ಕಾರವಾರ(ಜೂ. 04): ಕಾರವಾರ ಮೂಲದ ವ್ಯಕ್ತಿ ಕುವೈತ್‌ನಲ್ಲಿ ಕೋವಿಡ್‌-19 ಸೋಂಕು ತಗುಲಿ ಮಂಗಳವಾರ ಮೃತಪಟ್ಟಿದ್ದಾರೆ. ತಾಲೂಕಿನ ಸದಾಶಿವಗಡದ ಸುಶಾಂತ ಕಡವಾಡಕರ್‌ (40) ಮೃತಪಟ್ಟವರು.

ಖಾಸಗಿ ಹೋಟೆಲ್‌ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರಿಗೆ ಜ್ವರ ಬಂದಿತ್ತು. ಒಂದೆರಡು ದಿನ ಕೆಲಸಕ್ಕೆ ತೆರಳದೇ ಮನೆಯಲ್ಲೇ ಉಳಿದುಕೊಂಡಿದ್ದ ಅವರಿಗೆ ಉಸಿರಾಟದ ತೊಂದರೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೋವಿಡ್‌-19 ಪಾಸಿಟಿವ್‌ ಬಂದಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ದೇಶದಲ್ಲೀಗ ಸೋಂಕಿತರಿಗಿಂತ ಚೇತರಿಕೆ ಆದವರ ಪ್ರಮಾಣ ಅಧಿಕ!

ವರ್ಷದ ಹಿಂದೆ ಕುವೈತ್‌ಗೆ ತೆರಳಿದ್ದರು. ಒಬ್ಬ ಸಹೋದರ ಇದ್ದಾನೆ. ಏ. 1ರಂದು ಸಹೋದರ ಸೂರಜ್‌ ಜನ್ಮದಿನಕ್ಕೆ ಶುಭ ಕೋರಿದ್ದರು. ನಂತರ ಏ. 3ರಂದು ಸುಶಾಂತ ಜನ್ಮದಿನವಿತ್ತು. ಸೂರಜ್‌ ಶುಭ ಕೋರಿದರೂ ಪ್ರತಿಕ್ರಿಯೆ ಬಂದಿರಲಿಲ್ಲ. ಬಳಿಕ ಸಹೋದರರಿಗೆ ಸಂಪರ್ಕ ಇರಲಿಲ್ಲ. ಕೊರೋನಾದಿಂದ ಮೃತಪಟ್ಟಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಬಂದಿಲ್ಲ. ಮೃತನ ಸ್ನೇಹಿತರು ಕುವೈತ್‌ನಲ್ಲೇ ಅಂತ್ಯಕ್ರಿಯೆ ನಡೆಸಿದ್ದಾರೆ.

ಹೆಚ್ಚುತ್ತಿರುವ ಕೊರೋನಾ ಕೇಸ್‌: ಜೂ.30ರ ವರೆಗೂ ಲಾಕ್‌ಡೌನ್‌ ಜಾರಿ

ಕೋವಿಡ್‌-19 ಸೋಂಕಿನಿಂದ ಸಹೋದರ ಸುಶಾಂತ ಮೃತಪಟ್ಟಿರುವುದು ಆತನ ಸ್ನೇಹಿತನ ಮೂಲಕ ನನಗೆ ತಿಳಿಯಿತು. ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದು ಮೃತ ಸುಶಾಂತ ಸಹೋದರ ಸೂರಜ್‌ ಕಡವಾಡಕರ್‌ ತಿಳಿಸಿದ್ದಾರೆ.