ಶಿವಮೊಗ್ಗ (ಡಿ.07):  ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿಯ ಜೊತೆಗಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಆಸ್ಪತ್ರೆಯ ವಾರ್ಡ್‌ ಬಾಯ್‌ ಮತ್ತು ಆತನ ಸ್ನೇಹಿತರು ಶನಿವಾರ ರಾತ್ರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.

ಆಸ್ಪತ್ರೆಯ ವಾರ್ಡ್‌ಬಾಯ್‌ ಮನೋಜ್‌ ಬಂಧಿತನಾಗಿರುವ ಆರೋಪಿ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ನಗರದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬಾಲಕಿಯ ತಾಯಿ ಕೋವಿಡ್‌ಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. ತಾಯಿಯನ್ನು ನೋಡಿಕೊಳ್ಳಲು ಬಾಲಕಿಯು ಆಸ್ಪತ್ರೆಯಲ್ಲಿದ್ದಳು. ಈ ಸಂದರ್ಭದಲ್ಲಿ ಬಾಲಕಿಗೆ ವಾರ್ಡ್‌ಬಾಯ್‌ ಆಗಿದ್ದ ಮನೋಜ್‌ನ ಪರಿಚಯವಾಗಿದೆ.

ಮಗಳು ಕಣ್ಣಾರೆ ನೋಡಿದಳು ಅಪ್ಪನ ರಾಸಲೀಲೆ : ಆಮೇಲಾಗಿದ್ದು ದುರಂತ..!

ನಗರದಲ್ಲಿ ಬಜರಂಗದಳದ ಕಾರ್ಯಕರ್ತರೊಬ್ಬರ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ 144 ಸೆಕ್ಷನ್‌ ಜಾರಿಯಾಗಿದ್ದು, ಹೋಟೆಲ್‌ಗಳು ಓಪನ್‌ ಇರಲಿಲ್ಲ. ಈ ಸಂದರ್ಭವನ್ನು ಬಳಸಿಕೊಂಡು ಮನೋಜ್‌ ಬಾಲಕಿಗೆ ನಗರದಲ್ಲಿ ಹೋಟೆಲ್‌ಗಳು ಬಂದ್‌ ಇರುವುದರಿಂದ ಹೊರಗಡೆ ಊಟ ಕೊಡಿಸುವುದಾಗಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. 

ಈ ವೇಳೆ ಮನೋಜ್‌, ಆತನ ಸ್ನೇಹಿತರಾದ ಪ್ರಜ್ವಲ್‌, ವಿನಯ್‌ ಸೇರಿ ಮತ್ತೊಬ್ಬ ವ್ಯಕ್ತಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಬಾಲಕಿ ತಾಯಿಯ ಬಳಿ ದೂರಿದ್ದಾಳೆ. ಇದನ್ನು ಆಸ್ಪತ್ರೆಯ ಗಮನಕ್ಕೆ ತಂದಿದ್ದು, ಆಸ್ಪತ್ರೆ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.