ಮೈಸೂರು(ಮಾ.07): ಕೆಂಡ ಹಾಯುವ ಆಚರಣೆಗಳು ಅಪಾಯಕಾರಿ. ಹುಣಸೂರಿನಲ್ಲಿ ಕೆಂಡ ಹಾಯುವಾಗ ವ್ಯಕ್ತಿ ಏಕಾಏಕಿ ಬಿದ್ದಿರುವ ಘಟನೆ ಮೈಸೂರಿನ ಹುಣಸೂರಿನಲ್ಲಿ ನಡೆದಿದೆ.

ಕೊಂಡೋತ್ಸವದ ವೇಳೆ ದುರಂತ ನಡೆದಿದ್ದು, ಕೆಂಡ ಹಾಯುವಾಗ ದೇಗುಲದ ಗುಡ್ಡಪ್ಪ ಏಕಾಏಕಿ ಬಿದ್ದಿದ್ದಾರೆ. ಹುಣಸೂರು ತಾಲೂಕಿನ ಗದ್ದಿಗೆಯಲ್ಲಿ ಘಟನೆ ನಡೆದಿದೆ. ಮಹದೇಶ್ವರ ಸ್ವಾಮಿ ದೇಗುಲದ ಗುಡ್ಡಪ್ಪ ಮಹದೇವಸ್ವಾಮಿಗೆ ಗಾಯವಾಗಿದೆ.

ನರಹಂತಕ ಚಿರತೆ ಗುಂಡಿಕ್ಕಿ ಕೊಲ್ಲಲು ಆದೇಶ

ಕೈ ಕಾಲಿಗೆ ಗಂಭೀರವಾದ ಸುಟ್ಟ ಗಾಯವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸಿದ್ಧ ಗದ್ದಿಗೆ ಮಠದಲ್ಲಿ ನಡೆಯುವ ಜಾತ್ರಾ ಮಹೋತ್ಸವದ ಕೊಂಡೋತ್ಸವದ ವೇಳೆ ಅವಘಡ ಸಂಭವಿಸಿದೆ. ಗುಡ್ಡಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಕೆ ಕಾಣುತ್ತಿದ್ದಾರೆ.

ಕೆಂಡ ಹಾಯುವಾಗ ಕೊನೆಯ ಹಂತದಲ್ಲಿ ಮಹದೇವಸ್ವಾಮಿ ಬಿದ್ದಿದ್ದಾರೆ. ಈ ವೇಳೆ ಸ್ಥಳೀಯರು ಮಹದೇವಸ್ವಾಮಿಯನ್ನು ರಕ್ಷಿಸಿದ್ದಾರೆ. ಬಿದ್ದ ಕೂಡಲೇ ಸ್ಥಳೀಯರು ಹಾಗೂ ಭಕ್ತರು ಮೇಲೆತ್ತಿದ್ದಾರೆ. ಇದರಿಂದ ಮಹದೇವಸ್ವಾಮಿ ಪ್ರಾಣ ಅಪಾಯದಿಂದ ಪಾರಾಗಿದ್ದಾರೆ.