ಮೈಸೂರು(ಮಾ.05): ಸರ್ವಧರ್ಮ ಸಮಭಾವ, ಗೋರಕ್ಷಣೆ, ವಿಶ್ವಶಾಂತಿ ಉದ್ದೇಶದಿಂದ ಸೈಕಲ್‌ನಲ್ಲಿ ಭಾರತಯಾತ್ರೆ ಕೈಗೊಂಡಿರುವ ಹಾಸನದ ನಾಗರಾಜಗೌಡ ಹೋದಲೆಲ್ಲ ಜನಜಾಗೃತಿ ಮೂಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಬಳಿ ಪತ್ರಿಕಾಪ್ರತಿನಿಧಿಯ ಜೊತೆ ಮಾತಿಗೆ ಸಿಕ್ಕ ನಾಗರಾಜಗೌಡರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ನಾಗರಾಜಗೌಡರ ಸ್ವಂತ ಊರು ಹಾಸನ, ಇವರ ತಂದೆ ಅಗರಭತ್ತಿ ವ್ಯಾಪಾರಿಯಾಗಿದ್ದರು. ಇವರ 8 ಜನ ಮಕ್ಕಳಲ್ಲಿ ಇವರು 5 ನೇ ಅವರು ಅವಿವಾಹಿತರಾಗಿರುವ ನಾಗರಾಜು. ಅಗರಭತ್ತಿ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾಗ ಗಾಂಧಿವಾದಿ ಸುಬ್ಬರಾವ್‌ ಹಾಸನದಲ್ಲಿ ಯುವಕರ ಶಿಬಿರ ನಡೆಸುತ್ತಿದ್ದರು. ಅಲ್ಲಿಗೆ ಹೋದ ನಾನು ಅಂತಾರಾಷ್ಟ್ರೀಯ ಯುವಕರನ್ನು ಶಿಬಿರದಲ್ಲಿ ನೋಡಿ ನನಗೂ ಆಸಕ್ತಿ ಮೂಡಿತು.

ಮಹಿಳಾ ಅಭಿವೃದ್ಧಿ ನೌಕರನಿಂದಲೇ ಪತ್ನಿಗೆ ಕಿರುಕುಳ, ಗೃಹಿಣಿ ಆತ್ಮಹತ್ಯೆ ಯತ್ನ

ಮೊದಲಿಂದಲೂ ಬಸವಣ್ಣ, ಅಕ್ಕಮಹದೇವಿ, ಗೌತಮಬುದ್ದರ ತತ್ವಗಳಿಂದ ಪ್ರೇರಿತನಾಗಿದ್ದ ನಾನು ಸುಬ್ಬರಾವ್‌ರವರ ಆಪ್ತಕಾರ್ಯದರ್ಶಿಯ ಸಂಪರ್ಕ ಪಡೆದುಕೊಂಡು ಉತ್ತರ ಪ್ರದೇಶದ ಖುಷಿನಗರದಲ್ಲಿ ನಡೆಯುವ ಶಿಬಿರದಲ್ಲಿ ಪಾಲ್ಗೊಂಡೆ ಅಲ್ಲಿಂದ ನನಗೆ ಏನಾದರೊಂದು ಸಾಧನೆ ಮಾಡಬೇಕೆಂಬ ಛಲದಿಂದ 2017ರ ಡಿ. 3ರಿಂದ ವಿಶ್ವಶಾಂತಿ, ಸರ್ವಧರ್ಮ ಸಮಭಾವ, ಗೋರಕ್ಷಣೆ, ಸನಾತನ ಧರ್ಮ ಜಾಗೃತಿ ದೃಷ್ಠಿಯಿಂದ ಸೈಕಲ್‌ನಲ್ಲಿ ಭಾರತಯಾತ್ರೆಯನ್ನು ಕೈಗೊಂಡೆ ವರ್ಷದಲ್ಲಿ ಮೂರು ತಿಂಗಳು ಮಳೆಗಾಲದಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಿದ್ದು, ಇನ್ನುಳಿದ 9 ತಿಂಗಳು ಜನಜಾಗೃತಿ ಮೂಡಿಸುತ್ತಾ ದಿನನಿತ್ಯ ಸುಮಾರು 100 ಕಿಮೀ ಕ್ರಮಿಸಿ ಜನಜಾಗೃತಿ ಮೂಡಿಸುತ್ತಾ ಸಾಗುತ್ತೇನೆ.

ನಾನು ದೇವಸ್ಥಾನ, ವಿವೇಕಾನಂದ ಆಶ್ರಮ ಸೇರಿದಂತೆ ಎಲ್ಲಿಂದರಲ್ಲಿ ಉಪಹಾರ ವ್ಯವಸ್ಥೆ ಇರುವ ಕಡೆ ಉಳಿದುಕೊಂಡು ಪ್ರಯಾಣ ಮುಂದುವರೆಸುತ್ತಿದ್ದೇನೆ, ಸೈಕಲ್‌ನಲ್ಲಿ ಒಂದು ಹುಂಡಿ ಇದ್ದು ಊಟ ಇಲ್ಲದ ಕಡೆ ಹುಂಡಿಯ ದಾನದ ಹಣದಿಂದ ಭೋಜನ ಸ್ವೀಕರಿಸುತ್ತೇನೆ ಎನ್ನುತ್ತಾರೆ.

ದೇವಾಲಯದಲ್ಲಿ ಡಿಸಿ, ಎಸ್ ಪಿ ಕಾವಲು : ಅಜ್ಞಾತ ಸ್ಥಳದಲ್ಲಿ ಕೋಣದ ಬಲಿ

ಈಗಾಗಲೇ ನಾನು 13 ರಾಜ್ಯಗಳನ್ನು ಸುತ್ತಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್‌, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿದ್ದೇನೆ, ಪಾಕಿಸ್ಥಾನದ ವಾಘಗಡಿಯವರೆವಿಗೂ ಸಂಚಾರ ನಡೆಸಿ ಈಗ ಕರ್ನಾಟಕ ರಾಜ್ಯದ ಯಾತ್ರೆಯಲ್ಲಿದ್ದೇನೆ ಎಂದರು.

ಪ್ರಯಾಣದಲ್ಲಿ ನನ್ನ ಅನುಭವಕ್ಕೆ ಬಂದ ವಿಷಯಗಳೆಂದರೆ ಗ್ರಾಮೀಣ ಜನರ ಬದುಕು ನಗರ ಸಂಪರ್ಕಗಳಿಂದ ಬದಲಾಗಿದ್ದು, ಎಲ್ಲರ ಬಳಿ ಮನೆಗೊಂದು ಬೈಕ್‌ ಇದೆ ಮನೆಗಳನ್ನು ಚೆನ್ನಾಗಿ ನಿರ್ಮಿಸಿಕೊಂಡಿದ್ದು, ಬಡತನ ಮಾಯವಾಗಿದೆ. ಕೆಲವೆಡೆ ಇನ್ನೂ ಗುಡಿಸಲಿಲ್ಲಿ ವಾಸಿಸುವ ಜನರನ್ನೂ ನೋಡಿದ್ದೇನೆ ತಮ್ಮ ಅನುಭವಗಳನ್ನು ಹಂಚಿಕೊಂಡರು.

#Newsin100Seconds I ಕ್ಷಣದ ಪ್ರಮುಖ ಸುದ್ದಿಗಳು

"