ತುಮಕೂರು (ನ.06):  ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮಹಮದ್‌ ಐಮಾನ್‌ಗೆ ಅಧಿಕ ಜಿಲ್ಲಾ ಸತ್ರ ವಿಶೇಷ ನ್ಯಾಯಾಲಯವು ಪೋಕ್ಸೊ ಕಾಯ್ದೆ ಕಲಂ 6ರಡಿ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

 ಹಾಗೂ 20 ಸಾವಿರ ರು.ದಂಡ ಮತ್ತು ಕಲಂ 366 ಐಪಿಸಿ ಅಡಿ 5 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದೆ.

ಪಕ್ಕದ ಮನೆಯಲ್ಲಿ ಪ್ರೇಮಾಂಕುರ : 14ರ ಬಾಲಕನಿಂದ 12ರ ಬಾಲಕಿ ಗರ್ಭಿ​ಣಿ! ..

 ಅಧಿಕ ಜಿಲ್ಲಾ ಸತ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೃಷ್ಣಯ್ಯ ಈ ತೀರ್ಪು ನೀಡಿದ್ದು, ತಿಲಕ್‌ ಪಾರ್ಕ್ ಪೊಲೀಸ್‌ ಠಾಣಾ ತನಿಖಾಧಿಕಾರಿ ರಾಘವೇಂದ್ರ ಸಿಪಿಐ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸರ್ಕಾರದ ವಿಶೇಷ ಅಭಿಯೋಜಕಿ ಗಾಯತ್ರಿ ರಾಜು ಸರ್ಕಾರದ ಪರ ವಾದ ಮಂಡಿಸಿದ್ದರು.