ಮಂಗಳೂರು(ಏ.15) : ಕೊರೋನಾ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಷಾ ಅವರನ್ನು ಫೇಸ್‌ಬುಕ್‌ ಪೇಜ್‌ನಲ್ಲಿ ಅವಹೇಳನ ಮಾಡಿದ ತಂಡದ ಇಬ್ಬರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಮುಹಮ್ಮದ್‌ ಇಲ್ಯಾಸ್‌ ಮತ್ತು ಅಬ್ದುಲ್‌ ಬಶೀರ್‌ ಬಂಧಿತರು. ಮೈಕಾಲ್ತೊ ಬಿಸಯಾ ಎನ್ನುವ ಫೇಸ್‌ಬುಕ್‌ ಪೇಜ್‌ನಲ್ಲಿ ಇವರಿಬ್ಬರು ಮೋದಿ ಮತ್ತು ಶಾ ಅವರನ್ನು ಅವಹೇಳನಕಾರಿಯಾಗಿ ಬಿಂಬಿಸಿ ಪೋಸ್ವ್‌ಗಳನ್ನು ಹಾಕುತ್ತಿದ್ದರು.

ಲಾಕ್‌ಡೌನ್‌ ಎಫೆಕ್ಟ್‌: ಊಟ ಸಿಗಲ್ಲ, ಕುಡಿಯಾಕ್‌ ನೀರಿಲ್ಲ, ಶೌಚಕ್ಕ ಜಾಗ ಇಲ್ಲ..!

ಇವರೊಂದಿಗೆ ಇನ್ನೂ ಅನೇಕರು ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕುರಿತು ಮಾಹಿತಿ ಲಭಿಸಿದ್ದು, ಅವರ ಪತ್ತೆಗೆ ಜಾಲ ಬೀಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ಬಗ್ಗೆಯೂ ನಿಗಾ ಇಡಲಾಗಿದೆ.