ನಂಜನಗೂಡು(ಜೂ.09): ನಂಜನಗೂಡಿನ ನೀಲಕಂಠದ ನಗರದ ವ್ಯಕ್ತಿಯೊರ್ವನಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಕೊರೋನಾ ಮುಕ್ತ ಎಂದು ನಿರಾಳವಾಗಿದ್ದ ಜನತೆಗೆ ಮತ್ತೆ ಆತಂಕ ಎದುರಾಗಿದೆ.

ಉತ್ತರ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ 22 ವರ್ಷದ ವಿದ್ಯಾರ್ಥಿಗೆ ಸೋಂಕು ದೃಢಪಟ್ಟಿದೆ. ಈತ ದೆಹಲಿ ಮೂಲಕವಾಗಿ ಬೆಂಗಳೂರಿಗೆ ಬಂದಿದ್ದಾನೆ. ಅಲ್ಲಿ 7 ದಿನಗಳ ಕಾಲ ಫೆಸಿಲಿಟಿ ಕ್ವಾರಂಟೈನ್‌ನಲ್ಲಿರಿಸಲಾಗಿತ್ತು. ವರದಿ ನೆಗೆಟಿವ್‌ ಎಂದು ಬಂದ ಕಾರಣ ಜೂ.1 ರಂದು ನಂಜನಗೂಡಿಗೆ ಬಂದು ಹೋಂ ರಂಟೈನ್‌ಲ್ಲಿರಸಲಾಗಿತ್ತು.

ಡಾ.ರಾಜ್‌, ವಿಷ್ಣು, ಅಂಬಿ ಹೆಸರಿನಲ್ಲಿ ಪ್ರಾಣಿಗಳ ದತ್ತು

ಭಾನುವಾರ ಸಂಜೆ ಮತ್ತೆ ಆತನನ್ನು ಪರೀಕ್ಷೆಗೆ ಒಳಪಡಿಸಿದ್ದು, ವರದಿಯಲ್ಲಿ ಪಾಸಿಟಿವ್‌ ಎಂದು ಬಂದ ಹಿನ್ನೆಲೆ ಆತನನ್ನು ಮೈಸೂರಿನ ಕೊರೋನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮನೆಯವರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಸೋಂಕು ದೃಢಪಟ್ಟಹಿನ್ನೆಲೆ ನಗರಸಭಾ ಆಯುಕ್ತ ಕರಿಬಸವಯ್ಯ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸೋಂಕಿತ ವಾಸವಾಗಿದ್ದ ಬೀದಿಯನ್ನು ಸೀಲ್‌ಡೌನ್‌ ಮಾಡಿದ್ದಾರೆ.

ಬೆಂಗಳೂರು ಪೊಲೀಸ್ ಪೇದೆಗೆ ಕೊರೋನಾ ಲಕ್ಷಣ ಇಲ್ಲದಿದ್ರೂ ಟೆಸ್ಟ್‌ನಲ್ಲಿ ಪಾಸಿಟಿವ್..!

ನಂಜನಗೂಡಿನ ಕೊರೋನಾ ಉಸ್ತುವಾರಿ ಡಾ. ಅಶ್ವಿನ್‌, ನಗರಸಭಾ ಆರೋಗ್ಯಾಧಿಕಾರಿ ಅಶೋಕ್‌, ಎಸ್‌ಐ ರವಿಕುಮಾರ್‌ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.