ಪಾಂಡವಪುರ (ನ.19): ಬಸ್‌ನಲ್ಲಿ ಪ್ರಯಾಣ ಬೆಳೆಸಲು ಮುಂದಾದ ಅಪರಿಚಿತ ವ್ಯಕ್ತಿಯೋರ್ವ ಬಸ್‌ನಲ್ಲಿಯೇ ಕುಸಿದು ಸಾವನ್ನಪ್ಪಿರುವ ಘಟನೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬೆಳಗ್ಗೆ ನಡೆದಿದೆ. 

ಸುಮಾರು 50ರಿಂದ 55 ವರ್ಷದ ಅಪರಿಚಿತ ವ್ಯಕ್ತಿಯು ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಮಂಡ್ಯಕ್ಕೆ ತೆರಳುವ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಹತ್ತಿ ಕುಳಿತಿದ್ದ. 

ಮತ್ತೆ ಈ ಮಾರ್ಗದಲ್ಲಿ ಆರಂಭವಾಯ್ತು KSRTC ಬಸ್ ಸಂಚಾರ ...

ಬಸ್‌ ಕಂಡಕ್ಟರ್‌ ಟಿಕೆಟ್‌ ನೀಡಲು ಹತ್ತಿರ ಹೋದ ವೇಳೆ ಆ ವ್ಯಕ್ತಿ ಕುಸಿದು ಸಾವನ್ನಪ್ಪಿದ ಎನ್ನಲಾಗಿದೆ. ಈ ಅಪರಿಚಿತ ವ್ಯಕ್ತಿಯು ಮೈಮೇಲೆ ಮಾಸಲು ಬಿಳಿ ಬಣ್ಣದ ಅರ್ಧ ತೋಳಿನ ಶರಟು, ನೀಲಿ ಕಂದು ಬಣ್ಣದ ಚೌಕುಳಿ ಲುಂಗಿ ಧರಿಸಿದ್ದು ಬಿಳಿ ಗಡ್ಡ ಬಿಟ್ಟಿರುತ್ತಾನೆ.

ಅಪಚಿರಿತ ವ್ಯಕ್ತಿಯ ಶವವನ್ನು ಪಾಂಡವಪುರ ಉಪವಿಭಾಗೀಯ ಆಸ್ಪತ್ರೆ ಶವಾಗಾರದಲ್ಲಿರಿಸಿದ್ದು, ಯಾರಾದರೂ ವಾರಸುದಾರರು ಇದ್ದಲ್ಲಿ ಪಾಂಡವಪುರ ಪೊಲೀಸ್‌ ಠಾಣೆ-08236255132ನ್ನು ಸಂಪರ್ಕಿಸಬಹುದು.