ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿ ಕೊಲೆಗೈದಿದ್ದ ಪತಿಗೆ ಜೀವಾವಧಿ ಜೈಲು
ಅನೈತಿಕ ಸಂಬಂಧ ಪ್ರಶ್ನಿಸಿದ್ದ ಪತ್ನಿಯನ್ನು ತನಗೆ ಅಡ್ಡಿಯಾಗಿದ್ದಾಳೆಂದು ಗಂಡನೇ ಕೊಂದು ಹಾಕಿದ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ (ಡಿ.07): ತನ್ನ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಪತಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ಮೂರನೇ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಎಸ್.ನಟರಾಜ್ ಮಹತ್ವದ ತೀರ್ಪು ನೀಡಿ ಆದೇಶಿಸಿದ್ದಾರೆ.
ಗೌರಿಬಿದನೂರು ತಾಲೂಕಿನ ಗೋಟಾಲಕುಂಟೆ ಗ್ರಾಮದ ಅಶ್ವತ್ಥಪ್ಪ(48) ಜೀವಾವಧಿ ಶಿಕ್ಷೆ ಗುರಿಯಾದ ವ್ಯಕ್ತಿ. ಆರೋಪಿ ಬೇರೊಬ್ಬ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದು. ಈ ಬಗ್ಗೆ ಆಗಾಗ ಪತ್ನಿ ರಾಧಮ್ಮ ಪ್ರಶ್ನಿಸಿ ಜಗಳ ಮಾಡುತ್ತಿದ್ದಳು. ಇದರಿಂದ ತನ್ನ ಅನೈತಿಕ ಸಂಬಂದಕ್ಕೆ ಪತ್ನಿ ಅಡ್ಡಿಯಾಗಿದ್ದಾಳೆಂದು ಹೇಳಿ ಆಶ್ವತ್ಥಪ್ಪ ಮಚ್ಚಿನಿಂದ ಕೊಚ್ಚಿ ಪತ್ನಿಯನ್ನು ಕೊಲೆ ಮಾಡಿದ್ದು ಇದನ್ನು ಪುತ್ರ ಭರತ್ ನೋಡಿ ಗೌರಿಬಿದನೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ಅಮ್ಮನನ್ನು ನೋಡಲು ಬಂದ ಬಾಲಕಿ ಮೇಲೆ ಆಸ್ಪತ್ರೆ ವಾರ್ಡ್ ಬಾಯ್-ಗೆಳೆಯರಿಂದ ಗ್ಯಾಂಗ್ ರೇಪ್ ...
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ವಿರುದ್ಧ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದ್ದರು. ಪ್ರಕರಣ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದು 3ನೇ ಜಿಲ್ಲಾ ಅಪರ ಹಾಗೂ ಸತ್ರ ನ್ಯಾಯಾಧೀಶ ಎಸ್.ನಟರಾಜ್ ಪ್ರಕರಣದ ಬಗ್ಗೆ ವಾದ, ವಿವಾರ ಆಲಿಸಿ ಆರೋಪಿ ಅಶ್ವತ್ಥಪ್ಪ ವಿರುದ್ಧ ಸಾಕ್ಷ್ಯಧಾರಗಳು ಸಾಭೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೇ .25 ಸಾವಿರ ದಂಡ ವಿಧಿಸಿದ್ದು ದಂಡ ಪಾವತಿಸಲು ಸಾಧ್ಯವಾಗದೇ ಹೋದರೆ ಹೆಚ್ಚುವರಿಯಾಗಿ 6 ತಿಂಗಳ ಸಜೆ ವಿಧಿಸಿದ್ದಾರೆ. ಸಂತ್ರಸ್ತೆಯ ಪರ ಸರ್ಕಾರಿ ಅಭಿಯೋಜಕಿ ಅರುಣಾಕ್ಷಿ ವಾದ ಮಂಡಿಸಿದ್ದರು.