ಕೋಲಾರ(ಸೆ.11): ರಾತ್ರಿ ಹೊತ್ತು ಎಣ್ಣೆ ಪಾರ್ಟಿ ಮಾಡೋದು ಕಾಮನ್. ಇದೀಗ ಹಾಡಹಗಲೇ, ಅದೂ ನಡು ರಸ್ತೆಯಲ್ಲೇ ಎಣ್ಣೆ ಪಾರ್ಟಿ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿದ್ರೂ ಕುಡುಕ ಮಹಾಶಯ ಮಾತ್ರ ಒಂದಿಷ್ಟೂ ವಿಚಲಿತನಾಗದೆ ರಸ್ತೆಯಲ್ಲೇ ಪಾರ್ಟಿ ಮಾಡ್ತಿದ್ದಾನೆ.

ಅನರ್ಹ ಶಾಸಕಗೆ KR ಪುರಂ BJP ಟಿಕೆಟ್ ಪಕ್ಕಾ ?

ಕೋಲಾರ ಜಿಲ್ಲೆ ಕೆಜಿಎಫ್ ನಗರದ ಪಾರಂಡಳ್ಳಿ ರಸ್ತೆಯಲ್ಲಿ ಘಟನೆ ನಡೆದಿದೆ. ವಾಹನಗಳು ರಭಸವಾಗಿ ಓಡಾಡುತ್ತಿದ್ದರೂ ಸಾವನ್ನೂ ಲೆಕ್ಕಿಸದೆ ರಸ್ತೆ ಮಧ್ಯೆ ಕುಳಿತು ಎಣ್ಣೆ ಪಾರ್ಟಿ ಮಾಡುತ್ತಿದ್ದಾನೆ. ಕಂಠ ಪೂರ್ತಿ ಕುಡಿದು ಫುಲ್ ಆವಾಜ್ ಹಾಕುತ್ತಿದ್ದು, ಪಾದಚಾರಿಗಳಿಗೂ ಕುಡುಕ ಮಹಾಶಯನ ರಂಪಾಟದಿಂದ ಕಿರಿಕಿರಿಯಾಗಿದೆ.

ಟೀವಿಲಿ ಬರೋ ಆಸೆ:

ಟಿವಿಯಲ್ಲಿ ಬರುವ ಆಸೆಯಿಂದ ಕುಡುಕ ಅವಾಂತರ ಮಾಡಿಕೊಂಡಿದ್ದು, ಮೈ ಮೇಲೆ ಲಾರಿ ಬಂದ್ರು ಡೋಂಟ್ ಕೇರ್ ಎಂದು ಕುಳಿತಿದ್ದಾನೆ. ಚಾಲಕರು ಕುಡುಕನನ್ನು ತಪ್ಪಿಸಿ ವಾಹನಗಳನ್ನು ಚಲಾಯಿಸಿದ್ದಾರೆ. 

ಕೋಲಾರ: ತಾವೇ ತಯಾರಿಸಿದ ಗಣೇಶ ವಿಸರ್ಜನೆಗೆ ತೆರಳಿದ್ದ 6 ಮಕ್ಕಳ ದುರ್ಮರಣ