ಕಾರವಾರ(ಮೇ 10): ತಾಲೂಕಿನ ಬೋಳ್ವೆ ಬಳಿ ಕಾಳಿನದಿಯಲ್ಲಿ ಶವವಾಗಿ ಸಿಕ್ಕಿದ್ದ ಅನೋಜ್‌ ನಾಯ್ಕ ಕೊಲೆ ಎಂದು ತನಿಖೆಯಿಂದ ಸಾಬೀತಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಮೃತನ ಸ್ನೇಹಿತರಾದ ಸೂರಜ್‌ ಬಾಂದೇಕ ಹಿಂದುವಾಡ, ಸಾಗರ ಉಳಗಾ, ವಿನಯ್‌ ನಾಯ್ಕ ಹಿಂದೂವಾಡ, ರೂಪೇಶ ಬಾಂದೇಕರ್‌ ಹಿಂದೂವಾಡ ಆರೋಪಿತರಾಗಿದ್ದು, ಮೇ 22ವರೆಗೆ ನ್ಯಾಯಾಂಗ ಬಂಧನವಾಗಿದೆ.

ನಡೆದಿದ್ದೇನು?

ಅನೋಜ್‌ ಕಳೆದ ಬುಧವಾರ ರಾತ್ರಿ 4 ಜನ ಸ್ನೇಹಿತರೊಂದಿಗೆ ತಾಲೂಕಿನ ಇರ್ಫಾಗೆ ಬಳಿ ಮೀನು ಹಿಡಿಯಲು ಹೋಗಿದ್ದನು. ರಾತ್ರಿ ಅಲ್ಲಿಯೇ ಮಲಗಿದ್ದಾರೆ. ಮಧ್ಯರಾತ್ರಿ ಸುಮಾರು 2 ಗಂಟೆಯ ವೇಳೆಗೆ ಮಳೆ ಜಿನುಗಿದಂತಾಗಿ ಐವರಲ್ಲಿ ಒಬ್ಬ ಎಚ್ಚರಗೊಂಡಾಗ ಅನೋಜ್‌ ಸ್ಥಳದಲ್ಲಿ ಇರಲಿಲ್ಲ. ಶುಕ್ರವಾರ ಬೊಳ್ವೆ ಬಳಿ ಕಾಳಿ ನದಿಯಲ್ಲಿ ಆತನ ಕಳೆಬರ ಸಿಕ್ಕಿತ್ತು.

ತಿರುಚಿದ ಬಿಎಸ್‌ವೈ-ಶೋಭಾ ಫೋಟೋ ಅಪ್ಲೋಡ್ ಮಾಡಿದ ಜಿಡಿಎಸ್ ಮುಖಂಡ ಸೆರೆ

ಬಳಿಕ ಮಲ್ಲಾಪುರ ಪೊಲೀಸ್‌ ಠಾಣೆಗೆ ಸಾವಿನ ಬಗ್ಗೆ ಅನುಮಾನವಿದೆ ಎಂದು ಪಾಲಕರು ದೂರು ನೀಡಿದ್ದು, ಆತನ ಜತಗಿದ್ದ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸ್ನೇಹಿತರಲ್ಲಿ ಒಬ್ಬನಾದ ಸೂರಜ್‌ನ ಸಹೋದರಿ ಜತೆ ಅನæೂೕಜ್‌ ಓಡಾಡುತ್ತಿದ್ದನು. ಅವಳೊಂದಿಗೆ ಆತ್ಮೀಯತೆಯಿಂದ ಇರುತ್ತಿದ್ದನು. ಹೀಗಾಗಿ ಅನೋಜ್‌ ಮತ್ತು ತನ್ನ ಸಹೋದರಿ ಪ್ರೀತಿಸುತ್ತಿದ್ದಾರೆ ಎಂದು ತಿಳಿದ ಸೂರಜ್‌ ತನ್ನ ಸ್ನೇಹಿತನ ಕೊಲೆಗೆ ಸಂಚು ರೂಪಿಸಿದ್ದನು.

ಫೇಸ್‌ಬುಕ್‌ನಲ್ಲಿ ಮೋದಿ, ಶಾ ಅವಹೇಳನ: ಇಬ್ಬರ ಬಂಧನ

ಅದರಂತೆ ದಿನ ನಿಗದಿ ಮಾಡಿ ಇರ್ಫಾಗೆ ಬಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿ ನದಿಗೆ ಎಸೆದಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.