದಲ್ಲಿ ಸೈನೆಡ್‌ ಬೆರಸಿ ಗಂಡ ಹಾಗೂ ಆತನ ಕುಟುಂಬ ಸದಸ್ಯರನ್ನು ಕೊಲೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿ ಜಾಲಿ ಜೋಸೆಫ್‌ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

2019ರ ಅಕ್ಟೋಬರ್‌ನಲ್ಲಿ ಬಂಧನವಾದ ಬಳಿಕ ನ್ಯಾಯಾಂಗ ಬಂಧನದಲ್ಲಿರುವ ಈಕೆಯನ್ನು ಕೇರಳದ ಕಲ್ಲಿಕೋಟೆ ಜಿಲ್ಲೆಯ ಜೈಲಿನಲ್ಲಿಡಲಾಗಿದೆ. ಆದರೆ, ಗುರುವಾರದಂದು ಚೂಪಾದ ಆಯುಧದಿಂದ ಕೈಯ ಮಣಿಕಟ್ಟಿನ ಭಾಗದಲ್ಲಿ ಕೊಯ್ದುಕೊಂಡಿದ್ದಾಳೆ. ಈ ಸಂದರ್ಭದಲ್ಲಿ ಆಕೆಯನ್ನು ಕೂಡಲೇ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ]

ಅಲ್ಲದೆ, ಚೂಪಾದ ಆಯುಧ ಆಕೆಗೆ ಹೇಗೆ ಲಭ್ಯವಾಯಿತು ಎಂಬುದರ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಸೈನೈಡ್‌ ಸೊಸೆ’ಗೆ ಕೇರಳದಲ್ಲಿ 6 ಜನ ಬಲಿ!: ಏನಿದು ಪ್ರಕರಣ?:

ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದ ಪಿ. ಟಾಮ್‌ ಥಾಮಸ್‌ (66), ಅವರ ಪತ್ನಿ ಅಣ್ಣಮ್ಮ (57), ಪುತ್ರ ರಾಯ್‌ ಥಾಮಸ್‌ (40), ಟಾಮ್‌ ಅವರ ಸೋದರನ ಸೊಸೆ ಸಿಲಿ ಶಾಜು (44), ಆಕೆಯ 2 ವರ್ಷದ ಮಗಳು ಆಲ್ಪೈನ್‌, ಅಣ್ಣಮ್ಮ ಸೋದರ ಮ್ಯಾಥ್ಯೂ ಮಂಜದಿಯಿಲ್‌ (68) ಅವರು 2002ರಿಂದ 2016ರ ನಡುವೆ ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದರು. ಈ ಎಲ್ಲರ ಸಾವಿಗೆ ಸಾಕ್ಷಿಯಾಗಿದ್ದವಳು ರಾಯ್‌ ಥಾಮಸ್‌ ಅವರ ಪತ್ನಿ ಜಾಲಿ ಥಾಮಸ್‌.

ಇತ್ತೀಚೆಗೆ ಈಕೆ ಕುಟುಂಬದ ಆಸ್ತಿಯೊಂದನ್ನು ಕಬಳಿಸಲು ನಕಲಿ ಉಯಿಲೊಂದನ್ನು ಮಾಡಿಸಿದ್ದಳು. ಇದು ಅಮೆರಿಕದಲ್ಲಿ ನೆಲೆಸಿರುವ ರಾಯ್‌ ಥಾಮಸ್‌ ಅವರ ಸೋದರ ರೋಜೋ ಅವರಿಗೆ ಗೊತ್ತಾಗಿತ್ತು. ಅವರು ಪೊಲೀಸರಿಗೆ ದೂರು ನೀಡಿದ್ದರು. ಆಗ ಪೊಲೀಸರಿಗೆ ಅನುಮಾನ ಮೂಡಲು ಆರಂಭಿಸಿತು. ಪತ್ನಿ ನಿಧನಾನಂತರ ಜಾಲಿ ಥಾಮಸ್‌ ಮೃತ ಸಿಲಿ ಶಾಜು ಅವರ ಪತಿ ಶಾಜು ಸ್ಕಾರಿಯಾ ಅವರನ್ನು ವರಿಸಿದ್ದಳು. ಜತೆಗೆ ನಕಲಿ ಉಯಿಲು ಮಾಡಿದ್ದಳು. ಪೊಲೀಸರು ಆಳಕ್ಕಿಳಿದಾಗ ಹೊಸ ಹೊಸ ಸಂಗತಿಗಳು ಬೆಳಕಿಗೆ ಬಂದವು.

ಜಾಲಿ ಥಾಮಸ್‌ ವಿಚಾರಣೆಗೆ ಕರೆಸಿದ ಪೊಲೀಸರು ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಿದರು. ಆಕೆ ನಿರಾಕರಿಸಿದಾಗ ಮೃತದೇಹಗಳನ್ನು ಹೊರತೆಗೆದು ಪರೀಕ್ಷೆಗೊಳಪಡಿಸಲು ನಿರ್ಧರಿಸಿದರು. ಅದರಂತೆ ಶುಕ್ರವಾರ ಎಲ್ಲ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಮಂಗಳೂರು ನ್ಯಾಯಾಲಯದಿಂದ ಸೈಕೋ ಕಿಲ್ಲರ್ ಗೆ ಮರಣ ದಂಡನೆ

ಪೊಲೀಸರಿಗೆ ಜಾಲಿ ಮೇಲೆ ಅನುಮಾನ ಮೂಡಲು ಮತ್ತೊಂದು ಕಾರಣ ಏನೆಂದರೆ, ಆಕೆಯ ಪತಿ 2011ರಲ್ಲಿ ಊಟ ಸೇವನೆ ಬಳಿಕ ನಿಧನರಾಗಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಅವರನ್ನು ಆ ಸಂದರ್ಭ ಪರಿಶೀಲನೆಗೆ ಒಳಪಡಿಸಿದಾಗ ಅವರ ದೇಹದಲ್ಲಿ ವಿಷ ಪತ್ತೆಯಾಗಿತ್ತು. ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಭಾವನೆ ಕುಟುಂಬದಲ್ಲಿ ಮೂಡಿತ್ತು. ಕುಟುಂಬದ ಮರಾರ‍ಯದೆ ಹಾಳಾಗುತ್ತದೆ ಎಂಬ ಕಾರಣ ನೀಡಿ ರಾಯ್‌ ಅವರದ್ದು ಹೃದಯಾಘಾತ ಎಂದು ಬಿಂಬಿಸಲಾಗಿತ್ತು.

ಒಟ್ಟಿನಲ್ಲಿ ಇಡೀ ಪ್ರಕರಣದಲ್ಲಿ ಜಾಲಿ ಥಾಮಸ್‌ ಕೈವಾಡವಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಆಕೆ ಹಾಗೂ ಆಕೆಯ ಎರಡನೇ ಪತಿ ಮತ್ತು ಸೈನೈಡ್‌ ಪೂರೈಸಿದ್ದಾನೆ ಎನ್ನಲಾದ ಬಂಧುವನ್ನು ಪೊಲೀಸರು ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಜಾಲಿ ಥಾಮಸ್‌ ಎಂಬ ಸೈನೈಡ್‌ ಸೊಸೆಯ ಹಣೆಬರಹ ನಿರ್ಧಾರವಾಗಲಿದೆ ಎನ್ನಲಾಗುತ್ತಿದೆ.

Follow Us:
Download App:
  • android
  • ios